ಕಳವು ಮಾಡಿದ ಸರ ಸ್ಮಶಾನದಲ್ಲಿ ಹೂತ್ತಿಟ್ಟ ಭೂಪ
1 min readಕಳವು ಮಾಡಿದ ಸರ ಸ್ಮಶಾನದಲ್ಲಿ ಹೂತ್ತಿಟ್ಟ ಭೂಪ
ಕಳ್ಳತ ನಡೆದ ಕೆಲವೇ ಗಂಟೆಗಳಲ್ಲಿ ಕಳ್ಳನನ್ನು ವಶಕ್ಕೆ ಪಡೆದ ಪೊಲೀಸರು
ಶಿಡ್ಲಘಟ್ಟದ ಕಳ್ಳ ಚಿಕ್ಕಬಳ್ಳಾಪುರದಲ್ಲಿ ಕೈಚಳಕ
ಚಿಕ್ಕಬಳ್ಳಾಪುರದಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಒಂಟಿಯಾಗಿ ಮಹಿಳೆಯರು ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿರುವಾಗಲೇ ಕಳ್ಳನೊಬ್ಬ ರಾಜರೋಷವಾಗಿ ಮನೆಯೊಳಗೆ ನುಗ್ಗಿ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ. ಆದರೆ, ಪೊಲೀಸರು ಕೆಲವೇ ಗಂಟೆಗಳಲ್ಲಿ ಕಳ್ಳನನ್ನು ಹಿಡಿದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಒಂಟಿಯಾಗಿ ಮಹಿಳೆಯರು ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿರುವಾಗಲೇ ಕಳ್ಳನೊಬ್ಬ ರಾಜರೋಷವಾಗಿ ಮನೆಯೊಳಗೆ ನುಗ್ಗಿ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ. ಆದರೆ, ಪೊಲೀಸರು ಕೆಲವೇ ಗಂಟೆಗಳಲ್ಲಿ ಕಳ್ಳನನ್ನು ಹಿಡಿದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿರ್ಜನ ಪ್ರದೇಶಗಳಲ್ಲಿ ಓಡಾಡುವ ಮಹಿಳೆಯರ ಕತ್ತಿನಲ್ಲಿರುವ ಸರಕ್ಕೆ ಕೈ ಹಾಕುವ ಕಳ್ಳರು, ಇತ್ತೀಚಿಗೆ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದರು.
ಈ ಬಾರಿ ಚಿಕ್ಕಬಳ್ಳಾಪುರ ನಗರದ 15ನೇ ವಾರ್ಡಿನ ದಾಳಿಂಬೆ ಬಾಬು ಅವರ ಮನೆಗೆ ನುಗ್ಗಿದ ಕಳ್ಳ, ಬಾಬು ಅವರ ತಾಯಿ ರಾಧಮ್ಮ ಅವರ ಕತ್ತಿನಲ್ಲಿದ್ದ ಸುಮಾರು 110 ಗ್ರಾಂ ತೂಕದ ಸರ ಕದ್ದು ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ಕೂಡಲೇ, ನಗರ ಪೊಲೀಸ್ ಠಾಣೆ ಪಿ.ಎಸ್.ಐ. ನಂಜುಡಯ್ಯ ಸಿಬ್ಬಂದಿಯೊoದಿಗೆ ಸಿಸಿ ಟಿವಿಯಲ್ಲಿ ಕಳ್ಳನ ಚಲನವಲನ ಕಳ್ಳನಿಗಾಗಿ ಬಲೆ ಬೀಸಿದ್ರು. ಆ ಕಾರ್ಯಪ್ರವೃತ್ತರಾದ ಪಿಎಸ್‌ಐ ಕೇವಲ ಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಕಳ್ಳನನ್ನು ಹಿಡಿದು ಬದ್ಧತೆ ಮೆರೆದಿದ್ದಾರೆ.
ಆರೋಪಿಯನ್ನು ಶಿಡ್ಲಘಟ್ಟ ನಗರದಲ್ಲಿ ಹಿಡಿದು, ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ. ಆರೋಪಿ ಶಿಡ್ಲಘಟ್ಟ ನಗರದ ಜೌಗುಪೇಟೆಯ ವಾಸಿ ವರುಣ್ ಎಂದು ಗುರುತಿಸಲಾಗಿದೆ. ಬಟ್ಟೆ ವ್ಯಾಪಾರ ಮಾಡುತ್ತಿದ್ದ ವರುಣ್, ಎರಡು ಮೂರು ದಿನಗಳ ಹಿಂದೆ ಬಾಬು ಅವರ ಮನೆಯ ಬಳಿ ಬಂದು ಕಳ್ಳತನಕ್ಕೆ ಸ್ಕೆಚ್ ಹಾಕಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು, ಆರೋಪಿ ತಾನು ಧರಿಸಿದ್ದ ಮಾಸ್ಕ್ನಲ್ಲಿ ಸರ ಬಚ್ಚಿಟ್ಟು, ಮಂಚನಬಲೆಗೆ ಹೋಗುವ ರಸ್ತೆಯಲ್ಲಿರುವ ಸ್ಮಶಾಣದಲ್ಲಿ ಬಚ್ಚಿಟ್ಟಿದ್ದೆಂದು ತಿಳಿದು, ಅಲ್ಲಿಂದ ಸರ ವಶಪಡಿಸಿಕೊಂಡಿದ್ದಾರೆ.
ಕೇವಲ ಕೆಲವೇ ಗಂಟೆಗಳಲ್ಲಿ ಕಳ್ಳನ ಜೊತೆಗೆ ಕದ್ದ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸರ ಕಳುವಾದ ಕೆಲವೇ ಗಂಟೆಗಳಲ್ಲಿ ಸರ ವಾಪಸ್ ಹುಡುಕಿಕೊಟ್ಟ ಪೊಲೀಸರಿಗೆ ರಾಧಮ್ಮ ಧನ್ಯವಾದ ತಿಳಿಸಿದ್ದಾರೆ. ಈ ಘಟನೆ ಒಂಟಿಯಾಗಿ ಓಡಾಡುವ ಮಹಿಳೆಯರ ರಕ್ಷಣೆ ವಿಚಾರದಲ್ಲಿ ಭೀತಿ ವ್ಯಕ್ತವಾಗುತತಿದೆ. ಸಾರ್ವಜನಿಕರು, ಇಂತಹ ಕಳ್ಳತನಗಳಿಂದ ಕಾಪಾಡಿಕೊಳ್ಳಲು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.