BBK 10: ಬಿಗ್’ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ ನಿಜವಾದ ವಿದ್ಯಾರ್ಹತೆ ಏನು ಗೊತ್ತಾ?
1 min readಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಸೀಸನ್ 10 ಜರ್ನಿ ಮುನ್ನಡೆಸುತ್ತಿದೆ. ಪ್ರತೀದಿನ ಒಂದಲ್ಲ ಒಂದು ರೋಚಕತೆ ಸೃಷ್ಟಿಸುತ್ತಿರೋ ಬಿಗ್ ಬಾಸ್ ಮನೆಯಲ್ಲಿ ಘಟಾನುಘಟಿಗಳ ಕಾದಾಟ ಹೆಚ್ಚಾಗ್ತಾ ಇದೆ. ಈ ಬಾರಿಯ ಬಿಗ್ ಬಾಸ್ ಸಖತ್ ಇಂಟರೆಸ್ಟಿಂಗ್ ಆಗಿದ್ದು ಒಬ್ಬೊಬ್ಬ ಆಟಗಾರರು ಕೂಡ ಒಂದೊಂದು ರೀತಿಯ ಪ್ರತಿಭೆಯನ್ನು ಹೊಂದಿದವರೇ. ಆದರೆ ನಾವಿಂದು ಮಾತನಾಡುತ್ತಿರೋದು ಡ್ರೋಣ್ ಪ್ರತಾಪ್ ವಿದ್ಯಾರ್ಹತೆ ಬಗ್ಗೆ …
ಡ್ರೋನ್ ಪ್ರತಾಪ್ ಯಾರಿಗೆ ಗೊತ್ತಿಲ್ಲ ಹೇಳಿ. ಇಡೀ ಕರ್ನಾಟಕಕ್ಕೆ ಡ್ರೋಣ್ ವಿಚಾರದಲ್ಲಿ ಚಳ್ಳೇಹಣ್ಣು ತಿನ್ನಿಸಿದ್ದ ಈ ಹುಡುಗ ತನ್ನ ತಪ್ಪನ್ನು ಸರಿಪಡಿಸಿಕೊಂಡು ಎಲ್ಲರೊಳಗೊಬ್ಬನಂತೆ ಬದುಕಬೇಕು ಎಂದು ಹೇಳಿ ಈ ಕಾರ್ಯಕ್ರಮಕ್ಕೆ ಎಂಟ್ರಿ ಪಡೆದಿದ್ದಾರೆ. ಸದ್ಯ ತನ್ನ ಮುಗ್ಧತೆ, ಚಾಣಾಕ್ಷತನದಿಂದಲೇ ಬಿಗ್ ಬಾಸ್ ಮನೆಯಲ್ಲಿ ಆಡುತ್ತಿದ್ದಾರೆ ಡ್ರೋಣ್ ಪ್ರತಾಪ್.
ಯಾರು ಎಷ್ಟೇ ಬೇಕಾದ್ರೂ ಟಾರ್ಗೆಟ್ ಮಾಡ್ಲಿ, ನನ್ನ ಆಟ ನಾನು ಆಡುತ್ತೇನೆ ಎಂದು ಪಣತೊಟ್ಟಿರುವ ಡ್ರೋಣ್ ಪ್ರತಾಪ್’ಗೆ ಸಖತ್ ತಾಂತ್ರಿಕ ಜ್ಞಾನವಿದೆ. ಇವರು ಬಿಗ್ ಮನೆಯಲ್ಲಿ ಆಡುತ್ತಿರೋದು ಶಕ್ತಿಬಲದಿಂದಲ್ಲ, ಯುಕ್ತಿಬಲದಿಂದ…
ರೈತ ಕುಟುಂಬದಲ್ಲಿ ಜನಿಸಿದ ಪ್ರತಾಪ್’ಗೆ ತಾಂತ್ರಿಕ ಜ್ಞಾನ ಉತ್ತಮವಾಗಿದೆ. ಪ್ರಸ್ತುತ ಸ್ಟಾರ್ಟಪ್ ಕಂಪನಿ ಪ್ರಾರಂಭಿಸಿರುವ ಪ್ರತಾಪ್ ಬೆಂಗಳೂರಿನ ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್’ನಲ್ಲಿ ಶಾಲಾ ಶಿಕ್ಷಣ ಪೂರೈಸಿ ಬಳಿಕ JSS ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ.