ಗ್ರಾಪಂ ಅಧ್ಯಕ್ಷರಾಗಲೂ ಯೋಗ್ಯತೆ ಇಲ್ಲದ ಶೆಟ್ಟರ್ ಗೆ ಬಿಜೆಪಿ ಸಿಎಂ, ಸ್ಪೀಕರ್, ರಾಜ್ಯಾಧ್ಯಕ್ಷ ಸೇರಿ ಎಲ್ಲಾ ಹುದ್ದೆ ಕೊಟ್ಟಿದೆ: ಯತ್ನಾಳ್ ವಾಗ್ದಾಳಿ
1 min readಬಿಜೆಪಿ ಮಾಜಿ ಶಾಸಕರ ಖರೀದಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಂಗಡಿ ತೆರೆದಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಅವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲು ಯೋಗ್ಯತೆ ಇಲ್ಲ.
ಇಂಥವರನ್ನು ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ, ಸ್ಪೀಕರ್, ಮಂತ್ರಿ ಸೇರಿದಂತೆ ಬಿಜೆಪಿ ಎಲ್ಲಾ ಹುದ್ದೆ ಕೊಟ್ಟಿದೆ ಎಂದು ಹೇಳಿದ್ದಾರೆ.
ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಜಗದೀಶ್ ಶೆಟ್ಟರ್ ಅವರಿಗೆ ಇಲ್ಲ. ಶೆಟ್ಟರ್ ಅವರೇ ದಯವಿಟ್ಟು ಕಿರಾಣಿ ಅಂಗಡಿ ತೆಗೆದುಕೊಂಡು ಕುಳಿತುಕೊಳ್ಳಿ. ಇಂತಹ ಕೆಲಸ ಮಾಡಬೇಡಿ ಎಂದು ಯತ್ನಾಳ್ ಹರಿಹಾಯ್ದಿದ್ದಾರೆ.