ಬಿಗ್ ಬಾಸ್ scripted ನಿಜ, ಅರ್ಥ ಮಾಡ್ಕೊಳಿ : ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಬಚ್ಚಿಟ್ಟ ಸತ್ಯ!
1 min readಬಿಗ್ ಬಾಸ್ ಕನ್ನಡ ಸೀಸನ್ 10 ರ ಬಗ್ಗೆ ವೀಕ್ಷಕರು ಅಸಮಾಧಾನಗೊಂಡಿದ್ದಾರೆ. ಪ್ರತಿ ಮಾತಿಗೂ ಜಗಳವೇ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಬಿಗ್ ಬಾಸ್ ವಿರುದ್ಧ ಟ್ರೋಲ್ ಮಾಡುತ್ತಿದ್ದಾರೆ. ಈ ನಡುವೆ ಕೆಲವರು ಇದೊಂದು ಸ್ಕ್ರಿಪ್ಟೆಡ್ ಶೋ ಎನ್ನುತ್ತಿದ್ದಾರೆ.
ಬಿಗ್ ಬಾಸ್ ಬಗ್ಗೆ ಈ ಆರೋಪ ಹೊಸದಲ್ಲ. ಹಲವು ಬಾರಿ ಸ್ಕ್ರಿಪ್ಟೆಡ್ ಶೋ ಎಂದು ಅನೇಕರು ಬಿಂಬಿಸಿದ್ದಾರೆ. ಇದರ ಬಗ್ಗೆ ಈಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಮಾತನಾಡಿದ್ದಾರೆ. ಬಿಗ್ ಬಾಸ್ ಒಂದು ಸ್ಕ್ರಿಪ್ಟೆಡ್ ಶೋ ಹೌದು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ಕಿರಿಕ್ ಕೀರ್ತಿ, ಈ ಬಾರಿ ಬಿಗ್ ಬಾಸ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸುಮಾರು ಜನರ ತಲೆಯಲ್ಲಿ ಬಿಗ್ ಬಾಸ್ ಸ್ಕ್ರಿಪ್ಟೆಡ್ ಎಂಬ ಅನುಮಾನವಿದೆ. ಅನೇಕ ಬಾರಿ ಹಲವರು ಇದಕ್ಕೆ ಉತ್ತರಿಸಿದ್ದಾರೆ. ನನ್ನ ಕೇಳೋದಾದ್ರೆ ಹೌದು, ಬಿಗ್ ಬಾಸ್ ಸ್ಕ್ರಿಪ್ಟೆಡ್ ಎಂದಿದ್ದಾರೆ.