ನಂಜನಗೂಡಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
1 min read
ನಂಜನಗೂಡಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಮಾಜಿ ಸಂಸದ ಭಗವಂತ ಖೂಬಾ ಅವರಿಂದ ಚಾಲನೆ
ಮಾಜಿ ಶಾಸಕ ಹರ್ಷವರ್ಧೆನ್ ಜೊತೆ ಶರಣ ಸಂಗಮ ಮಠದ 108 ಲಿಂಗ ದರ್ಶನ ಮಾಡಿದ ಭಗವಂತ ಖೂಬಾ, ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಈಗಾಗಲೇ 25 ಲಕ್ಷಕ್ಕೂ ಅಧಿಕ ಸದಸ್ಯರ ನೋಂದಣಿಯಾಗಿದೆ ಎಂದು ಹೇಳಿದರು.
ನಂಜನಗೂಡಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಸಚಿವ ಭಗವಂತ ಖೂಬಾ ಚಾಲನೆ ನೀಡಿ ಮಾತನಾಡಿ, ಕೇಂದ್ರ ನಾಯಕರು ಹತ್ತು ಜಿಲ್ಲೆಗಳ ಜವಾಬ್ದಾರಿ ನೀಡಿದ್ದಾರೆ. ಯಶಸ್ವಿ ಕಾರ್ಯ ವೈಖರಿ ಮಾಡಲಾಗಿದೆ. ನಂಜನಗೂಡು ಮೀಸಲು ವಿಧಾನ¸ಭಾ ಕ್ಷೇತ್ರ 4ನೇ ಜಿಲ್ಲೆಯಾಗಿದ್ದು, ನಂಜನಗೂಡಿನ ಶರಣ ಸಂಗಮ ಮಠದಲ್ಲಿ ಆಶೀರ್ವಾದ ಪಡೆಯಲಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಹರ್ಷವರ್ಧೆನ್ ಜೊತೆ ನಂಜನಗೂಡು ನಗರದ ದೇವಿರಮ್ಮನಹಳ್ಳಿ ಬಡಾವಣೆಗಳ ಸುತ್ತಮುತ್ತ ಬಿಜೆಪಿ ತಾಲೂಕು ಅಧ್ಯಕ್ಷ ಸಿದ್ದರಾಜು ನೇತೃತ್ವದಲ್ಲಿ ಸಾಕಷ್ಟು ಸದಸ್ಯತ್ವ ನೋಂದಣಿ ಮಾಡಿಸಲಾಯಿತು. ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾದ ಅಭಿಯಾನ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತುಂಬಾ ಉತ್ಸುಕತೆಯಿಂದ ಜವಾಬ್ದಾರಿಯುತವಾಗಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಇನ್ನಷ್ಟು ಗುರಿ ಮುಟ್ಟುವ ತನಕ ಶ್ರಮಿಸಬೇಕಿದೆ ಎಂದು ಬೀದರ್ ಮಾಜಿ ಸಂಸದ ಭಗವಂತ ಖೂಬಾ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಹರ್ಷವರ್ಧನ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಿದ್ದರಾಜು, ಬಸವಣ್ಣ ದೇವು ಇದ್ದರು.