ಬಾಗೇಪಲ್ಲಿಯಲ್ಲಿ ಹೆಚ್ಚಾದ ಭಿಕ್ಷಾಟನೆ
1 min readಬಾಗೇಪಲ್ಲಿಯಲ್ಲಿ ಹೆಚ್ಚಾದ ಭಿಕ್ಷಾಟನೆ
ಅಪ್ರಾಪ್ತ ಮಕ್ಕಳಿಂದಲೇ ಹೆಚ್ಚು ಭಿಕ್ಷಾಟನೆ
ಕಡಿವಾಣ ಹಾಕುವಲ್ಲಿ ಸಂಬ0ಧಿಸಿದ ಅಧಿಕಾರಿಗಳು ವಿಲ
ಅವರೆಲ್ಲ ಅಪ್ರಾಪ್ತ ಬಾಲಕ ಬಾಲಕಿಯರು. ಶಾಲೆಗೆ ಹೋಗಿ ಕಲಿಯುವುದು, ಸಹಪಾಠಿ ಮಕ್ಕಳೊಂದಿಗೆ ಆಡಿ ಕುಣಿಯಬೇಕಾದ ವಯಸ್ಸು. ಆ ಮಕ್ಕಳಿಗೆ ಕಷ್ಟ ಏನೆಂಬುದೇ ತಿಳಿಯದ ವಯಸ್ಸಾಗಿದ್ದು, ಎಲ್ಲ ಮಕ್ಕಳಂತೆ ಬೆಳೆಯ ಬೇಕಾದ ಮಕ್ಕಳು ಬೀದಿಯಲ್ಲಿ ಭಿಕ್ಷೆ ಬೇಡುತ್ತಿವೆ. ಆದರೆ ಸಂಬ0ಧಿಸಿದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಕಾರಣ ಆ ಮಕ್ಕಳ ಭವಿಷ್ಯ ಬಾಲ್ಯದಲ್ಲಿಯೇ ಕಮರುತ್ತಿದೆ.
ಹೌದು ಮಕ್ಕಳು ದೇವರಿಗೆ ಸಮಾನ ಎಂಬ ಮಾತಿದೆ. ಬಾಲ್ಯದಲ್ಲಿ ಮಕ್ಕಳನ್ನು ಹೇಗೆ ಬೆಳೆಸಿದರೆ ಹಾಗೆ ಅವರ ಮುಂದಿನ ಭವಿಷ್ಯ ರೂಪುಗೊಳ್ಳುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತು ಇದ್ದು, ಈ ನಿಟ್ಟಿನಲ್ಲಿ ಕ್ರಮ ಜರುಗಿಸುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂಬುದಕ್ಕೆ ಬಾಗೇಪಲ್ಲಿಯ ಬಸ್ ನಿಲ್ದಾಣ, ಪ್ರಮುಖ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿರುವ ಮಕ್ಕಳೇ ನಿದರ್ಶನವಾಗಿದ್ದಾರೆ.
ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಹದಿಹರೆಯದ ಬಾಲಕ, ಬಾಲಕಿಯರು ಹಾಗೂ ಮಹಿಳೆಯರ ಭಿಕ್ಷಾಟನೆ ಹೆಚ್ಚಾಗಿದೆ.
ಜೋಲಿಗೆ ಹಿಡಿದು ಪುಟ್ಟಕಂದಮ್ಮಗಳನ್ನು ಅದರಲ್ಲಿ ಹಾಕಿಕೊಂಡು, ಹಸು, ದನಗಳನ್ನು ಹಿಡಿದುಕೊಂಡು ಅಂಗಡಿ, ಹೋಟೆಲ್, ಸರ್ಕಾರಿ ಕಚೇರಿಗಳ ಮುಂದೆ ನಿಂತು ಭಿಕ್ಷಾಟನೆ ಮಾಡುವುದು ಸಾಮಾನ್ಯವಾಗಿದೆ. ಈ ರೀತಿ ಪ್ರತಿನಿತ್ಯ ಅಪ್ರಾಪ್ತರು ಭಿಕ್ಷೆ ಬೇಡುತ್ತಿದ್ದರೂ ಇವರನ್ನು ರಕ್ಷಿಸಬೇಕಾದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಪ್ರತಿ ನಿತ್ಯ ಪಟ್ಟಣದ ಪ್ರಮುಖ ಬಾದಿಯಲ್ಲಿ ಭಿಕ್ಷೆ ಬೇಡುತೇತಿದ್ದರೂ ಸಂಬ0ಧಪಟ್ಟ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಾಣಮೌನ ತೋರುತ್ತಿದ್ದಾರೆ. ಪಟ್ಟಣದ ಸಾರಿಗೆ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ನಿಲ್ಲಿಸಿದ ಬಸ್‌ಗಳ ಕಿಟಕಿಗಳ ಬಳಿ ಮಕ್ಕಳು, ಮಹಿಳೆಯರು ಭಿಕ್ಷಾಟನೆ ಮಾಡುತ್ತಿದ್ದಾರೆ. ತಾಲ್ಲೂಕು ಕಚೇರಿ, ಡಾ.ಎಚ್.ಎನ್. ವೃತ್ತ, ಕುಂಬಾರಪೇಟೆ ವೃತ್ತ, ಭಜನ ಮಂದಿರ ರಸ್ತೆ ವೃತ್ತ, ಸರ್ಕಾರಿ ಆಸ್ಪತ್ರೆ ಮುಂತಾದ ಪ್ರದೇಶಗಳಲ್ಲಿ ಭಿಕ್ಷೆ ಬೇಡುವುದು ಸಾಮಾನ್ಯವಾಗಿದೆ.
