ಕೈವಾರದಲ್ಲಿ ಜಿಲ್ಲಾ ಮಟ್ಟದ ಆಪರೇಟರ್‌ಗಳ ಸಮಾಗಮ
1 min readಕೈವಾರದಲ್ಲಿ ಜಿಲ್ಲಾ ಮಟ್ಟದ ಆಪರೇಟರ್‌ಗಳ ಸಮಾಗಮ
ಪ್ರಸ್ತುತ ಕೇಬಲ್ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚೆ
ಚಿ0ತಾಮಣಿ ತಾಲೂಕಿನ ಕೈವಾರದಲ್ಲಿ ಇಂದು ಕೇಬಲ್ ಆಪರೇಟರ್‌ಗಳ ಜಿಲ್ಲಾ ಮಟ್ಟದ ಸಮಾಗಮ ನಡೆಯಿತು. ಕಾರ್ಯಕ್ರಮದಲ್ಲಿ ಆಕ್ಟೀವ್ ಲೈನ್ ಮಾಲಿಕ ಸತ್ಯನಾರಾಯಣ ಆಪರೇಟರ್‌ಗಳು ಪ್ರಸ್ತುತ ಪರಿಸ್ಥಿತಿ ಎದುರಿಸಲು ಅಗತ್ಯವಿರುವ ಸಲಹೆಗಳನ್ನು ನೀಡಿದರು.
ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಕೇಬಲ್ ಆಪರೇಟರ್‌ಗಳ ಸಮಾಗಮದಲ್ಲಿ ಕಾರ್ಯಕ್ರಮದಲ್ಲಿ ಆಕ್ಟೀವ್ ಲೈನ್ ಮಾಲಿಕ ಸತ್ಯನಾರಾಯಣ ಆಪರೇಟರ್‌ಗಳು ಪ್ರಸ್ತುತ ಪರಿಸ್ಥಿತಿ ಎದುರಿಸಲು ಇಂರ‍್ನೆಟ್. ಓ ಟಿ ಟಿ . ಐಪಿ ಟೀವಿ ಬಗ್ಗೆ ಸಲಹೆಗಳನ್ನು ನೀಡಿದರು. ನಿರೂಪಣೆಯನ್ನು ಗುಬ್ಬಿ ರಾಜೇಶ್ ಉತ್ತಮವಾಗಿ ನಡೆಸಿಕೊಟ್ಟರು. ಚಿಕ್ಕಬಳ್ಳಾಪುರ ಜಿಲ್ಲಾ ಕೇಬಲ್ ಆಪರೇಟರ್‌ಗಳ ಅಧ್ಯಕ್ಷ ಗಂಗಾಧರ್, ಕೋಲಾರ ಜಿಲ್ಲಾ ಅಧ್ಯಕ್ಷ ಪಲ್ಲವಿಮಣಿ, ತುಮಕೂರಿನ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಅವರೊಂದಿಗೆ ಚಿಂತಾಮಣಿ ಎಚ್‌ಟಿವಿ ರಾಜೇಂದ್ರ ಪ್ರಸಾದ್ ಅನಿಸಿಕೆಗಳನ್ನು ಹಂಚಿಕೊ0ಡರು.
ಸುಮಾರು ೧೫೦ ಕ್ಕೂ ಹೆಚ್ಚು ಕೇಬಲ್ ಆಪರೇಟರ್‌ಗಳು ಈ ಸಭೆಯಲ್ಲಿ ಭಾಗವಹಿಸಿ, ನೂತನ ತಂತ್ರನಕ್ಕೆ ತಕ್ಕಂತೆ ಕೇಬಲ್‌ನಲ್ಲಿ ಆಗಬೇಕಿರುವ ಬದಲಾವಣೆಗಳು, ತಂತ್ರನದಿ0ದ ಕೇಬಲ್ ಮೇಲೆ ನಡೆಯುತ್ತಿರುವ ಪರಿಣಾಮಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಿದರು. ಮುಖ್ಯವಾಗಿ ಪ್ರಸ್ತುತ ಸ್ಥಿತಿಯಲ್ಲಿ ಮಲ್ಟಿ ನ್ಯಾಷನಲ್ ಕಂಪನಿಯವರ ವಿರುದ್ದ ಕೇಬಲ್ ಆಪರೇಟರ್‌ಗಳು ನಿಲ್ಲಬೇಕಾದರೆ ಸಂಘಟನೆ ಮೂಲಕ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಇದಕ್ಕೆಲ್ಲಾ ಪ್ರೇರಣೆಯಾಗಿ ರಾಜ್ಯಾಧ್ಯಕ್ಷ ಪ್ಯಾಟ್ರಿಕ್ ಅವರು ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಪರೇಟರ್‌ಗಳು ಭಾಗವಹಿಸಿದ್ದಾ ಆಗಿದ್ದು, ಎಲ್ಲಾ ಆಪರೇಟರ್‌ಗಳಿಗೆ `ಧನ್ಯವಾದಗಳನ್ನು ತಿಳಿಸಲಾಯಿತು. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಆಪರೇಟರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇದಿಕೆಯಲ್ಲಿ ಈ ಎಲ್ಲಾ ಕಾರ್ಯಕ್ರಮದ ರೂವಾರಿಗಳಾದ ಕೈವಾರ ರಾಮಕೃಷ್ಣಪ್ಪನವರಿಗೆ ಎಲ್ಲಾ ಕೇಬಲ್ ಆಪರೇಟರಸ್ ಅಭಿನಂದನೆಗಳನ್ನು ಸಲ್ಲಿಸಿದರು..