ಭಾರತೀಯ ಕಿಸಾನ್ ಸಂಘದಿ0ದ ನ.26ಕ್ಕೆ ಬೃಹತ್ ರ‍್ಯಾಲಿ
1 min readಭಾರತೀಯ ಕಿಸಾನ್ ಸಂಘದಿ0ದ ನ.26ಕ್ಕೆ ಬೃಹತ್ ರ‍್ಯಾಲಿ
ವಕ್ಫ್ ತೊಲಗಲಿ, ದೇಶ ಉಳಿಯಲಿ ರೈತ ಘರ್ಜನಾ ಪ್ರತಿಭಟನೆ
2013 ರಲ್ಲಿ ವಕ್ಫ್ ಕಾಯ್ದೆಗೆ ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ತಂದು, ಮಿತಿ ಮೀರಿದ ಅಧಿಕಾರ ವಕ್ಫ್ ಮಂಡಳಿಗೆ ನೀಡಿದ ಕಾರಣ 8 ಸಾವಿರ ಎಕರೆ ಇದ್ದ ವಕ್ಫ್ ಭೂಮಿ ಈಗ 9.40 ಲಕ್ಷಕ್ಕೂ ಅಧಿಕ ಎಕರೆ ಕಬಳಿಸಿದ್ದಾರೆ ಎಂದು ರೈತಸಂಘದ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಹೆಚ್ ಪಿ ನಾರಾಯಣರೆಡ್ಡಿ ಆರೋಪಿಸಿದರು.
ರೈತರ ಕೃಷಿ ಭೂಮಿ, ಸ್ಮಶಾನ, ಸರ್ಕಾರಿ ಆಸ್ತಿ, ಮಠ ಹಾಗು ಸಾರ್ವಜನಿಕರ ಆಸ್ತಿಗಳನ್ನ ಕಬಳಿಕೆ ಮಾಡುತ್ತಿರುವ ವಕ್ಫ್ ಕಾಯಿದೆಗೆ ತಿದ್ದುಪಡಿ ತರಬೇಕೆಂದು ಭಾರತೀಯ ಕಿಸಾನ್ ಸಂಘದಿ0ದ ನವೆಂಬರ್ 26 ರಂದು ಬೆಂಗಳೂರಿನ ಫ್ರೀಡಂ ಪಾರ್ಕಲ್ಲಿ ಬೃಹತ್ ರೈತ ಘರ್ಜನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ನಾರಾಯಣರೆಡ್ಡಿ ತಿಳಿಸಿದರು. ರೈತರ ಜಮೀನು ಕಾನೂನಿನ ಮೂಲಕ ಕಬಳಿಸಲು ಹೊರಟಿರುವ ವಕ್ಫ್ ಮಂಡಳಿ ಕೃತ್ಯ ಖಂಡಿಸಿ, ಮಠಮಂದಿರಗಳ ಸಾವಿರಾರು ವರ್ಷಗಳ ಭಾಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿ ರೈತವಿರೋಧಿ ದೋರಣೆಯನ್ನು ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಮತ್ತು ವಕ್ಫ್ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನವೆಂಬರ್ 26 ರಂದು ಬೆಂಗಳೂರು ಸ್ವಾತಂತ್ರ ಉದ್ಯಾನವನದಿಂದ ಬೃಹತ್ ರೈತ ಘರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಹುತೇಕ ಜಿ¯್ಲೆಗಳಲ್ಲೂ ರೈತರ ಸಾಗುವಳಿ ಜಮೀನು ಈಗ ವಕ್ಫ್ ಮಂಡಳಿಗೆ ಸೇರ್ಪಡೆಯಾಗಿರುವಂತೆ ದಾಖಲೆಗಳಲ್ಲಿ ನಮೂದಾಗಿದೆ. ಇದು ಹೀಗೆ ಬಿಟ್ಟರೆ ಮುಂದೊ0ದು ದಿನ ಇಡೀ ದೇಶದ ಎಲ್ಲ ಜಮೀನು ವಕ್ಫ್ ಮಂಡಳಿ ಪಾಲಾಗುತ್ತೆ. ಹಾಗಾಗಿ ವಕ್ಫ್ ಬೋರ್ಡನ್ನೆ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜತೆಗೆ ರೈತರಿಗೆ ಕಂಟಕವಾಗುವ ವಿದೇಶಿ ಆಮದಿನ ಕುಲಾಂತರಿ ಬಿತ್ತನೆ ಬೀಜ ನಿಲ್ಲಿಸುವಂತೆಯೂ ಶಾಸಕರ ಮತ್ತು ಸಂಸದರ ಮನೆಗಳಿಗೆ ತೆರಳಿ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಚ್ ಪಿ ಶ್ರೀನಿವಾಸ್, ಉಪಾಧ್ಯಕ್ಷ ಶಾಂತಮೂರ್ತಿ, ರಾಮಾಂಜನಪ್ಪ ,ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಶ್ರೀನಿವಾಸಪ್ಪ , ನಾರಾಯಣಸ್ವಾಮಿ ಇದ್ದರು.