ಸಚಿವ ಡಾ ಎಂ ಸಿ ಸುಧಾಕರ್‌ರಿಂದ ಭೂಮಿ ಪೂಜೆ
1 min read3 ಕೋಟಿ ವೆಚ್ಚದ ಗಾಂಧಿ ಭವನ ಲೋಕಾರ್ಪಣೆ
ಜಿಲ್ಲಾಸ್ಪತ್ರೆ ಆವರಣದಲ್ಲಿ ರೇಡಿಯಾಲಜಿ ಬ್ಲಾಕ್‌ಗೆ ಭೂಮಿಪೂಜೆ
ಸಚಿವ ಡಾ ಎಂ ಸಿ ಸುಧಾಕರ್‌ರಿಂದ ಭೂಮಿ ಪೂಜೆ
ಚಿಕ್ಕಬಳ್ಳಾಪುರ ನಗರದ ಕೆ ಎಸ್ ಆರ್‌ಟಿ ಸಿ ಬಸ್ ನಿಲ್ದಾಣದ ಮುಂಭಾಗ ೩ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಗಾಂಧಿ ಭವನವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ ಸಿ ಸುಧಾಕರ್ ಲೋಕಾರ್ಪಣೆ ಮಾಡಿದರು. ನೂತನ ಗಾಂಧಿ `ಭವನದಲ್ಲಿ ಎರಡು ಅಂತಸ್ತಿನ `ಭವ್ಯ ಕಟ್ಟಡ ಎಲ್ಲರ ಮನಸೊರೆಗೊಳ್ಳುತ್ತಿದೆ.
ಗಾಂಧಿಭವನದ ಮುಂಭಾಗ ಗಾಂಧೀಜಿಯವರ ಪ್ರತಿಮೆಗಳು ಎಲ್ಲರ ಕಣ್ಣು ಕುಕ್ಕುವಂತಿವೆ. ನೆಲ ಅಂತಸ್ತಿನಲ್ಲಿ ಕಸ್ತೂರಿ ಬಾ ಸಭಾಂಗಣ, ತರಬೇತಿ ಕೇಂದ್ರ, ಹೃದಯ ಪುಂಜ ಗಾಂಧೀಜಿಯವರ ಯೋಗ ಪ್ರತಿಮೆ, ಗ್ರಂಥಾಲಯ, ಮೋಹನ್ ದಾಸ್ ರಿಂದ ಮಹಾತ್ಮ ಗಾಂಧೀಜಿಯವರ ಜೀವನಾಧಾರಿತ ಛಾಯಾಚಿತ್ರ ಪ್ರದರ್ಶನ, ನ್ಯೂಸ್ ಕಾನ್ಫರೆನ್ಸ್ ರೂಂ , ಮ್ಯೂಸಿಯಂ ಸೇರಿದಂತೆ ಗಾಂಧೀಜಿಯವರ ಚರಕ ಪ್ರತಿಮೆ ನಿರ್ಮಿಸಲಾಗಿದೆ. ಮೂರು ಕೋತಿಗಳು ಪ್ರತಿಮೆಗಳು, ಗಾಂಧಿ ಹಾಗೂ ಮೊಮ್ಮಗ ನಡಿಗೆ ಪ್ರತಿಮೆ. ಗಾಂಧಿ ಮ್ಯೂರಲ್, ಹಾಗೂ ಕೆಸರಲ್ಲಿ ಬಿದ್ದ ಬಾಲಕನಿಗೆ ಸಹಾಯಹಸ್ತ ಚಾಚುತ್ತಿರುವ ಗಾಂಧಿ ಹೀಗೆ ಹತ್ತು ಹಲವು ವೈಶಿಷ್ಠತೆಯ ಪ್ರತಿಮೆಗಳ ಮೂಲಕ ಗಾಂಧಿಭವನ ಕಳೆಗಟ್ಟಿದೆ.
