ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಜ.13ಕ್ಕೆ ಚಿಕ್ಕಬಳ್ಳಾಪುರದಲ್ಲಿ ಬೃಹತ್‌ ಉದ್ಯೋಗ ಮತ್ತು ಸಾಲ ಮೇಳ

1 min read
ಬೃಹತ್‌ ಉದ್ಯೋಗ ಮತ್ತು ಸಾಲ ಮೇಳ   ಜ.13ಕ್ಕೆ ಚಿಕ್ಕಬಳ್ಳಾಪುರದಲ್ಲಿ ಉದ್ಯೋಗ ಮೇಳ  70 ಕ್ಕೂ ಹೆಚ್ಚು ಕಂಪೆನಿಗಳು ಭಾಗಿ  ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ನೇತೃತ್ವ
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನವರಿ 13 ರಂದು ಬೃಹತ್‌ ಉದ್ಯೋಗ ಮತ್ತು ಸಾಲ ಮೇಳ ಆಯೋಜಿಸಲಾಗಿದ್ದು, 70 ಕ್ಕೂ ಹೆಚ್ಚು ಉದ್ಯೋಗದಾತ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.‌ ರಕ್ಷಾ ರಾಮಯ್ಯ ಹೇಳಿದರು.
ಉದ್ಯೋಗ ಮೇಳ ಆಯೋಜನೆ ಬಗ್ಗೆ ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್‌ ಉದ್ಯೋಗ ಮೇಳದ ಜೊತೆಗೆ ಶೈಕ್ಷಣಿಕ ಸಾಲ, ನವೋದ್ಯಮಗಳಿಗೆ ಸಾಲ ಕಲ್ಪಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಯಕ ಸಂಸ್ಕೃತಿಗೆ ಒತ್ತು ನೀಡಿದ್ದು, ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂಬ ಆಶಯ ಹೊಂದಿದ್ದು, ಇದನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
2019 ರ ಅಂಕಿ ಅಂಶಗಳಂತೆ ದೇಶದಲ್ಲಿ ನಿರುದ್ಯೋಗ ಪ್ರಮಾಣ 7.7% ಕ್ಕೆ ಏರಿಕೆಯಾಗಿದೆ, 45 ವರ್ಷಗಳಲ್ಲೇ ಇದು ಅತ್ಯಧಿಕವಾಗಿತ್ತು. ದುರಂತವೆಂದರೆ 2023 ರ  ನವೆಂಬರ್ ನಲ್ಲಿ ಈ ಪ್ರಮಾಣ 10.05% ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಉದ್ಯೋಗ ದರ 6.2% ರಿಂದ 10.82% ಕ್ಕೆ ಹೆಚ್ಚಳವಾಗಿದೆ. ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ಬಗ್ಗೆ ಆತಂಕ ಮೂಡಿಸುತ್ತಿದೆ ಎಂದರು.
ಕರ್ನಾಟಕದಲ್ಲಿ ನಿರುದ್ಯೋಗ ದರ 2023 ರ ಮಾರ್ಚ್‌ ನಲ್ಲಿ 2.31% ರಷ್ಟಿತ್ತು. ಕರ್ನಾಟಕದ ಜಿಡಿಪಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೊಡುಗೆ 1.1% (3,525 ಕೋಟಿ) ರಷ್ಟಿದೆ.  ಚಿಕ್ಕಬಳ್ಳಾಪುರದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ರಾಜ್ಯದ ಕೊಡುಗೆ 2.7%, ಕೈಗಾರಿಕೆ ಕೊಡುಗೆ 1% , ಕ್ಷೀರ ಕ್ರಾಂತಿ, ಪುಷ್ಪೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಯುವ ಸಮೂಹಕ್ಕೆ ಉದ್ಯೋಗ ದೊರಕಿಸಿಕೊಟ್ಟು ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಉದ್ಯೋಗ ಮೇಳದಲ್ಲಿ 70 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, ಪ್ರಮುಖ 5 ಬ್ಯಾಂಕ್‌ಗಳು ಸಾಲ ಸೌಲಭ್ಯ ಒದಗಿಸಲು ಮುಂದಾಗಿವೆ. ಸಂದರ್ಶನದ ಕಾರ್ಯಕ್ಷಮತೆ, ಕೌಶಲ್ಯ, ಶಿಕ್ಷಣದ ಆಧಾರದ ಮೇಲೆ 16 ಸಾವಿದಿಂದ 1 ಲಕ್ಷ ರೂಪಾಯಿವರೆಗೆ ವೇತನ ದೊರೆಯುವ ಉದ್ಯೋಗಗಳನ್ನು ದೊರಕಿಸಿಕೊಡಲು ಒತ್ತು ನೀಡಲಾಗುತ್ತಿದೆ. ನವೋದ್ಯಮಗಳ ಬೆಳವಣಿಗೆ, ಶೈಕ್ಷಣಿಕ ಸಾಲಗಳ ಮೇಲೂ ಗಮನಹರಿಸಿಸಲಾಗಿದೆ. ಉದ್ಯೋಗ ಮೇಳಕ್ಕೆ ಈಗಾಗಲೇ ಆನ್‌ಲೈನ್ ನೋಂದಣಿ ಆರಂಭವಾಗಿದೆ ಎಂದರು.
ಪ್ರಮುಖವಾಗಿ ಹೋಂಡಾ ಮೋಟಾರ್ಸ್, ವಿವಾ ಮೋಟಾರ್ಸ್, ಅಪೊಲೊ ಹೋಮ್‌ಕೇರ್, ರಿಲಯನ್ಸ್ ರಿಟೇಲ್, ಮೊಟೊರೊಲಾ, ಜಸ್ಟ್ ಡಯಲ್ ಲಿಮಿಟೆಡ್, ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ ಸೇರಿದಂತೆ ಹಲವು ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ ಎಂದರು.
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ದೇವೇನಹಳ್ಳಿ ಆಸು ಪಾಸಿನಲ್ಲಿ ಉದ್ಯೋಗ ದೊರಕಿಸಿಕೊಡಲಿದೆ. ಅಲ್ಲದೆ ಪ್ರಮುಖ ಬ್ಯಾಂಕುಗಳು  ಸಾಲ ಸೌಲಭ್ಯ ಒದಗಿಸುತ್ತಿವೆ ಎಂದು ಹೇಳಿದರು.
https://www.youtube.com/watch?v=urNZLXLqaN0&t=8s
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

About The Author

Leave a Reply

Your email address will not be published. Required fields are marked *