ಸಂವಿಧಾನ ಪ್ರತಿ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಣೆ
1 min readಸಂವಿಧಾನ ಪ್ರತಿ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಣೆ
ವಕೀಲ ಮಟಮಪ್ಪ ಅವರಿಂದ ವಿನೂತನವಾಗಿ ಹುಟ್ಟುಹಬ್ಬ
ಹುಟ್ಟುಹಬ್ಬ ಎಂದರೆ ಅದ್ಧೂರಿಯಾಗಿ ಆಚರಿಸಿಕೊಳ್ಳೋರೆ ಹೆಚ್ಚು. ಆದರೆ ಇಲ್ಲೊಬ್ಬ ವಕೀಲರು ತಾವು ಓದಿದ ಕಾಲೇಜು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ ವಿತರಿಸುವ ಮೂಲಕ ಸಂವಿಧಾನದ ಅರಿವು ಮೂಡಿಸಲು ಮುಂದಾಗಿದ್ದು, ಅರ್ಥಪೂರ್ವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ವಿಶೇಷ.
ಹುಟ್ಟುಹಬ್ಬ ಎಂದರೆ ಅದ್ಧೂರಿಯಾಗಿ ಆಚರಿಸಿಕೊಳ್ಳೋರೆ ಹೆಚ್ಚು. ಆದರೆ ಇಲ್ಲೊಬ್ಬ ವಕೀಲರು ತಾವು ಓದಿದ ಕಾಲೇಜು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ ವಿತರಿಸುವ ಮೂಲಕ ಸಂವಿಧಾನದ ಅರಿವು ಮೂಡಿಸಲು ಮುಂದಾಗಿದ್ದು, ಅರ್ಥಪೂರ್ವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ವಿಶೇಷ. ವಕೀಲರು ಹಾಗೂ ನಗರಸಭಾ ಸದಸ್ಯರಾದ ಆರ್. ಮಟಮಪ್ಪ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಸಮಾನ ಮನಸ್ಕರ ವೇದಿಕೆ ಮೂಲಕ ತಮ್ಮದೇ ಆದ ತಂಡ ಕಟ್ಟಿಕೊಂಡು ಸಾಮಾಜಿಕ ಸೇವೆ ಮಾಡುತ್ತಿರುವ ಮಟಮಪ್ಪ, ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಸರ್ಕಾರಿ ಪದವಿ ಬಾಲಕರ ವಿದ್ಯಾರ್ಥಿನಿಯದಲ್ಲಿ ಇದ್ದುಕೊಂಡು, ಪಕ್ಕದಲ್ಲಿಯೇ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಡಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಈ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದ ಮಟಮಪ್ಪ ಅವರು ಬೆಂಗಳೂರಿನಲ್ಲಿ ತಮ್ಮ ವೃತ್ತಿಪರ ವ್ಯಾಸಂಗ ಮಾಡಿದ್ದರು.
ಹುಟ್ಟುಹಬ್ಬದ ದಿನ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡು, ಅದರ ಸವಿನೆನಪಿಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಸಂವಿಧಾನ ಓದು ಪುಸ್ತಕದ ಪ್ರತಿಗಳನ್ನು ಕೊಡುಗೆಯಾಗಿ ನೀಡಿ ತಾವು ವ್ಯಾಸಂಗ ಮಾಡಿದ್ದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿ ವಿತರಿಸಿ, ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ವಿದ್ಯಾರ್ಥಿನಿಲಯದಲ್ಲಿ ಸಂವಿಧನ ಪ್ರತಿ ವಿತರಣೆಗೂ ಮುನ್ನಾ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯನ್ನು ಬೋಧನೆ ಮಾಡಲಾಯಿತು. ಸಂವಿಧಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು, ಮಟಮಪ್ಪನವರ ಸ್ನೇಹಿತರು ಇದ್ದರು.