Bigg Boss 10: ಗೇಮ್ ಆಡೋವಾಗ ಅಗ್ರೆಸ್ಸಿವ್ ಆಗ್ತಿದ್ದದ್ದು ಯಾಕೆ? ವಿನಯ್ ಕೊಟ್ರು ಉತ್ತರ
1 min readಬಿಗ್ಬಾಸ್ ಮನೆಯಲ್ಲಿ ವಿನಯ್ ಗೌಡ ಅವರು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಿದ್ದರು. ತುಂಬಾ ಅಗ್ರೆಸಿವ್ ಆಗಿ ಆಡ್ತಿದ್ದರು ವಿನಯ್. ಆದರೆ ಈ ಎಗ್ರೆಸಿವ್ ಭಾವನೆ ಎಲ್ಲಿಂದ ಬರುತ್ತಿತ್ತು? ಇದಕ್ಕೆ ಕಾರಣವೇನು?
ಇದಕ್ಕೆ ವಿನಯ್ ಗೌಡ ಅವರೇ ಬಿಬಿ ಆಟೋಗ್ರಾಫ್ನಲ್ಲಿ ಉತ್ತರ ಕೊಟ್ಟಿದ್ದಾರೆ.
ತಮ್ಮ ಕೋಪಕ್ಕೆ, ಅಗ್ರೆಸಿವ್ ಸ್ವಭಾವಕ್ಕೆ ಕಾರಣ ಏನು ಎನ್ನುವುದಕ್ಕೆ ವಿನಯ್ ಅವರು ಉತ್ತರ ಕೊಟ್ಟಿದ್ದಾರೆ.
ಅದು ಆರ್ಟಿಫಿಶಿಯಲ್ ಅಲ್ಲ. ಅದು ಒಂದು ಗೇಮ್ ಎಂದು ಬಂದಾಗ ಹಾಗೆಯೇ ಬರುತ್ತದೆ. ನಾನು ಎಲ್ಲಾ ಆಟಗಳನ್ನು ಹೀಗೆಯೇ ಆಡುತ್ತೇನೆ ಎಂದಿದ್ದಾರೆ.
ನನ್ನ ಮಗನ ಜೊತೆ ಆಡುವಾಗಲೂ ನಾನು ಅಗ್ರೆಸಿವ್ ಆಗಿಯೇ ಆಡುವುದು. ಯಾರೂ ಕೂಡಾ ಸೋಲಬೇಕೆಂದು ಆಡುವುದಿಲ್ಲ. ಯಾವುದೇ ಗೇಮ್ ಕೂಡಾ ಸೋಲಬೇಕೆಂದು ಆಡುವುದಿಲ್ಲ. ಗೆಲ್ಲಬೇಕೆಂದು ಆಡುತ್ತೇವೆ ಎಂದಿದ್ದಾರೆ ವಿನಯ್.
ವಿನಯ್ ಗೌಡ ಅವರು ಬಿಗ್ಬಾಸ್ ಮನೆಯಲ್ಲಿ ಹೆಚ್ಚಿನ ಸ್ಪರ್ಧಿಗಳೊಂದಿಗೆ ಜಗಳ ಮಾಡುತ್ತಲೇ ಇದ್ದರು. ಸಂಗೀತಾ ಶೃಂಗೇರಿ ಹಾಗೂ ತನಿಷಾ ಜೊತೆ ವಿನಯ್ ಅವರಿಗೆ ಹೆಚ್ಚಾಗಿ ಜಗಳ ನಡೆಯುತ್ತಲೇ ಇತ್ತು
ಆದರೂ ವಿನಯ್ ಗೌಡ ಅವರು ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೆ ತುಂಬಾ ಚೆನ್ನಾಗಿ ಜನರ ಮಧ್ಯೆ ಮೆಚ್ಚುಗೆ ಗಳಿಸುತ್ತಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ.
ವಿನಯ್ ಗೌಡ ಅವರು ಬಿಗ್ಬಾಸ್ಗೆ ಹೋದ ಮೇಲೆ ಮತ್ತಷ್ಟು ಫೇಮಸ್ ಆಗಿದ್ದು ಅವರ ಫಾಲೋವರ್ಸ್ ಸಂಖ್ಯೆಯೂ ಜಾಸ್ತಿಯಾಗಿದೆ.
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura