ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಸ್ಕಂದಗಿರಿ ಬೆಟ್ಟದಲ್ಲಿ ಪ್ರತ್ಯಕ್ಷವಾದ ಕರಡಿಗಳು

1 min read

ಸ್ಕಂದಗಿರಿ ಬೆಟ್ಟದಲ್ಲಿ ಪ್ರತ್ಯಕ್ಷವಾದ ಕರಡಿಗಳು
ಈ ಬೆಟ್ಟಕ್ಕೆ ಹೋಗುತ್ತಿದ್ದ ಚಾರಣಿಗರ ಎದೆಯಲ್ಲಿ ಢವ ಢವ
ಮರಿಗಳೊಂದಿಗೆ ತಾಯಿ ಕರಡಿ ಸಂಚಾರದ ವಿಡಿಯೋ ವೈರಲ್

ಅದು ಹೇಳಿ ಕೇಳಿ ಚಾರಣಿಗರ ಫೇವರೆಟ್ ಪ್ಲೇಸ್. ವೀಕೆಂಡ್ ಬಂತು ಅಂದ್ರೆ ಅಲ್ಲಿಗೆ ಸಾವಿರಾರು ಪ್ರವಾಸಿಗರು ಬರ್ತಾರೆ. ಹಾಗೆ ಬರೋ ಪ್ರವಾಸಿಗರು ಚಾರಣ ಮಾಡೋ ಉಧ್ಧೇಶದಿಂದಲೇ ಅಲ್ಲಿಗೆ ಬರ್ತಾರೆ ಅನ್ನೋ ಹೇಳಬೇಕಿಲ್ಲ ತಾನೇ, ಅದ್ರೆ ಇದೀಗ ಆ ಚಾರಣಿಗಳರ ಎದೆಯಲ್ಲಿ ನಡುಕ ಆರಂಭವಾಗಿದೆ. ಅದಕ್ಕೆ ಕಾರಣ ಅಲ್ಲಿ ಕಾಣಿಸಿಕೊಂಡಿರೋ ಕರಡಿಗಳು.

ಹೌದು, ವನ್ಯಜೀವಿಗಳೆಂದರೆ ಎಲ್ಲರಿಗೂ ಪ್ರೀತಿ ಇದ್ದೇ ಇರುತ್ತೆ. ಆದರೆ ಅವು ಮಾಂಸಹಾರಿ ಪ್ರಾಣಿಗಳಾಗಿದ್ರೆ ಮಾತ್ರ ಹೆದರಿ ಓಡಿಹೋಗೋರು ಕಡಿಮೆ ಇಲ್ಲ. ಯಾಕೆಂದರೆ ಅವುಗಳ ತಂಟೆಗೆ ಹೋದರೆ, ತಂಟೆಗೆ ಹೋಗೋದೇನು ಬಂತು, ಕಾಡಿನ ಮಧ್ಯೆ ಅವುಗಳಿಗೆ ಅಪ್ಪಿ ತಪ್ಪಿ ಎದುರಾದರೆ ಪರಿಸ್ಥಿತಿ ಏನಾಗಬಹುದು ಇನ್ನೋದನ್ನ ವಿವರಿಸಿ ಹೇಳಬೇಕಿಲ್ಲ. ಇಲ್ಲಿಯೂ ಅದೇ ಆಗಿದೆ. ಚಾರಣ ಮಾಡುತ್ತಿದ್ದ ಬೆಟ್ಟಕ್ಕೆ ಮರಿಗಳ ಸಮೇತ ಕರಡಿ ವಕ್ಕರಿಸಿದೆ. ಅದನ್ನು ಯಾರೋ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ. ಪರಿಣಾಮ ಚಾರಣಿಗರಲ್ಲಿ ಆತಂಕ ಆರಂಭವಾಗಿದೆ.

ಪoಚ ನಂದಿಗಳ ಬೀಡು ಎಂದೆ ಖ್ಯಾತಿ ಪಡೆರುವ ಚಿಕ್ಕಬಳ್ಳಾಪುರ ಜಿಲ್ಲೆ ಹಲವು ಪ್ರವಾಸಿ ತಾಣಗಳನ್ನು ಹೊಂದಿದೆ. ಪ್ರೇಮಿಗಳ ಹಾಟ್ ಸ್ಪಾಟ್ ಆಗಿರುವ ನಂದಿ ಗಿರಿಧಾಮಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗ್ತಾರೆ. ಅದೇ ರೀತಿ ಪಕ್ಕದಲ್ಲೇ ಇರುವ ಕಳವಾರ ಗ್ರಾಮದ ಸ್ಕಂದಗಿರಿ ಬೆಟ್ಟ ವೀಕೆಂಡ್ ಟ್ರಕ್ಕಿಂಗ್ ಮಾಡಲು ಫೇವರೆಟ್ ಆಗಿದೆ. ಸ್ಕಂದಗಿರಿ ಮೇಲೆ ಹೋಗುತ್ತಿದ್ದಂತೆ ನಿಮಗೆ ಮೋಡಗಳ ಮೇಲೆ ನಡೆಯುವ ಅನುಭವವಾಗುತ್ತದೆ.

