ಬರದ ತಾಲೂಕು ಬಾಗೇಪಲ್ಲಿಯಲ್ಲಿ ಸ್ವಚ್ಛತೆಗೂ ಬರ
1 min readಬರದ ತಾಲೂಕು ಬಾಗೇಪಲ್ಲಿಯಲ್ಲಿ ಸ್ವಚ್ಛತೆಗೂ ಬರ
ಕೊಳೆತು ನಾರುತ್ತಿರುವ ಕಸದ ರಾಶಿ, ತೆರವು ಮಾಡದ ಪುರಸಭೆ
ಸತತ ಬರದಿಂದ ತತ್ತರಿಸಿರುವ ಬಾಗೇಪಲ್ಲಿ ಪಟ್ಟಣದಲ್ಲಿ ಸ್ವಚ್ಛತೆಗೂ ಬರ ಎದುರಾಗಿದೆ. ಪಟ್ಟಣದ ಬಹುತೇಕ ಎಲ್ಲ ವಾರ್ಡುಗಳಲ್ಲಿಯೂ ಕಸ ಕೊಳೆತು ನಾರುತ್ತಿದ್ದರೂ ಅದನ್ನು ತೆರವು ಮಡಾಲು ಪುರಸಭೆ ಮುಂದಾಗದ ಕಾರಣ ದುರ್ವಾಸನೆ ಬೀರುತ್ತಿದೆ. ಕೊಳೆತ ಕಸ ಬೀರುತ್ತಿರುವ ದುರ್ನಾತ ಸಹಿಸಲಾರದ ನಾಗರಿಕರು ಪುರಸಭೆಗೆ ಪ್ರತಿನಿತ್ಯ ಶಾಪ ಹಾಕುತ್ತಿದ್ದಾರೆ.
ಸತತ ಬರದಿಂದ ತತ್ತರಿಸಿರುವ ಬಾಗೇಪಲ್ಲಿ ಪಟ್ಟಣದಲ್ಲಿ ಸ್ವಚ್ಛತೆಗೂ ಬರ ಎದುರಾಗಿದೆ. ಪಟ್ಟಣದ ಬಹುತೇಕ ಎಲ್ಲ ವಾರ್ಡುಗಳಲ್ಲಿಯೂ ಕಸ ಕೊಳೆತು ನಾರುತ್ತಿದ್ದರೂ ಅದನ್ನು ತೆರವು ಮಡಾಲು ಪುರಸಭೆ ಮುಂದಾಗದ ಕಾರಣ ದುರ್ವಾಸನೆ ಬೀರುತ್ತಿದೆ. ಕೊಳೆತ ಕಸ ಬೀರುತ್ತಿರುವ ದುರ್ನಾತ ಸಹಿಸಲಾರದ ನಾಗರಿಕರು ಪುರಸಭೆಗೆ ಪ್ರತಿನಿತ್ಯ ಶಾಪ ಹಾಕುತ್ತಿದ್ದಾರೆ. ಬಾಗೇಪಲ್ಲಿ ಪಟ್ಟಣದ 14ನೇ ವಾರ್ಡ್ ನ ಅಂಬೇಡ್ಕರ್ ನಗರದ ರಸ್ತೆಯಲ್ಲಿ ಕಸದರಾಶಿ ಕೊಳೆತು ಗೊಬ್ಬು ವಾಸನೆ ಬರುತ್ತಿದೆ.
ಹೀಗೆ ನಾರುತ್ತಿರುವ ಕಸವನ್ನು ತೆರವುಗೊಳಿಸಬೇಕಾದ ಪುರಸಭೆ ವಹಿಸುತ್ತಿರುವುದರಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಕಸದ ರಾಶಿಗಳು ಸ್ಥಳದಲ್ಲಿಯೇ ಕೊಳೆಯುತ್ತಿವೆ. ಇದರಿಂದ ಸೊಳ್ಳೆ ಸೇರಿದಂತೆ ಇತರೆ ಕೀಟಗಳು ಉಲ್ಬಣವಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ನಾಗರಿಕರು ಭೀತಿಯಲ್ಲಿಯೇ ಜೀವನ ಸಾಗಸುವಂತಾಗಿದೆ. ರಸ್ತೆಯ ಪಕ್ಕದಲ್ಲಿ ಹಾಕುವ ಕಸವನ್ನು ತೆರವುಗೊಳಿಸಬೇಕಾಗಿರುವ ಪುರಸಭೆ ಇಲ್ಲಿ ಟ್ರಾಕ್ಟರ್ ಮೂಲಕ ಕಸವನ್ನು ಗುಡ್ಡೆಗಳನ್ನಾಗಿ ಹಾಕುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಸದ ರಾಶಿಗಳು ಕೊಳೆತು ನಾರುತ್ತಿರುವ ಕಾರಣ ಸುತ್ತ ಮುತ್ತಲ ಜನರ ನೆಮ್ಮದಿ ಹಾಳಾಗಿದೆ. ಮಕ್ಕಳು, ವೃದ್ಧರೂ ಹೊರಬರಲೇ ಹೆದರುವಂತಾಗಿದೆ. ಸೊಳ್ಳೆಗಳ ಕಾಟ ತೀವ್ರವಾಗಿದ್ದು, ದುರ್ನಾತದ ಕಾರಣ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಶಾಲಾ -ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಮಕ್ಕಳು ಕೆಟ್ಟ ವಾಸನೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇತ್ತೀಚಿಗೆ ಡೆಂಘೀ ಜ್ವರ ಹೆಚ್ಚಾಗುತ್ತಿದ್ದು, ಕಸದ ರಾಶಿಯಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನಾಗರಿಕರು ಬದುಕುವಂತಾಗಿದೆ.
ಕಸ ತೆರವು ಮಡಾಉವಂತೆ ಪುರಸಭೆಗೆ ಪದಜೇ ಪದೇ ಮನವಿ ಮಡಾಇದರೂ ಉಪಯೋಗವಾಗಿಲ್ಲ. ಮಕ್ಕಳು ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಪುರಸಭೆ ಸಿಬ್ಬಂದಿ ಇತ್ತ ಗಮನ ಹರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಯಾವುದೇ ರೀತಿಯ ಅನಾರೋಗ್ಯ ಕಾಡಿದರೆ ಅದಕ್ಕೆ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ನೇರಹೊಣೆ ಆಗಲಿದ್ದಾರೆ ಎಂದು ಈ ಪ್ರದೇಶದ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.