ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 26, 2024

Ctv News Kannada

Chikkaballapura

ಜಿಲ್ಲೆಯಾದ್ಯಂತ ಆಷಾಢ ಏಕಾದಶಿ ಸಂಭ್ರಮ

1 min read

ಜಿಲ್ಲೆಯಾದ್ಯಂತ ಆಷಾಢ ಏಕಾದಶಿ ಸಂಭ್ರಮ
ಮೊಹರo ಜೊತೆಗೆ ಏಕಾದಶಿ ಉಪವಾಸದಲ್ಲಿ ಜನ
ಆಷಾಢ ಏಕಾದಶಿ ಉಪವಾಸ ಜಿಲ್ಲೆಯಾದ್ಯಂತ ಅದ್ಧೂರಿ

ತಿಂಗಳಿಗೆ ಎರಡು ಬಾರಿ ಬರುವ ಏಕಾದಶಿ ಎಂದರೆ ಉಪವಾಸಕ್ಕೆ ಮತ್ತೊಂದು ಹೆಸರು. ಅಮಾವಾಸ್ಯೆ ಮುಗಿದ ಮತ್ತು ಹುಣ್ಣಿಮೆ ಮುಗಿದ 11ನೇ ದಿನಕ್ಕೆ ಈ ಏಕಾದಶಿ ಬರುತ್ತದೆ. ತಿಂಗಳಿಗೆ ಎರಡು ದಿನವಾದರೂ ಉಪವಾಸ ಇರಬೇಕು, ಆ ಮೂಲಕ ಹೊಟ್ಟೆಯನ್ನು ಸ್ವಚ್ಛವಾಗಿ ಇಟ್ಟಿಕೊಳ್ಳಬೇಕು ಎಂಬ ಉದ್ಧೇಶದಿಂದ ಈ ಏಕಾದಶಿ ಉಪವಾಸವನ್ನು ಹಿರಿಯರು ತಂದಿದ್ದಾರೆ. ಈ ಏಕಾದಶಿಯಲ್ಲಿಯೂ ವೈಕುಂಠ ಏಕಾದಶಿ ಮತ್ತು ಆಷಾಢ ಏಕಾದಶಿಗಳು ತನ್ನದೇ ಆದ ವಿಶೇಷತೆ ಹೊಂದಿವೆ. ಇಂದು ಆಷಾಢ ಏಕಾದಶಿಯಾಗಿದ್ದು, ಈ ಹಬ್ಬದ ವಿಶೇಷತೆ ತಿಳಿಯೋಣ ಬನ್ನಿ.

ಹಿಂದೂ ಪಂಚಾoಗದ 12 ಮಾಸಗಳ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ 11ನೇ ದಿನವನ್ನು ಏಕಾದಶಿ ಎನ್ನಲಾಗುತ್ತದೆ. ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ. ಹಾಗೆಯೇ ವೈಕುಂಠ ಏಕಾದಶಿ ಮತ್ತು ಆಷಾಢ ಏಕಾದಶಿ ಎಂಬ ಎರಡು ಏಕಾದಶಿಗಳಿಗೆ ತನ್ನದೇ ಆದ ಇತಿಹಾಸವಿದೆ. ಇಂದು ಆಷಾಢ ಏಕಾದಶಿಯಾದ ಕಾರಣ ಹಿನ್ನೆಲೆ ನೋಡುವುದಾದರೆ ಹಿಂದೆ ದೇವತೆಗಳು ಹಾಗೂ ದಾನವರ ನಡುವೆ ಯುದ್ಧವಾಯಿತು. ಕುಂಭ ದೈತ್ಯ ಎಂಬ ರಕ್ಕಸನ ಪುತ್ರ ಮೃದುಮಾನ್ಯ ಎಂಬ ರಾಕ್ಷಸ ತಪಸ್ಸು ಆಚರಿಸಿ ಶಿವನಿಂದ ಅಮರತ್ವ ಪಡೆಯುತ್ತಾನೆ.

