ತೋಟದ ಒಂಟಿ ಮನೆಯ ಮೇಲೆ ಡಕಾಯಿತರ ದಾಳಿ.
1 min readತೋಟದ ಒಂಟಿ ಮನೆಯ ಮೇಲೆ ಡಕಾಯಿತರ ದಾಳಿ.
೬೦ ಗ್ರಾಂ. ಬಂಗಾರ, ೬೦೦೦೦ರೂ. ದೋಚಿದ ಖದೀಮರು ಪರಾರಿ.
ಬೆರಳಚ್ಚು ತಜ್ನರು, ಪೊಲೀಸ್, ಶ್ವಾನದಳದ ಸಿಬ್ಬಂದಿಯಿAದ ಪರಿಶೀಲನೆ.
ಆಂ : ತೋಟದ ಒಂಟಿ ಮನೆಯ ಮೇಲೆ ನಾಲ್ಕು ಜನರ ಡಕಾಯಿತರ ಗುಂಪೊAದು ದಾಳಿ ಮಾಡಿ ಮನೆಯಲ್ಲಿದ್ದ ೬೦ಗ್ರಾಮ ಬಂಗಾರದ ಒಡವೆ, ೬೦ ಸಾವಿರ ರೂ ನಗದು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕಿನ ಕಸಬಾ ಹೊಬಳಿ ಕಾಗತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗತಿಮ್ಮನಹಳ್ಳಿ ಗ್ರಾಮದ ಬಳಿಯ ತೋಟದಲ್ಲಿ ಮನೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಈ ತೋಟದ ಒಂಟಿ ಮನೆಯ ಮೇಲೆ ನಾಲ್ಕು ಜನರ ಡಕಾಯಿತರ ಗುಂಪೊAದು ದಾಳಿ ಮಾಡಿ ಮನೆಯಲ್ಲಿದ್ದ ೬೦ಗ್ರಾಮ ಬಂಗಾರದ ಒಡವೆ, ೬೦ ಸಾವಿರ ರೂ ನಗದು ಹಣವನ್ನು ದೋಚಿ ಪರಾರಿಯಾಗಿರುತ್ತಾರೆ.
ಕೊಂಗತಿಮ್ಮನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬುವರು ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದರು, ಶನಿವಾರ ಮದ್ಯ ರಾತ್ರಿ ೧೨-೩೦ ಗಂಟೆ ಸಮಯದ ನಂತರ ನಾಲ್ಕು ಜನ ಡಕಾಯಿತರ ಗುಂಪು ನಾರಾಯಣಸ್ವಾಮಿ ಮನೆಯ ಮೇಲೆ ಮಾರಾಕಾಸ್ತ್ರಗಳೊಂದಿಗೆ ದಾಳಿ ಮಾಡಿ ಮನೆಯ ನಾರಾಯಣಸ್ವಾಮಿಯನ್ನು ಹಗ್ಗಗಳಿಂದ ಬಿಗಿದು, ಹಲ್ಲೆ ಮಾಡಿರುತ್ತಾರೆ, ಅಷ್ಟೇ ಅಲ್ಲದೆ ನಾರಾಯಣಸ್ವಾಮಿ ಯವರ ಹೆಂಡತಿ ಮತ್ತು ಮಗಳನ್ನು ಬೇದರಿಸಿ ಮನೆಯಲ್ಲಿದ್ದ ೬೦ ಗ್ರಾಮ ಬಂಗಾರದ ವಡವೆ ಹಾಗೂ ೬೦ ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿರುತ್ತಾರೆ.
ಇನ್ನು ಈ ವಿಷಯವನ್ನು ನಾರಾಯಣಸ್ವಾಮಿ ಚಿಂತಾಮಣಿ ಗ್ರಾಮಾಂತರ ಪೋಲಿಸರಿಗೆ ತಿಳಿಸಿದ್ದು, ಭಾನುವಾರ ಬೆಳಿಗ್ಗೆ, ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಐ ಸುಧಾಕರ್‌ರೆಡ್ಡಿ ಮತ್ತು ಸಿಬ್ಬಂದಿ, ಬೆರಳಚ್ಚು ತಜ್ನರು ಹಾಗೂ ಶ್ವಾನದಳದ ಸಿಬ್ಬಂದಿಯೊAದಿಗೆ ತೇರಳಿ ಪರಿಶಿಲನೆ ನಡೆಸಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಿ ಎಲ್ ನಾಗೇಶ್ ಬೇಟಿ ನೀಡಿ ಮನೆಯವರಿಂದ ಮಾಹಿತಿ ಪಡೆದುಕೊಂಡಿರುತ್ತಾರೆ. ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲಿಸರು ಪ್ರಕರಣ ದಾಖಲಿಸಿಕೊಂಡು ಡಕಾಯಿತರ ಪತ್ತೆಗಾಗಿ ಬಲೆ ಬೀಸಿದ್ದಾರೆ