ಭೂ ಸ್ವಾಧೀನ ರೈತರಿಂದ ಕರಾಳ ದೀಪಾವಳಿ ಆಚರಣೆ
1 min readಭೂ ಸ್ವಾಧೀನ ರೈತರಿಂದ ಕರಾಳ ದೀಪಾವಳಿ ಆಚರಣೆ
940 ದಿನಗಳ ಹೋರಾಟಕ್ಕೆ ಗಮನವೇ ನೀಡದ ಸರ್ಕಾರ
ಕೆಐಎಡಿಬಿ ಬೂಸ್ವಾಧೀನ ವಿರುದ್ಧ ದೀಪಾವಳಿ ದಿನ ಕರಾಳ ದಿನವನ್ನಾಗಿ ಆಚರಿಸಿ, ಪಂಜಿನ ಮೆರವಣಿಗೆ ನಡೆಸಿ ರೈತರು ಅಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕೆಐಎಡಿಬಿ ಭೂ ಸ್ವಾಧೀನ ಕೈ ಬಿಡುವಂತೆ ರೈತರಿಂದ 940 ದಿನಗಳಿಂದ ನಿರಂತರ ಹೋರಾಟ ಮಾಡಿದ್ದರು. ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ರೈತ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಸರ್ಕಾರ ವಿರುದ್ಧ ಕೆಡಿಕಾರಿದ್ದಾರೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ 13 ಗ್ರಾಮಗಳ ರೈತರಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ರೈತರ ಹೋರಾಟಕ್ಕೆ ಸರ್ಕಾರದಿಂದ ಯಾವುದೇ ಬೆಲೆ ಇಲ್ಲ ಅಂತಾ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದರು.
ಭೂ ಸ್ವಾಧೀನ ಕೈಬಿಡುವಂತೆ ರೈತರಿಂದ ಕರಾಳ ದೀಪಾವಳಿ ಆಚರಣೆ ಮಾಡಲಾಗಿದ್ದು, ಚನ್ನರಾಯಪಟ್ಟಣದಲ್ಲಿ ನೂರಾರು ರೈತರಿಂದ ಪಂಜು ಹಿಡಿದು ಕರಾಳ ದೀಪಾವಳಿ ಆಚರಣೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಸಂಬ0ಧಪಟ್ಟ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಂಜಿನ ಮೆರವಣಿಗೆ ಮಾಡಿ ಸರ್ಕಾರದ ವಿರುದ್ದ ರೈತರ ಆಕ್ರೋಶ ವ್ಯಕ್ತಪಡಿಸಿದರು. 13 ಗ್ರಾಮಗಳ 1,777 ಎಕರೆ ಭೂ ಸ್ಬಾಧೀನ ಕೈಬಿಡುವಂತೆ ಒತ್ತಾಯ ಮಾಡಿದರು.
940 ದಿನಗಳ ಹೋರಾಟಕ್ಕೂ ಸರ್ಕಾರ ಗಮನ ನೀಡಿಲ್ಲ. ಇನ್ನೂ ಎಷ್ಟು ದಿನಗಳು ಬೇಕು, ಭೂ ಸ್ವಾಧೀನ ಕೈಬಿಡಲು ಸರ್ಕಾರ ನಿರ್ಲಕ್ಷ ತೋರುತ್ತಿದೆ. 940 ದಿನಗಳಿಂದ ನಿರಂತ ಹೋರಾಟ ಮಾಡುತ್ತಿದ್ದರು, ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ ಎಂದು ರೈತ ಅಶ್ವತ್ಥಪ್ಪ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.