ಇದರಿಂದ ಬ್ರಹ್ಮ, ವಿಷ್ಣು ಮತ್ತು ಶಿವ ಸೇರಿ ಮೂವರೂ ತ್ರಿಮೂರ್ತಿಗಳು ಮೃಧುಮಾನ್ಯನನ್ನು ಸಂಹರಿಸಲು ಆಗಲಿಲ್ಲ. ಅವನ ಭಯದಿಂದ ದೇವತೆಗಳು ಚಿತ್ರಕೂಟ ಪರ್ವತದ ಮೇಲೆ ರಾತ್ರಿ ಮರದ ಕೆಳಗಿದ್ದ ಒಂದು ಗುಹೆಯಲ್ಲಿ ಅಡಗಿ ಕುಳಿತರು. ಹಾಗೆ ಅಡಗಿ ಕುಳಿತ ದಿನ ಆಷಾಢ ಏಕಾದಶಿ. ರಾಕ್ಷಸನ ಭಯದಲ್ಲಿ ಗುಹಿಯೆಲ್ಲಿ ಅಡಗಿ ಕುಳಿತ ಪರಿಣಾಮ ಅವರು ಅಂದು ಯಾವುದೇ ಆಹಾರ ಸೇವಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಉಪವಾಸ ಮಾಡಬೇಕಾಯಿತು. ಅವರೆಲ್ಲರಿಗೂ ಮಳೆಯಲ್ಲಿ ನೆನೆಯುವ ಯೋಗವು ಕೂಡಿಬಂತು. ಆಗ ಅವರೆಲ್ಲರೂ ಒಟ್ಟಿಗೆ ಇರುವಾಗ ಅವರೆಲ್ಲರ ಶ್ವಾಸ ಒಗ್ಗೂಡಿ ಆ ಶ್ವಾಸದಿಂದ ಒಂದು ಶಕ್ತಿ ಉತ್ಪತ್ತಿಯಾಯಿತು. ಆ ಶಕ್ತಿಯಿಂದ ಗುಹೆಯ ಬಾಗಿಲಲ್ಲಿ ಕಾಯುತ್ತ ಕುಳಿತಿದ್ದ ಮೃದುಮಾನ್ಯ ದೈತ್ಯನ ಸಂಹಾರವಾಯಿತು ಎಂಬುದು ಪ್ರತೀತಿ.

ಈ ಶಕ್ತಿದೇವಿಯೇ ಏಕಾದಶಿ ದೇವತೆ. ಆಷಾಢ ಏಕಾದಶಿಯಂದು ತ್ರಿಮೂರ್ತಿಗಳು ಉಪವಾಸ ಮಾಡಿದ ದಿನವೇ ಆಷಾಢ ಏಕಾದಶಿ. ಮನುಷ್ಯನ ಒಂದು ವರ್ಷವೆಂದರೆ ಅದು ದೇವತೆಗಳ ಒಂದು ದಿನಕ್ಕೆ ಸಮಾನ. ದಕ್ಷಿಣಾಯನ ದೇವತೆಗಳ ರಾತ್ರಿಯಾಗಿದ್ದು, ಉತ್ತರಾಯಣ ಅವರಿಗೆ ಹಗಲು. ಆಷಾಢ ಮಾಸದಲ್ಲಿ ಬರುವ ಕರ್ಕ ಸಂಕ್ರಾoತಿಗೆ ಉತ್ತರಾಯಣ ಪೂರ್ಣಗೊಂಡು ದಕ್ಷಿಣಾಯನ ಪ್ರಾರಂಭವಾಗುವುದು, ಅಂದರೆ ದೇವತೆಗಳ ರಾತ್ರಿ ಪ್ರಾರಂಭವಾಗುತ್ತದೆ. ಹಾಗಾಗಿ ಆಷಾಢ ಏಕಾದಶಿಯನ್ನು ದೇವಶಯನಿ ಏಕಾದಶಿ ಎಂದು ಕರೆಯುತ್ತಾರೆ.

ಏಕಾದಶಿಯ ಹಿಂದಿನ ದಿನ ಅಂದರೆ ದಶಮಿಯಂದು ಒಪ್ಪೊತ್ತಿನ ಆಹಾರ ಸೇವಿಸುತ್ತಾರೆ. ಏಕಾದಶಿಯಂದು ಪ್ರಾತಃ ಸಮಯ ಸ್ನಾನ ಮಾಡಿ, ಉಪವಾಸ ಮಾಡುತ್ತಾರೆ. ತುಳಸಿಯನ್ನು ಅರ್ಪಿಸಿ ಶ್ರೀವಿಷ್ಣು ಪೂಜೆ ಮಾಡಿ, ರಾತ್ರಿ ಹೊತ್ತು ಹರಿಭಜನೆಯಲ್ಲಿ ಜಾಗರಣೆ ಮಾಡುತ್ತಾರೆ. ಆಷಾಢ ಶುಕ್ಲ ದ್ವಾದಶಿಯಂದು ವಾಮನನ ಪೂಜೆ ಮಾಡಿ ಉಪವಾಸ ಅಂತ್ಯಗೊಳಿಸುತ್ತಾರೆ. ತಿಥಿಯು ಹಿಂದೂ ಧರ್ಮದ ಅಪಾರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವ ಹೊಂದಿದೆ. ಈ ದಿನ ಈ ಬ್ರಹ್ಮಾಂಡದ ರಕ್ಷಕನಾದ ವಿಷ್ಣುವಿಗೆ ಸಂಪೂರ್ಣವಾಗಿ ಸಮರ್ಪಿತವಾಗಿದೆ. ಭಕ್ತರು ಪ್ರತಿ ತಿಂಗಳು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದಲ್ಲಿ ಏಕಾದಶಿ ಉಪವಾಸವನ್ನು ಆಚರಿಸುತ್ತಾರೆ. ಈ ಉಪವಾಸ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ ಎಂಬುದು ನಂಬಿಕೆ.

About The Author

Leave a Reply

Your email address will not be published. Required fields are marked *