ನ್ಯೂಯಾರ್ಕ್‌ನ ‘ಭಾರತ ದಿನ’ ಪರೇಡ್ನಲ್ಲಿ ಅಯೋಧ್ಯೆ ಶ್ರೀರಾಮಮಂದಿರ ಪ್ರತಿಕೃತಿ!
1 min readಅಮೆರಿಕಾದ ನ್ಯೂಯಾರ್ಕ್‌ನಲ್ಲಿ ವಾರ್ಷಿಕವಾಗಿ ಆಯೋಜಿಸಲಾಗುವ ‘ಇಂಡಿಯಾ ಡೇ ಪರೇಡ್’ ಈ ಬಾರಿ ಇತಿಹಾಸ ಸೃಷ್ಟಿಸಲಿದೆ. ಆಗಸ್ಟ್ 15 ರಂದು ಈ ನಗರದ ಪ್ರಮುಖ ಬೀದಿಗಳಲ್ಲಿ ಅಯೋಧ್ಯೆಯ ರಾಮಮಂದಿರ ಪ್ರತಿಕೃತಿಯನ್ನು ಪ್ರದರ್ಶಿಸಲಾಗುತ್ತದೆ. ಈ ಕಾರ್ಯಕ್ರಮವು ಡಯಾಸ್ಪೊರಾ ಭಾರತೀಯರು ಮತ್ತು ಸುತ್ತಮುತ್ತಲಿನ ಹೆಚ್ಚು ಜನರನ್ನು ಆಕರ್ಷಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಅಯೋಧ್ಯೆ ಶ್ರೀರಾಮದೇವರ ದೇಗುಲದ ಕ್ರತಿಕೃತಿ ಪ್ರದರ್ಶನಗೊಳ್ಳುತ್ತಿದೆ. ದೇವಾಲಯದ ಪ್ರತಿಕೃತಿಯು 18 ಅಡಿ ಉದ್ದ, 9 ಅಡಿ ಅಗಲ ಮತ್ತು 8 ಅಡಿ ಎತ್ತರ ಇರಲಿದೆ ಎಂದು ವಿಶ್ವ ಹಿಂದೂ ಪರಿಷತ್ ಅಮೆರಿಕಾ(ವಿಎಚ್‌ಪಿಎ) ಪ್ರಧಾನ ಕಾರ್ಯದರ್ಶಿ ಅಮಿತಾಬ್ ಮಿತ್ತಲ್ ಹೇಳಿದ್ದಾರೆ.
ನ್ಯೂಯಾರ್ಕ್ ಮತ್ತು ಸುತ್ತಮುತ್ತಲಿನ ನೂರಾರು ಅಮೆರಿಕನ್-ಭಾರತೀಯರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
1981 ರಿಂದ ಭಾರತೀಯ-ಅಮೆರಿಕನ್ನರು ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಲು ಪ್ರತಿ ವರ್ಷ ಆಗಸ್ಟ್ 15 ರಂದು ಮೆರವಣಿಗೆಯನ್ನು ನಡೆಸುತ್ತಾರೆ. ನ್ಯೂಯಾರ್ಕ್‌ನಲ್ಲಿ ನಡೆಯುವ ಈ ಮೆರವಣಿಗೆ ದೇಶದ ಹೊರಗೆ ಭಾರತದ ಅತಿ ದೊಡ್ಡ ಆಚರಣೆಯಾಗಿದೆ. 150,000 ಕ್ಕೂ ಹೆಚ್ಚು ಜನರು ಸಾಮಾನ್ಯವಾಗಿ ವಾರ್ಷಿಕ ಮೆರವಣಿಗೆಯನ್ನು ವೀಕ್ಷಿಸುತ್ತಾರೆ. ಇದು ಮಿಡ್‌ಟೌನ್ ನ್ಯೂಯಾರ್ಕ್‌ನ ಪೂರ್ವ 38 ನೇ ಬೀದಿಯಿಂದ ಪೂರ್ವ 27 ನೇ ಬೀದಿಯವರೆಗೆ ನಡೆಯುತ್ತದೆ.
ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (ಎಫ್‌ಐಎ) ಪ್ರತಿ ವರ್ಷ ಇಂಡಿಯಾ ಡೇ ಪರೇಡ್ ಅನ್ನು ಆಯೋಜಿಸುತ್ತದೆ. ಮೆರವಣಿಗೆಯು ನ್ಯೂಯಾರ್ಕ್‌ನ ಬೀದಿಗಳಲ್ಲಿ ವಿವಿಧ ಭಾರತೀಯ-ಅಮೆರಿಕನ್ ಸಮುದಾಯದವರು ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
2014ರ ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಧಾನಿ ಮೋದಿಯವರ ಕೈಯಿಂದ ಬಾಲರಾಮ ದೇವರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆದಿತ್ತು. ಈ ಬಾರಿ ಮೆರವಣಿಗೆಯಲ್ಲಿ ಶ್ರೀರಾಮ ದೇಗುಲದ ಪುತ್ಥಳಿ ವಿಶೇಷ ಆಕರ್ಷಣೆಯಾಗಿ ನಿಲ್ಲಲಿದೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday