ಭಾರತೀಯ ಷೇರುಮಾರುಕಟ್ಟೆಯಲ್ಲಿ ಕರಡಿ ಓಟ: ಸೆನ್ಸೆಕ್ಸ್ 900 ಅಂಕ ನಷ್ಟ
1 min read
1 year ago
ಇಸ್ರೇಲ್-ಗಾಜಾ, ಉಕ್ರೇನ್-ರಷ್ಯಾ ಯುದ್ಧ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆಯ ನಡುವೆಯೇ ಗುರುವಾರ ಭಾರತೀಯ ಷೇರುಮಾರುಕಟ್ಟೆ ಕರಡಿ ಹಿಡಿತಕ್ಕೆ ಸಿಲುಕಿದ್ದು, ಸೆನ್ಸೆಕ್ಸ್ ಬರೊಬ್ಬರಿ 900 ಅಂಕಗಳ ನಷ್ಟ ಅನುಭವಿಸಿದೆ.
ಗುರುವಾರದಂದು ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 900ಅಂಕಗಳಷ್ಟು ಕುಸಿದಿದ್ದು, 64,000 ಮಟ್ಟಕ್ಕಿಂತ ಕೆಳಗೆ ಕುಸಿದಿದೆ. ಅಂತೆಯೇ ಬ್ರಾಡರ್ ಗೇಜ್ ನಿಫ್ಟಿ ಕೂಡ 19,000 ಮಟ್ಟಕ್ಕಿಂತ ಕೆಳಗಿಳಿಯಿತು. ಜಾಗತಿಕ ಮಾರುಕಟ್ಟೆಗಳಲ್ಲಿನ ನಿಧಾನಗತಿಯ ಪ್ರವೃತ್ತಿಗಳ ಜೊತೆಗೆ, ಆಟೋ, ಹಣಕಾಸು ಮತ್ತು ಇಂಧನ ಷೇರುಗಳಲ್ಲಿನ ತೀವ್ರ ನಷ್ಟಗಳು ಮತ್ತು ವಿದೇಶಿ ಹೂಡಿಕೆದಾರರ ತಾಜಾ ಮಾರಾಟ ಒತ್ತಡವು ಷೇರುಮಾರುಕಟ್ಟೆ ನಷ್ಟಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.