ಅಧಿಕಾರಿಗಳಿಗೆ ದಿಗ್ಬಂಧನ, ಕಛೇರಿಗೆ ಬೀಗ ಹಾಕಿ ಪ್ರತಿಭಟನೆ
1 min readಅಧಿಕಾರಿಗಳಿಗೆ ದಿಗ್ಬಂಧನ, ಕಛೇರಿಗೆ ಬೀಗ ಹಾಕಿ ಪ್ರತಿಭಟನೆ
ಪರ್ಸಂಟೇಜ್ ನೀಡಿದವರಿಗೆ ಮಾತ್ರ ಗುತ್ತಿಗೆ ಆರೋಪ
ಎಲ್‌ಒಸಿಯನ್ನು 15 ಪರ್ಸೆಂಚ್‌ಗೆ ಮಾರಾಟ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಂಜನಗೂಡು ನಗರದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಕಛೇರಿಗೆ ಬೀಗ ಜಡಿದು ಗುತ್ತಿಗೆದಾರರು ಅಧಿಕಾರಿಗಳಿಗೆ ದಿಗ್ಬಂದನ ಹಾಕಿ ದಿಡೀರ್ ಪ್ರತಿಭಟನೆ ನಡೆಸಿದ್ದಾರೆ.
ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ನಂಜನಗೂಡಿನ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಕಛೇರಿಗೆ ಬೀಗ ಜಡಿದು ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆದಾರ ಶಿವಕುಮಾರ್ ಮಾತನಾಡಿ, ಕಬಿನಿ ನಾಲೆಗಳ ವಿಭಾಗದಲ್ಲಿ ಅಕ್ರಮ ನಡೆದಿದೆ. ಅಧಿಕಾರಿಗಳು ಎಲ್‌ಒಸಿ ಯನ್ನು 15 ಪರ್ಸೆಂಟ್‌ಗೆ ಮಾರಾಟ ಮಾಡಿಕೊಂಡಿದ್ದಾರೆ. ವೆಂಕಟ ಸುಬ್ಬಯ್ಯ ಅವರಿಗೆ 80 ಲಕ್ಷ ಕೊಟ್ಟಿದ್ದಾರೆ. ನೃಪತುಂಗ ಗ್ರೂಪ್ಸ್ ಗೆ 25 ಲಕ್ಷ ಕೊಟ್ಟಿದ್ದಾರೆ. 150 ಗುತ್ತಿಗೆದಾರರು ಇರುವ ನಮಗೆ 154 ಲಕ್ಷ ನೀಡಿದ್ದಾರೆ. 1 ಲಕ್ಷಕ್ಕೆ ಆರು ಪರ್ಸೆಂಟ್ ಅಂತ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾವೇರಿ ನೀರಾವರಿ ನಿಗಮದ ಕಾರ್ಯ ಪಾಲಕ ಎಂಜಿನಿಯರ್ ಕಾವೇರಿ ರಂಗನಾಥ್ ಕಛೇರಿಗೆ ಬಂದಿಲ್ಲ. ನಾವು ಬೆಳಿಗ್ಗೆಯಿಂದಲೂ ಕಾದು ಕುಳಿತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಅವರಿಗೆ ಬೇಕಾದವರಿಗೆ ಚೆಕ್ ಬರೆಯುತ್ತೇನೆ ಎಂದು ಹೇಳುತ್ತಿದ್ದಾರೆ. 15 ಪರ್ಸೆಂಟ್ ದುಡ್ಡು ಕೊಟ್ಟವರಿಗೆ ಚೆಕ್ ನೀಡುತ್ತಿದ್ದಾರೆ. ಇದಕ್ಕೆ ಎಂಡಿ ಅವರು ಸ್ಪಷ್ಟೀಕರಣ ನೀಡಬೇಕು.
ಗುತ್ತಿಗೆದಾರರು ಕಾಮಗಾರಿ ಮಾಡಿ ಎರಡು ವರ್ಷ ಕಳೆದಿದೆ. ಆದರೂ ನಮಗೆ ಬಿಲ್ ಮಾಡಿಕೊಟ್ಟಿಲ್ಲ. ಸಣ್ಣ ಗುತ್ತಿಗೆದಾರರಿಗೆ ಬಾರಿ ಪ್ರಮಾಣದಲ್ಲಿ ಮೋಸ ನಡೆಸಲಾಗುತ್ತಿದೆ. ಎಂಡಿ ಕಛೇರಿಯಲ್ಲಿ ಕೋಟಿ ಕೋಟಿ ಹಣವನ್ನು ಬಿಲ್ ತೆಗೆದುಕೊಂಡು ಲೂಟಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಯಾರು ಪರ್ಸೆಂಟೇಜ್ ಜಾಸ್ತಿ ಕೊಡುತ್ತಾರೋ ಅವರಿಗೆ ಗುತ್ತಿಗೆ ನೀಡುತ್ತಿದ್ದಾರೆ. ರಾಜಕೀಯ ಪ್ರಭಾವ ಬಳಸಿಕೊಂಡು ಜನಪ್ರತಿನಿಧಿಗಳು ಅವರಿಗೆ ಬೇಕಾದವರಿಗೆ ನೀಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಲೆಕ್ಕಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು, ಎಲ್‌ಒಸಿಯನ್ನು ಮಾರಾಟ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗುತ್ತಿಗೆದಾರರಾದ ಶಿವಕುಮಾರ್, ಬಂಗಾರು, ಗೋವಿಂದರಾಜು, ಅಬ್ದುಲ್ ಅಜೀಜ್, ವೆಂಕಟೇಶ್, ಪುರುಷೋತ್ತಮ್, ಶಿವ ಬಸವಣ್ಣ, ಕಿರಣ್ ಕುಮಾರ್, ಬಸವರಾಜು, ಸತೀಶ್, ನಾಗರಾಜು, ಮಹೇಶ್, ಸುಲ್ತಾನ್ ಶರೀ ಇದ್ದರು.