ಜ್ಞಾನ ಮಂದಿರದಲ್ಲಿ ಅಟ್ಟಗುಣಿ ಕಾರ್ಯಕ್ರಮ
1 min read
ಜ್ಞಾನ ಮಂದಿರದಲ್ಲಿ ಅಟ್ಟಗುಣಿ ಕಾರ್ಯಕ್ರಮ
ಶಿವಾಚಾರ್ಯ ವೈಶ್ಯ ನಗರ್ತ ಮಹಿಳಾ ಸಂಘ
ವಿಜಯಪುರದಲ್ಲಿ ವಿಶೇಷ ಕಾರ್ಯಕ್ರಮ
ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಅಯೋಧ್ಯಾ ನಗರ ಶಿವಾಚಾರ್ಯ ವೈಶ್ಯ ನಗರ್ತ ಮಹಿಳಾ ಸಂಘದಿ0ದ ನಗರೇಶ್ವರಸ್ವಾಮಿ ದೇವಾಲಯದ ಜ್ಞಾನ ಮಂದಿರದಲ್ಲಿ ಅಟ್ಟಗುಣಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬನಹುಣ್ಣಿಮೆ ದಿನ ನಗರ್ತ ಸಮುದಾಯದ ೧೨ ವರ್ಷದೊಳಗಿನ ಹೆಣ್ಣು ಮಕ್ಕಳಿಂದ ಅಟ್ಟಗುಣಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಹೆಣ್ಣು ಮಕ್ಕಳ ಏಳಿಗೆಗಾಗಿ ಸಾಂಪ್ರದಾಯಕವಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದು, ಆಚಾರರ ಮನೆಯಿಂದ ಹರಿಶಿನದಿಂದ ಸಿಂಗರಿಸಿದ ಗೌರಮ್ಮರನ್ನು ತಂದು ಪೂಜಿಸಿ, ಮಕ್ಕಳ ಕಡೆಯಿಂದ ಮೂರು, ಐದು, ಒಂಬತ್ತು ಅಕ್ಕಿಯ ಹಿಟ್ಟಿನಿಂದ ದೀಪಾರತಿ ಮಾಡಿ, ಊರಿನ ಬಾಗಿಲು, ತಿಪ್ಪಮ್ಮ ಗಾಣದಮ್ಮ ನಿಗೆ ಮಕ್ಕಳಿಂದ ಪೂಜೆ ಮಾಡಿಸಿ, ದೀಪಾರತಿ ಬೆಳಗಿ, ಹುಗ್ಗಿಯ ಅನ್ನ, ಎಡೆಯಿಟ್ಟು ನಂತರ ಕುಂದಾಣಿ ಒನಕೆಗೆ ಪೂಜೆ ಸಲ್ಲಿಸಿ, ಮಕ್ಕಳಿಂದ ವಿಧವೆಯ ಬೆನ್ನಿಗೆ ಗುದ್ದು ಕೊಟ್ಟು, ಒಂದು ರೂಪಾಯಿ ದಕ್ಷಿಣೆ ನೀಡಿ, ಗೌರಮ್ಮನಿಗೆ ಅಕ್ಕಿ ಬೆಲ್ಲವನ್ನು ಮಡಿಲು ಕಟ್ಟಿ, ಊರಿಗೆ ಒಳಿತು ಮತ್ತು ನಮ್ಮ ಕುಲಕ್ಕೆ ಶ್ರೇಯಸ್ಸು ಎಂಬ ನಂಬಿಕೆಯಿAದ ಈ ಅಟ್ಟಗುಣಿ ಹುಣ್ಣಿಮೆ ಆಚರಿಸಲಾಗುತ್ತದೆ.
ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಲೀಲಾ ರುದ್ರಮೂರ್ತಿ, ಉಪಾಧ್ಯಕ್ಷೆ ಭಾರತಿ ವಿಶ್ವನಾಥ್, ಕಾರ್ಯದರ್ಶಿ ಭಾರತಿ ಪ್ರಭುದೇವ್, ಶ್ವೇತಾ ಮಂಜುನಾಥ್, ರಮಾ ನಟರಾಜ್, ಅಂಬಾ ಭವಾನಿ, ಭಾರತಿ ಶಿವಪ್ರಸಾದ್, ರಾಧಾ ಮನೋಹರ್ ಇದ್ದರು.