ಅಯೋಧ್ಯೆಯಲ್ಲಿರೋದು ಬಿಜೆಪಿ ರಾಮ, ನಮ್ಮ ರಾಮ ‘ಸಿದ್ದರಾಮಯ್ಯ’ : ಮಾಜಿ ಸಚಿವ H.ಆಂಜನೇಯ
1 min readಅಯೋಧ್ಯೆಯಲ್ಲಿರೋದು ಬಿಜೆಪಿ ರಾಮ, ನಮ್ಮ ರಾಮ ‘ಸಿದ್ದರಾಮಯ್ಯ’ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿಕೆ ನೀಡಿದ್ದು, ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ಇರುವುದು ಬಿಜೆಪಿ ರಾಮ. ಹಾಗಾಗಿ ಅಲ್ಲಿ ಬಿಜೆಪಿಯವರು ತಮ್ಮವರನ್ನೆಲ್ಲಾ ಕರೆಯಿಸಿಕೊಂಡು ಭಜನೆ ಮಾಡುತ್ತಾರೆ.
ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯನವರನ್ನು ಕರೆಯದೆ ಇದ್ದಿದ್ದೇ ಒಳ್ಳೆಯದಾಯಿತು. ಸ್ವತಃ ಸಿದ್ದರಾಮಯ್ಯ ಅವರೇ ರಾಮ. ಹೀಗಿರುವಾಗ ಆ ರಾಮನಿಗೇಕೆ ಹೋಗಿ ಅವರು ಪೂಜಿಸಬೇಕು ಎಂದು ಹೇಳಿಕೆ ನೀಡಿದ್ದು, ಮಾಜಿ ಸಚಿವರ ಹೇಳಿಕೆ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ.
ಸಿದ್ದರಾಮಯ್ಯನವರ ಸ್ವಂತ ಊರಾದ ಸಿದ್ದರಾಮನಹುಂಡಿಯಲ್ಲಿ ರಾಮನ ದೇವಸ್ಥಾನ ಇದೆ, ಅಲ್ಲೇ ಹೋಗಿ ಶ್ರೀರಾಮನನ್ನು ಪೂಜಿಸುತ್ತಾರೆ” . ನಾವೆಲ್ಲಾ ಶ್ರೀರಾಮನ ಭಕ್ತರು. ಶ್ರೀರಾಮನು ನಮ್ಮಲ್ಲಿ ಬೆರೆತು ಹೋಗಿದ್ದಾನೆ, ಆದರೆ ದೇವರ ಹೆಸರಿನಲ್ಲಿ ಧರ್ಮಗಳನ್ನು ಒಡೆದಾಳುವ ನೀತಿ ಬಿಜೆಪಿಯದ್ದು” ಎಂದು ಟೀಕಿಸಿದರು.