ಬಾಗೇಪಲ್ಲಿ ಶಾಲಾ ಸಂಸತ್ತಿನ ಚುನಾವಣೆ
1 min readಪ್ರಧಾನಿಯಾಗಿ ಬಾಬು, ಶಿಕ್ಷಣ ಸಚಿವೆಯಾಗಿ ಅನಿತ ಆಯ್ಕೆ
ನೈಜ ಚುನಾವಣೆಯಲ್ಲಿ ನಡೆದ ಎಲ್ಲ ಪ್ರಕ್ರಿಯೆಗಳು
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಚುನಾವಣೆ ನೈಜ ಚುನಾವಣೆಯಂತೆಯೇ ಕುತೂಹಲಕಾರಿಯಾಗಿ ನಡೆಯಿತು. ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಅಭರ್ಥಿಗಳನ್ನು ಆಯ್ಕೆ ಮಾಡುವುದರಿಂದ ನಾಮಪತ್ರ ಸಲ್ಲಿಸುವಿಕೆ, ಪ್ರಚಾರ, ಮತದಾನ ಸೇರಿ ಎಲ್ಲ ಚುನಾವಣಾ ಪ್ರಕ್ರಿಯೆಗಳನ್ನ ಒಳಗೊಂಡಿತ್ತು.
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಚುನಾವಣೆ ನೈಜ ಚುನಾವಣೆಯಂತೆಯೇ ಕುತೂಹಲಕಾರಿಯಾಗಿ ನಡೆಯಿತು. ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಅಭರ್ಥಿಗಳನ್ನು ಆಯ್ಕೆ ಮಾಡುವುದರಿಂದ ನಾಮಪತ್ರ ಸಲ್ಲಿಸುವಿಕೆ, ಪ್ರಚಾರ, ಮತದಾನ ಸೇರಿ ಎಲ್ಲ ಚುನಾವಣಾ ಪ್ರಕ್ರಿಯೆಗಳನ್ನ ಒಳಗೊಂಡಿತ್ತು. ಈ ವೇಳೆ ವಿದ್ಯಾರ್ಥಿಗಳು ಚುನಾವಣೆಯಲ್ಲಿ ಗೆಲ್ಲುವ ಪಣ ತೊಟ್ಟು ಪ್ರಚಾರದ ವೇಳೆ ಆರೋಪ, ಪ್ರತ್ಯಾರೋಪಗಳು, ಭರವಸೆಗಳನ್ನು ನೀಡುವುದು ಜೋರಾಗಿಯೇ ನಡೆಯಿತು. ಇವೆಲ್ಲ ಚುನಾವಣೆ ಪ್ರಕ್ರಿಯೆಗಳು ಶಿಕ್ಷಕ ಎನ್.ರವಿಚಂದ್ರ ಮಾರ್ಗದರ್ಶನದಲ್ಲಿ ನಡೆಯಿತು.
ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದವರಿಗೆ ಸಚಿವ ಸಂಪುಟ ರಚನೆ ಮಾಡಿದ್ದು, ಪ್ರಧಾನ ಮಂತ್ರಿಯಾಗಿ ಬಾಬು.ಝೆಡ್, ನವ್ಯಶ್ರೀ -ವಾರ್ತಾ ಮತ್ತು ಪ್ರಸಾರ ಖಾತೆ, ಸುದರ್ಶನರೆಡ್ಡಿ- ಗೃಹ ಖಾತೆ, ಅಮೃತ- ಆರೋಗ್ಯ ಮತ್ತು ನೈರ್ಮಲ್ಯ, ಅರ್ಚನ , ನಿಕಿತ – ಕನ್ನಡ ಮತ್ತು ಸಂಸ್ಕೃತಿ, ವಿಷ್ಣುವಧನ್ – ಗ್ರಂಥಾಲಯ, ಬಾಸೀರ್- ನೀರಾವರಿ ಮತ್ತು ಸ್ವಚ್ಛತೆ, ಅನಿತಾ ಮತ್ತು ರಾಜಶೇಖರ್‌ಗೆ ಕ್ರೀಡಾ ಇಲಾಖೆ ನೀಡಲಾಗಿದೆ.
ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನೈಜ ಅರಿವು ನೀಡುವ ನಿಟ್ಟಿನಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಸಲಾಯಿತು.ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಕುತೂಹಲದಿಂದ ಭಾಗವಹಿಸಿದ್ದರು. ಅವರೆಲ್ಲರಿಗೂ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿ. ಮಲ್ಲಪ್ಪ, ಮುಖ್ಯ ಶಿಕ್ಷಕ ಶುಭಾಶಯಗಳು ತಿಳಿಸಿದರು.
ಶಾಲೆಯ ಶಿಕ್ಷಕ ರವಿಚಂದ್ರ ಮಾತನಾಡಿ, ಶಾಲಾ ಸಂಸತ್ತನ್ನು ರಚಿಸುವ ಸರಕಾರದ ಕ್ರಮದಿಂದ ವಿದ್ಯಾರ್ಥಿಗಳಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಸ್ವ-ಅನುಭವವಾಗುತ್ತಿದ್ದು, ಉಪಯುಕ್ತವಾಗಿದೆ. ಭವಿಷ್ಯದಲ್ಲಿ ರಾಜಕಾರಣದ ಬಗ್ಗೆ ಸ್ಪಷ್ಟತೆ ಸಾಧಿಸಬಹುದಾಗಿದೆ ಎಂದು ತಿಳಿಸಿದರು. ಈ ಸಂದಭದಲ್ಲಿ ರವಿಕುಮಾರ್, ಎಂ.ಎಸ್ ಶ್ರೀನಿವಾಸನ್, ರಾಘವೇಂದ್ರ, ಸಿದ್ರಾಮಪ್ಪ, ಮೊನಿಷಾ ಮತ್ತು ಅಂಬರೀಷ್ ಅಭಿನಂದಿಸಿ ತಮ್ಮ ಖಾತೆಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವಂತೆ ಶುಭ ಹಾರೈಸಿದರು.