ನಂತರ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ರೇಡಿಯಾಲಜಿ ವಿಭಾಗ ಆರಂಭ ಮಾಡಲು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ ಸಿ ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಭೂಮಿ ಪೂಜೆ ನೇರವೇರಿಸಿದರು. 8.20 ಕೋಟಿ ವೆಚ್ಚದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅನುದಾನದಲ್ಲಿ ಈ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ರೇಡಿಯಾಲಜಿ ವಿಭಾಗದಲ್ಲಿ 12 ಕೋಟಿ ವೆಚ್ಚದ ಎಂಆರ್‌ಐ, ಸಿಟಿ ಸ್ಕಾನ್, ಎಕ್ಸ್ ರೇ, ರಕ್ತ ಪರೀಕ್ಷಾ ಕೇಂದ್ರ ಸೇರಿ ಸುಸಜ್ಜಿತ ಎಲ್ಲಾ ಸೌಲಭಗಳು ಇದರಲ್ಲಿರಲಿವೆ. 8 ತಿಂಗಳ ಅವಧಿಯಲ್ಲಿ ಈ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣ ಮಾಡಲು ಗುತ್ತಿಗೆದಾರರಿಗೆ ತಿಳಿಸಲಾಯಿತು. ಈ ವೇಳೆ ಮಾತನಾಡಿದ ಸಚಿವ ಸುಧಾಕರ್, ಈ ಹಿಂದೆ ಹಾಲಿ ಸಂಸದ ಡಾ ಕೆ ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾಗಿದ್ದರು. ಆದರೆ ಅವರಿಗೆ ಜಿಲ್ಲಾಸ್ಪತ್ರೆಗೆ ಒಂದು ಎಂಆರ್‌ಐ ತರುಲು ಸಾಧ್ಯವಾಗಲಿಲ್ಲವಾ ಎಂದು ಪ್ರಶ್ನಿಸಿದರು.
ಆಗಿನ ಸಚಿವರಾಗಿದ್ದ ಸುಧಾಕರ್ ಅವರ ಕೈಯಲ್ಲೆ ಎಲ್ಲಾ ಆಧಿಕಾರ ಇದ್ದರೂ ಅವರ ಕೈಯಲ್ಲಿ ಮಾಡಲಾಗಲಿಲ್ಲ. ಆದರೆ ಇಂದು ನಾವು ಅನುದಾನ ಇಲ್ಲದಿದ್ದರೂ ಕಷ್ಟಪಟ್ಟು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹಣ ಪಡೆದು ಕಟ್ಟಡ ಕಾಮಗಾರಿ ಆರಂಭಿಸಿದ್ದೇವೆ ಎಂದು ಸಂಸದ ಡಾ.ಕೆ. ಸುಧಾಕರ್ ಅವರಿಗೆ ಟಾಂಗ್ ನೀಡಿದರು.
ಚಿಕ್ಕಬಳ್ಳಾಪುರ ನಂದಿ ಮೆಡಿಕಲ್ ಕಾಲೇಜು ವಿಚಾರದಲ್ಲಿ ಸಂಸದ ಸುಧಾಕರ್ ಹಾಗೂ ಸಚಿವ ಸುಧಾಕರ್ ಮಧ್ಯ ಟಾಕ್ ವಾರ್ ಮುಂದುವೆರೆದಿದೆ. ಮೆಡಿಕಲ್ ಕಾಲೇಜು ಕಟ್ಟಡ ಪೇರೆಸಂದ್ರದ ಬಳಿ ನಿರ್ಮಾಣ ಮಾಡಿದ ವಿಚಾರಕ್ಕೆ ಈ ಹಿಂದೆ ಸಂಸದ ಸುಧಾಕರ್ ಮೆಡಿಕಲ್ ಕಾಲೇಜು ಅಲ್ಲಿ ಮಾಡಿದ ಕಾರಣ 350 ಕೋಟಿ ಹೆಚ್ಚಾಯ್ತು ಎಂದು ಸಚಿವ ಸುಧಾಕರ್ ಹೇಳಿದ್ದರು. ಇದೇ ವಿಚಾರಕ್ಕೆ ಸಚಿವ ಸುಧಾಕರ್ ರಾಜಮನೆತನದವರು ಚಿಕ್ಕಬಳ್ಳಾಪುರ ನಗರದ ಬಳಿ ನೂರು ಎಕರೆ ಕೊಡಲಿ ಎಂದು ಸಂಸದ ಸುಧಾಕರ್ ತಿರುಗೇಟು ನೀಡಿದ್ದರು.
