ಟೋಲ್ ಸುಂಕ ತಪ್ಪಿಸಲು ನಗರಕ್ಕೆ ನುಗ್ಗಿದ ಬಿಬಿಎಂಪಿ ಕಸದ ಲಾರಿಗಳು
1 min readಟೋಲ್ ಸುಂಕ ತಪ್ಪಿಸಲು ನಗರಕ್ಕೆ ನುಗ್ಗಿದ ಬಿಬಿಎಂಪಿ ಕಸದ ಲಾರಿಗಳು
ಲಾರಿಗಳನ್ನ ತಡೆದ ಗ್ರಾಮಸ್ಥರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ
ಟೋಲ್ ಸುಂಕ ತಪ್ಪಿಸಲು ಬಿಬಿಎಂಪಿ ಕಸದ ಲಾರಿಗಳು ಕಳ್ಳ ದಾರಿ ಹಿಡಿದಿವೆ, ದೊಡ್ಡಬಳ್ಳಾಪುರದ ಮೂಲಕ ಕಸದ ಲಾರಿಗಳು ಹಾದು ಹೋಗುತ್ತಿದ್ದು, ಕಸದ ಲಾರಿಗಳ ವಾಸನೆಯಿಂದ ಬೇಸತ್ತ ಗ್ರಾಮಸ್ಥರು ಕಸದ ಲಾರಿಗಳ ತಡೆದು, ಲಾರಿಗಳನ್ನ ಸೀಜ್ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ದೊಡ್ಡಬಳ್ಳಾಪುರ ಬೆಂಗಳೂರು ಮಹಾನಗರದ ಬಳಿ ಇರುವುದೇ ದೊಡ್ಡ ಶಾಪವಾಗಿದೆ, ಇಡೀ ಬೆಂಗಳೂರಿನ ಕಸ ಸುರಿಯುವ ಡಂಪಿ0ಗ್ ಯಾರ್ಡ್ ಆಗಿ ಬದಲಾಗಿದೆ, ಸದ್ಯ ತಾಲೂಕಿನ ಎಂಎಸ್ ಪಿಜಿ ಘಟಕದಲ್ಲಿ ಬಿಬಿಎಂಪಿ ಕಸ ಸುರಿಯಲಾಗುತ್ತಿದೆ, ಎಂಎಸ್ ಪಿಜಿ ಘಟಕ ಮುಚ್ಚಿಸುವಂತೆ ಹೋರಾಟ ಮಾಡಲಾಗುತ್ತಿದೆ, ಈ ನಡುವೆ ಬಿಬಿಎಂಪಿ ಕಸದ ಲಾರಿಗಳು ದೊಡ್ಡಬಳ್ಳಾಪುರವನ್ನ ಪ್ರವೇಶಿಸಿ ಡಂಪಿAಗ್ ಯಾರ್ಡ್ ಕಡೆ ಸಂಚರಿಸುತ್ತಿವೆ, ಇದು ಸ್ಥಳೀಯರ ಅಕೋಶಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ನಗರ ಹೊರವಲಯದ ಕೊಡಿಗೇಹಳ್ಳಿ ಬಳಿ ಕಸದ ಲಾರಿಗಳನ್ನ ತಡೆದ ಗ್ರಾಮಸ್ಥರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ನಗರಸಭಾ ಸದಸ್ಯ ವೆಂಕಟೇಶ್ ಬಂತಿ, ಎಂಎಸ್ ಪಿಜಿ ಘಟಕದ ವಾಸನೆಗೆ ಬೇಸತ್ತ ಸುತ್ತಮುತ್ತಲಿನ ಗ್ರಾಮಸ್ಥರು ಗುಳೆ ಹೋಗುತ್ತಿದ್ದಾರೆ, ಶಾಸಕ ಧೀರಜ್ ಮುನಿರಾಜು ಎಂಎಸ್ ಪಿಜಿ ಘಟಕವನ್ನ ಮುಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಿದ್ದು, ವಿಧಾನಸಭೆಯಲ್ಲೂ ಮಾತನಾಡಿದ್ದಾರೆ.
ಬಿಬಿಎಂಪಿ ಕಸದ ಲಾರಿಗಳಿಗೆ ಪರ್ಮಿಟ್ ಇಲ್ಲದೆ ಇದ್ದರೂ ಯಲಹಂಕ ಮಾರ್ಗವಾಗಿ ದೊಡ್ಡಬಳ್ಳಾಪುರ ಪ್ರವೇಶಿಸುತ್ತಿವೆ, ಪ್ರತಿದಿನ ಸುಮಾರು ೫೦ಕ್ಕೂ ಹೆಚ್ಚು ಲಾರಿಗಳು ದೊಡ್ಡಬಳ್ಳಾಪುರ ಮೂಲಕ ಹಾದು ಹೋಗುತ್ತಿವೆ, ಕಸದ ಲಾರಿಗಳ ಓಡಾಟದಿಂದ ಗ್ರಾಮಗಳ ರಸ್ತೆಗಳು ಹಾಳಾಗಿವೆ, ಜೊತೆಗೆ ಲಾರಿ ಚಾಲಕರ ಡ್ರಿಂಕ್ ಅಂಡ್ ಡ್ರೆವ್ ನಿಂದ ಅಮಾಯಕರು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ, ಕಸದ ಲಾರಿಗಳನ್ನ ಸೀಜ್ ಮಾಡುವ ಮೂಲಕ ಬಿಬಿಎಂಪಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡ ಬೇಕೆಂದು ಆಗ್ರಹಿಸಿದರು.