ರಾತ್ರಿ ವೇಳೆ ಗಾಜು ಒಡೆದು ಒಳ ನುಗ್ಗಿ ಎರಡು ಕಡೆ ದರೋಡೆ
1 min readಗಾಜು ಗೋಡೆಗಳು ಕಳ್ಳರಿಂದ ರಕ್ಷಣೆ ನೀಡಲ್ಲ
ರಾತ್ರಿ ವೇಳೆ ಗಾಜು ಒಡೆದು ಒಳ ನುಗ್ಗಿ ಎರಡು ಕಡೆ ದರೋಡೆ
ಇತ್ತೀಚಿನ ದಿನಗಳಲ್ಲಿ ಜನರಿಗೆ ರಕ್ಷಣೆಗಿಂಗ ಶೋಕಿಯೇ ಹೆಚ್ಚಾಗುತ್ತಿದೆ. ಅದೇ ಕಾರಣಕ್ಕೆ ತಾವು ನಿರ್ಮಿಸುವ ಮನೆಗಳನ್ನು ರಕ್ಷಣೆ ದೃಷ್ಟಿಯಲ್ಲಿ ನಿರ್ಮಿಸುವ ಬದಲು ಶೋಕಿಗಾಗಿ ಥಳಕು ಬಳುಕಾಗಿ ಕಾಣಿಸುವಂತೆ ನಿರ್ಮಿಸುತ್ತಿದ್ದಾರೆ. ಆದರೆ ಇದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಸ್ಟೋರಿ ಉತ್ತಮ ನಿದರ್ಶನ. ಹಾಗಾದರೆ ಏನು ಆ ಸ್ಟೋರಿ ಅಂತೀರಾ, ನೀವೇ ನೋಡಿ.
ಹೌದು, ಇತ್ತೀಚಿನ ದಿನಗಳಲ್ಲಿ ಜನರು ತುಂಬಾ ನವ ನಾಗರಿಕತೆಯತ್ತ ಮುಂದಾಗುತ್ತಿದ್ದಾರೆ. ಸೇವಿಸುವ ಆಹಾರ ಆರೋಗ್ಯಕರವಾಗಿರಬೇಕು ಎಂಬುದನ್ನು ಮರೆತು ತುಂಬಾ ದಿನಗಳಾಗಿದೆ. ಇನ್ನು ಮೈ ಮುಚ್ಚುವ ಬಟ್ಟೆಯಲ್ಲೂಷನ್ ಬಂದು ಮೈ ಮುಚ್ಚುವ ಬದಲು ತೋರಿಸುವುದೇ ಹೆಚ್ಚಾಗಿದೆ. ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಬಳಸುವ ಸೌಂದರ್ಯ ವರ್ಧಕಗಳಿಗೂ ಕಡಿಮೆ ಇಲ್ಲ. ಈ ಎಲ್ಲ ಬೆಳವಣಿಗೆಗಳಿಂದ ಮನುಷ್ಯರು ಎಂದೂ ನೋಡದ ಕಾಯಿಲೆಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿರೋದು ಗುಟ್ಟಾಗಿಲ್ಲ. ಆದರೆ ಈ ಶೋಕಿ ಅನ್ನೋದು ಇಷ್ಟಕ್ಕೇ ಸೀಮಿತವಾಗದೆ ಮನೆಗಳ ನಿರ್ಮಾಣಕ್ಕೂ ವಕ್ಕರಿಸಿದೆ. ಹಾಗಾಗಿಯೇ ಜನರು ತೀವ್ರ ಸಮಸ್ಯೆ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ತಮ್ಮ ಮನೆ ತಮಗೆ ಸೂಕ್ತ ರಕ್ಷಣೆ ನಡೀಬೇಕು ಎಂಬ ಯೋಚನೆಯೇ ಇಲ್ಲದೆ, ತಮ್ಮ ಮನೆ ನೋಡುಗರಿಗೆ ಆಕರ್ಷಣೀಯವಾಗಿ ಕಾಣಬೇಕು ಎಂಬ ದೃಷ್ಟಿಯಿಂದ ಗಾಜು ಗೋಡೆ ನಿರ್ಮಿಸುವ ಚಾಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಗಾಜು ಒಡೆದು ಯಾರೂ ಒಳ ಬರಲ್ಲ ಎಂದು ಬಾವಿಸಿದ್ರೆ ಅದು ತಪ್ಪಾಗುತ್ತದೆ, ಅರ್ಧ ರಾತ್ರಿಯಲ್ಲಿ ಗ್ಲಾಸ್ ಒಡೆದು ಒಳನುಗ್ಗಿದ ಕಳ್ಳನೊಬ್ಬ ಒಂದೆ ರಾತ್ರಿ ಎರಡು ಕಡೆ ದರೋಡೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಕಾಂತಿ ಸ್ವೀಟ್ಸ್ ಪಕ್ಕದಲ್ಲಿರುವ ಫಸ್ಟ್ ಕ್ರೆ ಬಟ್ಟೆ ಮತ್ತು ಟಾಯ್ಸ್ ಅಂಗಡಿ ಗಾಜಿನ ಗೋಡೆ ಒಡೆದು ಒಳ ನುಗ್ಗಿದ ಕಳ್ಳ 50 ಸಾವಿರ ನಗದು ಎಗರಿಸಿದ್ದಾನೆ. ಅಲ್ಲದೆ ಅದೇ ದಿನ ನಗರದ ಕೆನರಾ ಬ್ಯಾಂಕ್ ಬಳಿ ಇರುವ ಮ್ಯೂಚುಯಲ್ ಪಂಡ್ ಕಚೇರಿಗೆ ನುಗ್ಗಿ ಅಲ್ಲಿಯೂ ಸುಮಾರು 1.5 ಲಕ್ಷ ನಗದು ಕದ್ದು ಪರಾರಿಯಾಗಿದ್ದಾನೆ. ಈ ಎರಡೂ ಕಳವು ಮಾಡುವ ದೃಶ್ಯಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ರಾತ್ರಿ 3 ಗಂಟೆ ಸಮಯದಲ್ಲಿ ಗಾಜು ಒಡೆದು ಒಳ ನುಗ್ಗಿದ ಮುಸುಕುದಾರಿ ವ್ಯಕ್ತಿ ಈ ಕತರನಾಕ್ ಕೆಲಸ ಮಾಡಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ `ಧಾಖಲಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶಿಲನೆ ನಡೆಸಿದ್ದಾರೆ. ಪಕ್ಕದ ಮನೆಯ ಮೇಲ್ಚಾವಣೆಯಿಂದ ಬಂದು ಗಾಜು ಒಡೆದು ಒಳ ಪ್ರವೇಶಿಸಿರುವ ಕಳ್ಳ ಗುರುತು ಸಿಗದಂತೆ ಮುಸುಕು ಹಾಕಿಕೊಂಡಿರುವುದು ಪೊಲೀಸರ ಹುಡುಕಾಟಕ್ಕೆ ಸವಾಲಾಗಿ ಪರಿಣಮಿಸಿದೆ.