ಈಗ ಮತ್ತೆ ಸಂಸದ ಸುಧಾಕರ್ ಮಾತಿಗೆ ಕೆರಳಿರುವ ಸಚಿವ ಸುಧಾಕರ್, ಸದಾಶಿವನಗರದಲ್ಲಿ ನನಗೆ ಭವ್ಯ ಬಂಗಲೆ ಇಲ್ಲ. ನಮ್ಮ ತಂದೆಯವರಿಗೆ ಬಂದ ಬದಲಿ ನಿವೇಶನಕ್ಕೆ ಒಂದೂವರೆ ಲಕ್ಷ ಹಣ ಕಟ್ಟಿ ಪಡೆದಿರೋದು, ಬ್ಯಾಂಕ್ ಸಾಲ ಪಡೆದು ಮನೆ ಕಟ್ಟಿರೋದು. ಮೇಷ್ಟು ಮಗ ಅಂತ ಹೇಳುವ ಸಂಸದ ಸುಧಾಕರ್ ಸಾವಿರಾರು ಕೋಟಿ ಒಡೆಯ ಹೇಗಾದ ಅಂತ ಹೇಳಲಿ, ನಾನು ರಾಜಮನೆತನದವಲ್ಲ ೪ನೇ ತಲೆಮಾರಿನ ರಾಜಕಾರಣಿ. ನಮ್ಮ ಆಸ್ತಿ ಎಷ್ಟಿದೆ ನೋಡಬಹುದು, ನಮಗ್ಯಾರು ಬೇನಾಮಿಗಳಿಲ್ಲ. ನಾನು ಖಾಸಗಿ ಜೆಟ್ ಗಳಲ್ಲಿ ಒಡಾಡೋವನಲ್ಲ, ಪ್ರೆವೇಟ್ ಬಾಡಿಗಾರ್ಡ್ ಇಟ್ಕೊಂಡವನಲ್ಲ, ರಿಲಯನ್ಸ್, ಕೋವಿಡ್, ಇದ್ಯಾವದೂ ನಾನು ಮಾಡಿದವನಲ್ಲ ಸಾವಿರ ಕೋಟಿ ಜಮೀನು ಮಾಡಿದವನಲ್ಲ. ರಾಜರ ಥರ ಗಾಂಭಿರ್ಯ ಪಟ್ಟ ಇಟ್ಕೊಳ್ಳದೆ ಅಧಿಕಾರ ಮಾಡ್ತಿರೋದು ನೀವು, ಸಂಸದ ಸುಧಾಕರ್ ಬಾಯಿಗೆ ಮೆದುಳಿಗೆ ಸಂಬ0ಧ ಇಲ್ಲ. ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ, ನಾನು ಮಕ್ತವಾಗಿ ಚರ್ಚೆ ಮಾಡಲು ಸಿದ್ದ, ಕಮ್ ಟು ದ ಪಾಯಿಂಟ್ ಸ್ಪೀಕ್ ಎಬೋಟ್ ಸಬ್ಜೆಕ್ಟ್ ಅಂತ ಸಂಸದ ಸುಧಾಕರ್‌ಗೆ ಸಚಿವ ಸುಧಾಕರ್ ಸವಾಲು ಹಾಕಿದರು.