BBK 10: ಕ್ಯಾಪ್ಟನ್ ಪಟ್ಟಕ್ಕೆ ವಿನಯ್ ಆಯ್ಕೆ..! ಬಿಗ್‌ಬಾಸ್ ಆಟಕ್ಕೀಗ ಹೊಸ ತಿರುವು
1 min readBigg Boss Kannada 10 Week 4: ‘ಬಿಗ್ ಬಾಸ್’ ಮನೆಯ ‘ಆನೆ’ ಎನಿಸಿಕೊಂಡಿರುವ ವಿನಯ್ ಗೌಡ ಪದೇ ಪದೇ ನೆಟ್ಟಿಗರ ಆಕ್ರೋಶಕ್ಕೆ ಒಳಗಾಗುತ್ತಿದ್ದಾರೆ. ತಮ್ಮ ಏರು ಧ್ವನಿಯಿಂದ ಎಲ್ಲರನ್ನು ಗದರಿಸುತ್ತಿದ್ದಾರೆ ಎಂದು ವೀಕ್ಷಕರು ಆರೋಪಿಸುತ್ತಿದ್ದಾರೆ.. ಇಂತಹ ಸಂದರ್ಭದಲ್ಲಿಯೇ ವಿನಯ್ ಮನೆಯ ಕ್ಯಾಪ್ಟನ್ ಆಗಿದ್ದಾರೆ.
ಹಿಂದಿನ ಎಪೀಸೋಡ್‌ನಲ್ಲಿ ಏಕವಚನದಲ್ಲಿ ಮಾತನಾಡಿಸಬೇಡ ಅಂತ ವಿನಯ್‌ಗೆ ಸಂಗೀತಾ ವಾರ್ನಿಂಗ್ ಕೊಟ್ಟಿದ್ದಾರೆ. ಇದಲ್ಲದೇ ತನಿಷಾ ಕುಪ್ಪಂಡ ಅವರಿಗೂ ಸಹ ‘ಏನೇ..’ ಅಂತ ಏಕವಚನದಲ್ಲಿಯೇ ಮಾತನಾಡಿಸಿ ವೀಕ್ಷಕರ ಬೇಸರಕ್ಕೆ ಕಾರಣವಾಗಿದ್ದಾರೆ.
BBK 10: ವಿನಯ್ vs ನಮ್ರತಾ ಟೀಮ್ ಕ್ರಿಯಟ್ ಆದ್ರೆ ಬಿಗ್‌ಬಾಸ್ ಮನೆ ಆಟ ಹೇಗಿರುತ್ತೆ?
ಇದೆಲ್ಲದರ ಮಧ್ಯ ಕ್ಯಾಪ್ಟನ್ ಪಟ್ಟಕ್ಕೆ ಆಯ್ಕೆಯಾಗಿರುವ ವಿನಯ್ ಸದ್ಯ ಅದರ ಬಗ್ಗೆ ವಿಷಾದ ವ್ಯಕ್ತಪಡಿಸಿ ತನಿಷಾ ಬಳಿ ಕ್ಷಮೆ ಕೇಳಿದ್ದಾರೆ. ಆದರೆ ವಿನಯ್ ಅವರು ತಮ್ಮ ಮುಂದೆ ಯಾರು ನಿಲ್ಲಲು ಆಗುವುದಿಲ್ಲವೆಂದು ತಿಳಿದು ಈ ರೀತಿ ಮಾಡುತ್ತಿದ್ದಾರಾ? ಅಥವಾ ಅವರಿಗೆ ಕಿಚ್ಚ ಸುದೀಪ್ ನೀಮ್ಮನ್ನು ಪೈನಲಿಸ್ಟ್ ಎಂದು ಆಯ್ಕೆ ಮಾಡುತ್ತೀನೆ ಎಂದು ಹೇಳಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರಾ? ಅನ್ನೋದು ವೀಕ್ಷಕರಿಗೆ ಉತ್ತರ ಸಿಗದ ಪ್ರಶ್ನೆ .. ಅಷ್ಟೇ ಅಲ್ಲ ಅವರು ದುರಹಂಕಾರಿ ಅವರನ್ನು BYCOTT ಮಾಡಿ ಎಂದು ಸಹ ನೋಡುಗರು ಹೇಳುತ್ತಿದ್ದಾರೆ.
ವಿನಯ್ ತಾವೇ ಕ್ಯಾಪ್ಟನ್ ಆಗಿರುವುದರಿಂದ ಇನ್ನುಮುಂದೆ ಈ ರೀತಿಯ ಅವಾಚ್ಯ ಶಬ್ದಗಳು ಬರದೇ ಇರುವಂತೆ ನೋಡಿಕೊಳ್ಳುತ್ತಾರಾ? ಅಥವಾ ಮನೆಯಲ್ಲಿ ಇನ್ನು ದೊಡ್ಡ ರಣರಂಗ ಸೃಷ್ಟಿಯಾಗುತ್ತಾ .. ಅಲ್ಲದೇ ಈ ವಾರ ಕಿಚ್ಚ ಸುದೀಪ್ ಯಾರ ವಿಚಾರವಾಗಿ ಮಾತನಾಡಬಹುದು ಅನ್ನೋದನ್ನು ಕಾದುನೋಡಬೇಕು.