ನಾಳೆ ʻರಾಜಸ್ಥಾನʼದ ನೂತನ ಮುಖ್ಯಮಂತ್ರಿಯಾಗಿ ʻಭಜನ್ ಲಾಲ್ ಶರ್ಮಾʼ ಪ್ರಮಾಣ ವಚನ ಸ್ವೀಕಾರ
1 min readಭಾರತೀಯ ಜನತಾ ಪಕ್ಷದ ನಾಯಕ ಭಜನ್ ಲಾಲ್ ಶರ್ಮಾ(Bhajan Lal Sharma) ಶುಕ್ರವಾರ, ಡಿಸೆಂಬರ್ 15 ರಂದು(ನಾಳೆ) ಜೈಪುರದಲ್ಲಿ ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೂಲಗಳ ಪ್ರಕಾರ ಶರ್ಮಾ ಅವರ ಹೆಸರನ್ನು ಪಕ್ಷದ ಹಿರಿಯ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಪ್ರಸ್ತಾಪಿಸಿದ್ದಾರೆ.
ನಿಯೋಜಿತ ಸಿಎಂ ಮಂಗಳವಾರ ಸಂಜೆ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿಯಾಗಿ ರಾಜಸ್ಥಾನದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸಿಪಿ ಜೋಶಿ ಅವರು ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದು, ಶರ್ಮಾ ಅವರನ್ನು ರಾಜ್ಯದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.