ಕೈವಾರ ತಾತಯ್ಯ ನವರ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ
1 min readಕೈವಾರ ತಾತಯ್ಯ ನವರ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ
ಗುರುವಿನಿಂದ ಮಾತ್ರ ಅವಿದ್ಯೆ ದೂರವಾಗಿಸಲು ಸಾಧ್ಯ
ಕೈವಾರ ಧರ್ಮಾಧಿಕಾರಿ ಜಯರಾಂ ಅಭಿಮತ
ಪರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊತ್ತಕೋಟೆ ಗ್ರಾಮದಲ್ಲಿ ಯೋಗಿ ನಾರೇಯಣ ಸೇವಾ ಟ್ರಸ್ಟ್ನಿಂದ ಶ್ರೀ ಕೈವಾರ ತಾತಯ್ಯ ನವರ ದೇವಾಲಯ ನಿರ್ಮಾಣಕ್ಕೆ ಕೈವಾರ ದೇವಾಲಯದ ಧರ್ಮಾಧಿಕಾರಿ ಎಂ.ಆರ್. ಜಯರಾಂ ಹಾಗೂ ಬಾಗೇಪಲ್ಲಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಇಂದು ಭೂಮಿ ಪೂಜೆ ನೆರವೇರಿಸಿದರು.
ಬಾಗೇಪಲ್ಲಿ ತಾಲೂಕಿನ ಕೊತ್ತಕೋಟೆ ಗ್ರಾಮದಲ್ಲಿ ಶ್ರೀ ಯೋಗಿನಾರೇಯಣ ಟ್ರಸ್ಟ್ನಿಂಜ ಕೈವಾರ ತಾತಯ್ಯನವರ ದೇವಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಕೈವಾರ ದೇವಾಲಯದ ಧರ್ಮಾಧಿಕಾರಿ ಎಂ.ಆರ್. ಜಯರಾಂ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮತ್ತು ಟ್ರಸ್ತ್ ಪದಾಧಿಕಾರಿಗಳು ಭೂಮಿಪೂಜೆ ನೆರವೇರಿಸಿದ್ದು, ಈ ಸಂದರ್ಭದಲ್ಲಿ ಕೊತ್ತಕೋಟೆ ಗ್ರಾಮದ ಮಹಿಳೆಯರು ಪೂರ್ಣಕುಂಬ ದೊಂದಿಗೆ ಸ್ವಾಗತ ಕೊರಿದರು.
ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಎಂ.ಆರ್. ಜಯರಾಂ, ಗುರುಗಳಲ್ಲಿ ಅನನ್ಯ ಭಕ್ತಿಯಿಂದ ಶರಣಾಗತಿಯಾದರೆ, ಮುಂದಿನ ಬದುಕನ್ನು ಅವರೇ ರೂಪಿಸುತ್ತಾರೆ. ಮಾನವ ಜನ್ಮವನ್ನು ವ್ಯರ್ಥಮಾಡಿಕೊಳ್ಳದೆ, ಸದುಪಯೋಗ ಮಾಡಿಕೊಳ್ಳಬೇಕಾದರೆ ಗುರುವಿನ ಅನುಗ್ರಹ ಬೇಕು. ನಮ್ಮಲ್ಲಿರುವ ಅವಿದ್ಯೆಗಳನ್ನು ತೆಗೆದುಹಾಕುವ ಶಕ್ತಿ ಗುರುವಿಗೆ ಮಾತ್ರವಿದೆ ಎಂದು ತಿಳಿಸಿದರು.
ಮಾನವರ ಬದುಕಿನಲ್ಲಿ ಮಾಯೆ ಬಹು ಮಹತ್ವದ ಪಾತ್ರ ವಹಿಸುತ್ತದೆ. ಮಾಯೆ ಪೊರೆ ಕಳಚಿದರೆ ಮಾತ್ರ ನಿಜ ಬದುಕಿನ ಮರ್ಮ ತಿಳಿಯುತ್ತದೆ. ಮಾನವರು ದೇಹವೇ ನಿತ್ಯವೆಂಬ0ತೆ ಭವಿಸಿ ವರ್ತಿಸುತ್ತಿದ್ದಾರೆ. ಆದುದರಿಂದ ದೇಹ ನೋಡಬಲ್ಲರೇ ಹೊರತು ದೇಹದ ಒಳಗಿರುವ ತಾರಕಜ್ಯೋತಿ ಕಾಣಲು ಸಾಧ್ಯವಿಲ್ಲ ಎಂದರು.
ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಮಾತನಾಡಿ, ಧರ್ಮಾಧಿಕಾರಿ ಎಂ. ಆರ್. ಜಯರಾಂ ಅವರು ಧೈವ ಸಂಭೂತರು ಅವರ ಸೇವಾ ಕಾರ್ಯವಾದ ದೇವಾಲಯದ ನಿರ್ಮಾಣಕ್ಕೆ ಕೈಜೋಡಿಸುತ್ತೇನೆ ಎಂದರು. ದೇವಾಲಯ ನಿರ್ಮಾಣ ಮಾಡುವುದು ದೊಡ್ಡ ವಿಚಾರವಲ್ಲ ಆ ದೇವಾಲಯದಲ್ಲಿ ದಿನನಿತ್ಯ ದೀಪ ಬೆಳಗಿಸಬೇಕು ಎಂದರು. ಈ ಸಂದರ್ಭದಲ್ಲಿ ಅರಕೆರೆ ಕೃಷ್ಣಾರೆಡ್ಡಿ, ಹೆಚ್.ವಿ. ನಾಗರಾಜ್. ಯೋಗಿ ನಾರಾಯಣ ಟ್ರಸ್ಟಿನ ಸದಸ್ಯ ನರಸಿಂಹಯ್ಯ, ಬಲಿಜ ಸಂಘದ ಅಧ್ಯಕ್ಷ ಬಿ.ಎನ್.ಶ್ರೀನಿವಾಸ್, ಶ್ರೀನಿವಾಸರೆಡ್ಡಿ, ಪ್ರಭಾರ್ಕ ರೆಡ್ಡಿ, ಪುರಸಭೆ ಉಪಾಧ್ಯಕ್ಷರಾದ ಸುಜಾತ ನರಸಿಂಹನಾಯ್ಡು, ನರಸಿಂಹ ನಾಯ್ಡು, ವಕೀಲರಾದ ಎ.ಜಿ. ಸುಧಾಕರ್ ಇದ್ದರು.