ಭಾಗ್ಯಲಕ್ಷ್ಮಿ ಬಾಂಡ್, ಆರೋಗ್ಯ ಕಿಟ್ ವಿತರಿಸಿದ ಶಾಸಕ ಸುಬ್ಬಾರೆಡ್ಡಿ
1 min readಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್
ಭಾಗ್ಯಲಕ್ಷ್ಮಿ ಬಾಂಡ್, ಆರೋಗ್ಯ ಕಿಟ್ ವಿತರಿಸಿದ ಶಾಸಕ ಸುಬ್ಬಾರೆಡ್ಡಿ
ಆಧುನಿಕತೆಯ ತಂತ್ರನ ಮುಂದುವರೆದಿದ್ದು, ತಂತ್ರನ ಬಳಸಿಕೊಂಡು ವೃತ್ತಿಯಲ್ಲಿ ಕೌಶಲ್ಯ ವೃದ್ಧಿಸಿಕೊಂಡು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ತಿಳಿಸಿದರು. ಬಾಗೇಪಲ್ಲಿ ದೇವರಾಜು ಅರಸು ಭವನದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣ್ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್, ಭಾಗ್ಯಲಕ್ಷಿ ಬಾಂಡ್, ಆರೋಗ್ಯ ಕಿಟ್ ವಿತರಿಸಿ ಅವರು ಮಾತನಾಡಿದರು.
ಆಧುನಿಕತೆಯ ತಂತ್ರನ ಮುಂದುವರೆದಿದ್ದು, ತಂತ್ರನ ಬಳಸಿಕೊಂಡು ವೃತ್ತಿಯಲ್ಲಿ ಕೌಶಲ್ಯ ವೃದ್ಧಿಸಿಕೊಂಡು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು. ಬಾಗೇಪಲ್ಲಿ ದೇವರಾಜು ಅರಸು ಭವನದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣ್ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್, ಭಾಗ್ಯಲಕ್ಷಿ ಬಾಂಡ್, ಆರೋಗ್ಯ ಕಿಟ್ ವಿತರಿಸಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವಾರು ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹಳಷ್ಟು ಮುಖ್ಯ. ಹಾಗಾಗಿ ಯೋಜನೆಗಳಿಗೆ ಮೂಲಾಧಾರವಾದ ಸಮೀಕ್ಷೆ, ಅಂಕಿ ಸಂಖ್ಯೆ ಎಲ್ಲವನ್ನೂ ಸಕಾಲಕ್ಕೆ ನಿಖರವಾಗಿ ಸರಕಾರಕ್ಕೆ ಕೊಡುವ ಕೆಲಸ ಮಾಡುತ್ತಿರುವುದು ನಿಮ್ಮ ಕರ್ತವ್ಯನಿಷ್ಟೆಗೆ ನಿದರ್ಶನ ಎಂದರು.
ಅAಗನವಾಡಿ ಕಾರ್ಯಕರ್ತೆಯರ ಕೆಲಸಗಳಿಗೆ ಮೊಬೈಲ್ ಸಹಕಾರಿಯಾಗಲಿದೆ. ತಂತ್ರನ ಬೆಳೆಸಿಕೊಂಡು ಉತ್ತಮ ಕಾರ್ಯನಿರ್ವಹಿಸಿ, ತಾಲೂಕಿನಲ್ಲಿ ಬಾಲ್ಯ ವಿವಾಹ ಹೆಚ್ಚಾಗುತ್ತಿದೆ ಅದನ್ನು ತಡೆಯುವ ಜವಾಬ್ದಾರಿ ನಮ್ಮದು. ಯಾವುದೇ ಬಾಲ್ಯ ವಿವಾಹ ಕಂಡುಬoದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧವಿದೆ. ಎಲ್ಲರೂ ಕೈ ಜೋಡಿಸಿ ಕೆಲಸ ಮಾಡಿದರೆ ಬಾಲ್ಯ ವಿವಾಹವನ್ನು ತಡೆಯಬಹುದು ಎಂದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಕೆ.ವಿ. ರಾಮಚಂದ್ರ ಮಾತನಾಡಿ, ತಾಲ್ಲೂಕಿನಲ್ಲಿನ ೩೮೪ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ಪೋಷಣ್ ಅಭಿಯಾನದಡಿ ಮೊಬೈಲ್, 570ಭಾಗ್ಯಲಕ್ಷಿö್ಮ ಬಾಂಡ್ ಹಾಗೂ ೩೮೪ ಆರೋಗ್ಯ ಕಿಟ್ ಗಳನ್ನು ಶಾಸಕರು ಸಾಂಕೇತಿಕವಾಗಿ ವಿತರಿಸಿದರು. ಈ ಮೊಬೈಲ್ ಆಪ್ ಮೂಲಕ ಗರ್ಭಿಣಿ ಬಾಣಂತಿ ಮಕ್ಕಳಿಗೆ ಪೌಷ್ಟಿಕ ಆಹಾರ ಸೇರಿದಂತೆ ಇತರೆ ಪದಾರ್ಥಗಳ ವಿತರಣೆ ಮಾಡಿ ಅವುಗಳಿಂದಾಗುವ ಉಪಯೋಗ ಇನ್ನಿತರೆ ಅಂಕಿ ಅಂಶಗಳ ದಾಖಲೀಕರಣವನ್ನು ಈ ಮೊಬೈಲ್ ಆಪ್‌ನಲ್ಲೇ ಮಾಡಬೇಕು ಎಂದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಪೋಷಣ್ ಅಭಿಯಾನದ ಪ್ರಗತಿಯನ್ನು ಅಲ್ಲಿಂದಲೆ ಪರಿಶೀಲಿಸಬಹುದು, ಈ ನಿಟ್ಟಿನಲ್ಲಿ ಈ ಮೊಬೈಲ್ ಆಪ್ ನೆರವಾಗಲಿದ್ದು ಮೊಬೈಲ್ ಬಳಕೆ ಕುರಿತು ಈಗಾಗಲೆ ಎಲ್ಲ ಕಾರ್ಯಕರ್ತೆಯರಿಗೂ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು. ಪೋಷಣ ಟ್ರಾö್ಯಕರ್ ಆಪ್‌ನಲ್ಲಿ ಕೇಂದ್ರಗಳ ದೈನಂದಿನ ಚಟುವಟಿಕೆ, ಗರ್ಭಿಣಿ, ಬಾಣಂತಿ, ಮಕ್ಕಳ ದಾಖಲಾತಿ ಹಾಗೂ ಹಾಜರಾತಿ, ಬೆಳಗಿನ ಅವಧಿಯ ಉಪಹಾರ, ಮಧ್ಯಾಹ್ನದ ಬಿಸಿಯೂಟ, ವೈಯಕ್ತಿಕ ನೈರ್ಮಲ್ಯ ಮತ್ತು ಮನೆಗಳಿಗೆ ಭೇಟಿ ನೀಡಿದ ವಿವರಗಳನ್ನು ನಿತ್ಯವೂ ಅಳವಡಿಸುವುದು ಕಡ್ಡಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್. ಸತ್ಯನಾರಾಯಣ ರೆಡ್ಡಿ, ರಘುನಾಥ ರೆಡ್ಡಿ, ನರಸಿಂಹಪ್ಪ, ಬಿ.ವಿ. ವೆಂಕಟರವಣ, ಮೇಲ್ವಿಚಾರಕಿ ಅನಸೂಬಾಯ್, ಬಸವ್ವ ,ಚೈತನ್ಯ, ರಾಧಿಕಾ ಸುಜಾತಾ ಇದ್ದರು.