ಪಂಚರಾಜ್ಯಗಳ ಎಕ್ಸಿಟ್ ಪೋಲ್‌ನತ್ತ ಎಲ್ಲರ ಚಿತ್ತ, ಗದ್ದುಗೆ ಏರುವವರು ಯಾರು?
1 min readನವೆಂಬರ್ 30: ಪಂಚರಾಜ್ಯಗಳಲ್ಲಿ 2023 ರ ವಿಧಾನಸಭಾ ಚುನಾವಣೆಗಳು ಇಂದು ಮುಕ್ತಾಯಗೊಂಡಿದ್ದು, ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶವನ್ನು ನಿರೀಕ್ಷಿಸುತ್ತಿರುವ ಜನರು ಪಂಚರಾಜ್ಯಗಳ ಅಂದರೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ ಗಢ ಮತ್ತು ಮಿಜೋರಾಂನ ಮತಗಟ್ಟೆ ಫಲಿತಾಂಶಗಳನ್ನು ತಿಳಿಯಲು ಉತ್ಸುಕರಾಗಿದ್ದಾರೆ.
ನವೆಂಬರ್ 23 ರಂದು ರಾಜಸ್ಥಾನದ ವಿಧಾನಸಭಾ ಚುನಾವಣೆಗಳು ನಡೆದಿದ್ದು, ಮಧ್ಯಪ್ರದೇಶದಲ್ಲಿ ನವೆಂಬರ್ 17, ಛತ್ತೀಸ್ಗಢದಲ್ಲಿ ನವೆಂಬರ್ 7 ಮತ್ತು ನವೆಂಬರ್ 17 ರಂದು ಎರಡು ಹಂತದಲ್ಲಿ ಚುನಾವಣೆ ನಡೆದಿದೆ. ಸುದ್ದಿ ಸಂಸ್ಥೆಗಳು ಮತ್ತು ವಿವಿಧ ಏಜೆನ್ಸಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಗಳು ನಿರ್ದಿಷ್ಟ ಪ್ರದೇಶಗಳ ಮತದಾನದ ಮಾದರಿಗಳ ಒಳನೋಟಗಳನ್ನು ಸಂಗ್ರಹಿಸಲು ಮತದಾರರ ಸಮೀಕ್ಷೆಗಳಾಗಿ ಕಾರ್ಯನಿರ್ವಹಿಸುತ್ತವೆ. ಎಕ್ಸಿಟ್ ಪೋಲ್ ಇಂದು (ಗುರುವಾರ) ಸಂಜೆ 6 ಗಂಟೆಗೆ ಪ್ರಸಾರವಾಗಲಿದ್ದು, ಎಕ್ಸಿಟ್ ಪೋಲ್ ನ ಅಂಕಿ ಸಂಖ್ಯೆಗಳನ್ನ ಇಲ್ಲಿ ತಿಳಿಯಿರಿ.