ಬೀದರ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ
1 min read
ಬೀದರ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ ಬೀದರ್ ನಗರದಲ್ಲಿ ಭವ್ಯ ಮೆರವಣಿಗೆ
ಬೀದರ್ ನಲ್ಲಿ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಸಮ್ಮೇಳನಾಧ್ಯಕ್ಷ ಬಿ ಎಂ ಅಮರವಾಡಿ ನೇತೃತ್ವದಲ್ಲಿ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪೂಜೆ ಸಲಿಸಿ ಮೆರವಣಿಗೆಗೆ ಸಚಿವ ರಹೀಂಖಾನ್ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಕನ್ನಡ ಹಾಡಿಗೆ ಸಚಿವರು ಹಾಗೂ ವಿವಿಧ ಸಾಹಿತಿಗಳು ಹೆಜ್ಜೆ ಹಾಕಿದರು. ವಿವಿಧ ಶಾಲಾ ಕಾಲೇಜು ಮಕ್ಕಳು ಭಾಗವಹಿಸಿದ್ದರು.
20ಕ್ಕು ಹೆಚ್ಚು ಆಟೋಗಳಿಗೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ನಗರದ ವಿವಿದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಜಿಲ್ಲಾ ರಂಗಮಂದಿರ ಕ್ಕೆ ಮೆರವಣಿಗೆ ತಲುಪಿತು.