ಇನ್ನು ಪೊಲೀಸ್ ಠಾಣೆ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಾರೆ. ಜನರ ಬಳಿಗೆ ಮಕ್ಕಳನ್ನು ಕಳಿಸಿ ಭಿಕ್ಷಾಟನೆ ಮಾಡಿಸುತ್ತಿದ್ದಾರೆ. ಸಾಲದೆಂಬ0ತೆ ಕಾರ್ತಿಕ ಮಾಸದಲ್ಲಿ ದನ, ಹಸುಗಳ ಪೂಜೆಗೆ ಪ್ರಾಮುಖ್ಯತೆ ಇರುವುದರಿಂದ ಇದನ್ನೇ ಮಹಿಳೆಯರು, ಹೆಣ್ಣುಮಕ್ಕಳು ನೆಪ ಮಾಡಿಕೊಂಡು ಹಸುಗಳನ್ನು ತೋರಿಸುತ್ತಾ ಭಿಕ್ಷಾಟನೆಗೆ ಮುಂದಾಗಿದ್ದಾರೆ.
ಈ ಬಿಕ್ಷಾಟನೆಯಲ್ಲಿ ತೊಡಗಿರುವ ಪುಟಾಣಿಗಳನ್ನು ಅವರ ಶಿಕ್ಷಣ, ವಿಳಾಸ ಮತ್ತಿತರ ವಿಷಯಗಳ ಕುರಿತು ಕೇಳಿದರೆ, ನಮ್ಮದು ಆಂಧ್ರಪ್ರದೇಶದ ಗುಂಟೂರು ಎಂದು ಹೇಳಿ, ನಾವು ಕೋಲೆ ಬಸವ ಆಡಿಸುವವರಾಗಿದ್ದೇವೆ. ಹಲವು ತಿಂಗಳುಗಳ ಕಾಲ ಬಾಗೇಪಲ್ಲಿಯಂತಹ ಪಟ್ಟಣಗಳಲ್ಲಿ ಜೀವನ ಸಾಗಿಸುತ್ತೇವೆ. ಬಿಕ್ಷಾಟನೆಯೇ ನಮಗೆ ಬದುಕು ಎಂದು ಮಾಹಿತಿ ನೀಡಿದ್ದಾರೆ. ಶಾಲೆಯ ವಿಚಾರ ಕೇಳಿದಾಗ, ನಮಗೂ ಶಾಲೆಗೂ ಬಲು ದೂರ ಎನ್ನುವಂತಿತ್ತು ಅವರ ಮೌನ.
ಒಟ್ಟಿನಲ್ಲಿ ಮುಂದಿನ ಪ್ರಜೆಗಳ ಭವಿಷ್ಯ ಹಾಳುಗೆಡುವುತ್ತಿರುವುದು ಅದೇ ಮಕ್ಕಳ ಪೋಷಕರೇ ಅಥವಾ ಇದೊಂದು ದಂಧೆಯೇ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಭಿಕ್ಷಾಟನೆ ಮಡಾಉತ್ತಿರುವ ಮಕ್ಕಳನ್ನು ರಕ್ಷಿಸಿ, ಅವರ ಭವಿಷ್ಯ ರೂಪಿಸುವತ್ತ ಕ್ರಮ ಜರುಗಿಸಲು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.