ಮೋಡಗಳ ಹಾಸಿಗೆಯ ಮೇಲೆ ಸನ್ ರೈಸ್ ನೋಡಲು ಎರಡು ಕಣ್ಣುಗಳು ಸಾಲದು, ಸ್ಕಂದಗಿರಿಯ ಮಂಜು ಕಣಿವೆ ನಿಮ್ಮ ಮನಸ್ಸಿನಲ್ಲಿ ಶಾಶ್ವತವಾದ ಪ್ರಭಾವ ಬೀರುತ್ತದೆ ಅಂತಹಾ ತಾಣದಲ್ಲಿ ಈಗ ಮೂರು ಕರಡಿಗಳು ಪ್ರತ್ಯಕ್ಷವಾಗಿವೆ. ಚಾರಣಿಗರ ಎದೆಯಲ್ಲಿ ಇದರಿಂದ ಢವ ಢವ ಶುರುವಾಗಿದೆ.

ಸ್ಕಂದಗಿರಿ ಬೆಟ್ಟಕ್ಕೆ ಚಾರಣಕ್ಕೆಂದು ವೀಕೆಂಡ್‌ನಲ್ಲಿ ಅನ್‌ಲೈನ್ ಮೂಲಕ ಬುಕ್ ಮಾಡಿಕೊಂಡು ಸಾವಿರಾರು ಟೆಕ್ಕಿಗಳು ಬಂದು ಚಾರಣ ಮಾಡ್ತಾರೆ. ಅದ್ರೆ ಪ್ರಾಣಿ ವಾಸಿಸುವ ಜಾಗದಲ್ಲಿ ಮನುಷ್ಯರು ಓಡಾಟ ಮಾಡುವುದರಿಂದ ಪ್ರಾಣಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಮನುಷ್ಯನಿಂದ ಪ್ರಾಣಿ ಸಂಕುಲ ನಾಶವಾಗುತ್ತಿದೆ. ಪ್ರಾಣಿಗಳನ್ನು ಸ್ವೇಚ್ಛೆಯಿಂದ ಓಡಾಟ ಮಾಡಲು ಬಿಡಿ, ಚಾರಣಿಗರು ಓಡಾಡಿ ಅವುಗಳಿಗೆ ತೊಂದರೆ ಮಾಡಿದ್ರೆ ಅದು ಪ್ರವಾಸಿಗರ ಮೇಲೆ ಅಟ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಉರುಗ ತಜ್ಞ ಪೃಥ್ವಿ ಹೇಳಿದ್ದಾರೆ.

ಒಟ್ಟಾರೆ ಅರಣ್ಯ ಇಲಾಖೆ ಅದಾಯ ಮಾಡಿಕೊಳ್ಳಲು ಪ್ರಾಣಿ ವಾಸಿಸುವ ಜಾಗಕ್ಕೆ ಜನರನ್ನು ಟ್ರೇಕಿಂಗ್ ಮೂಲಕ ಕಳುಹಿಸಿ ಪ್ರಾಣಿಗಳಿಗೆ ತೊಂದರೆಯನ್ನುAಟು ಮಾಡುತ್ತಿದೆ. ಮುಂದೊoದು ದಿನ ಕಾಡು ಪ್ರಾಣಿಗಳು ನಾಡಿಗೆ ಬಂದು ಇನ್ಯಾವ ಅನಾಹುತ ಮಾಡುತ್ತೊ ಎಂಬ ಭಯದಲ್ಲಿ ಬದುಕುವ ಪರಿಸ್ಥಿತಿ ಬರಬಹುದು ಎಂದಿದ್ದಾರೆ ಪೃಥ್ವಿ. ಒಟ್ಟಿನಲ್ಲಿ ಈ ವರೆಗೆ ಚಿರತೆ, ಜಿಂಕೆಯAತಹ ಪ್ರಾಣಿಗಳು ಮಾತ್ರ ಕಾಣಸಿಗುತ್ತಿದ್ದ ಚಿಕ್ಕಬಲ್ಳಾಪುರದ ಕುರುಚಲು ಕಾಡಿನಲ್ಲಿ ಇದೀಗ ಮರಿ ಸಮೇತ ಕರಡಿಗಳು ಕಾಣಿಸಿರೋದು ಪ್ರಾಣಿ ಪ್ರಿಯರಿಗೆ ಸಂತಸ ತಂದಿದೆ ಎಂದರೆ ತಪ್ಪಾಗಲಾರದು.

 

About The Author

Leave a Reply

Your email address will not be published. Required fields are marked *