ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಕೃತಕ ಕಾಲು ವಿತರಣೆ ಸಮಾರಂಭ

1 min read

ಕೃತಕ ಕಾಲು ವಿತರಣೆ ಸಮಾರಂಭ

ರಾಯಚೂರಿನ ಆರ್‌ಕೆ ಫೌಂಡೇಶನ್‌ನಿ0ದ ಕಾರ್ಯಕ್ರಮ

ರಾಯಚೂರಿನ ಆರ್‌ಕೆ ಭಂಡಾರಿ ಫೌಂಡೇಶನ್‌ನಿ0ದ ವಿಕಲ ಚೇತನರಿಗೆ ಉಚಿತ ಕೃತಕ ಕಾಲು ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು. ನಂಜನಗೂಡಿನ ಖಾಸಗಿ ಬಸ್ ನಿಲ್ದಾಣದ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ನಡೆಯಿತು.

ರಾಯಚೂರಿನ ಆರ್‌ಕೆ ಭಂಡಾರಿ ಫೌಂಡೇಶನ್‌ನಿ0ದ ವಿಕಲ ಚೇತನರಿಗೆ ಉಚಿತ ಕೃತಕ ಕಾಲು ಜೋಡಣಾ ಕಾರ್ಯಕ್ರಮವನ್ನು ನಂಜನಗೂಡು ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸನೂರ್ ಉದ್ಘಾಟಿಸಿ ಮಾತನಾಡಿ, ಕಾಲು ಇಲ್ಲದವರಿಗೆ ಕೃತಕ ಕಾಲು ಜೋಡಣೆ ಮಾಡವ ಕೆಲಸ ಶ್ಲಾಘನೀಯ. ಇಂಥಹವರಿಗೆ ಒಳ್ಳೆ ಮನಸ್ಸಿನಿಂದ ಸೇವೆ ಸಲ್ಲಿಸಿದರೆ ದೇವರಿಗೆ ಸೇವೆ ಸಲ್ಲಿಸಿದಂತೆ. ಸುಮಾರು ಮೂರು ಕೋಟಿ ವಿಕಲಚೇತನ ಜನರು ಭಾರತದಲ್ಲಿದ್ದಾರೆ. ಅವರಿಗೆ ಸಿಗಬೇಕಾದ ಎಲ್ಲ ಸೌಲಭ್ಯ ಸಿಗುವುದು ತುಂಬಾ ವಿಳಂಬವಾಗುತ್ತದೆ. ಆದರೆ ಆರ್‌ಕೆ ಭಂಡಾರಿ ಫೌಂಡೇಶನ್ ಮೈಸೂರು ಕರ್ನಾಟಕ ಸ್ಟೇಟ್ ಮಿನರಲ್ಸ್ ಲಿಮಿಟೆಡ್ ಸಹಾಯದಿಂದ ಈ ಸೌಲಭ್ಯ ನೀಡಲು ಮುಂದಾಗಿರುವುದು ಶ್ಲಾಘನಿಯವಾಗಿದೆ ಎಂದರು.

ನ0ಜನಗೂಡು ತಾಲೂಕಿನ ವಿಕಲ ಚೇತನರಿಗೆ ಕೃತಕ ಕಾಲು, ವೀಲ್ ಚೇರ್, ಊರು ಗೋಲು ಇನ್ನಿತರ ಪರಿಕರಗಳನ್ನು ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಸೌಲಭ್ಯಗಳು ಇತರರಿಗೂ ಸಿಗಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದರು. ಆರ್ ಕೆ ಫೌಂಡೇಶನ್ ಅಧ್ಯಕ್ಷ ಸೌಭಾಗ್ಯ ರಾಜ್ ಭಂಡಾರಿ ಮಾತನಾಡಿ, ೧೦ ವರ್ಷಗಳಲ್ಲಿ ರಾಜ್ಯಾದಂತ ೧೫ ಜಿಲ್ಲೆಗಳಲ್ಲಿ ಸುಮಾರು 21 ಸಾವಿರ ಜನರಿಗೆ ಕೃತಕ ಕಾಲು ಹಾಗೂ ವೀಲ್ ಚೇರ್ ಸೌಲಭ್ಯ ನೀಡಿದ್ದೇವೆ ಎಂದರು.

ನ0ಜನಗೂಡಿಗೆ ಸ್ವತಃ ನಾನೆ ಬಂದು ೮೦ ಜನರಿಗೆ ಈ ಸೌಲಭ್ಯ ನೀಡಿದ್ದೇವೆ, ನಾನು ಇಷ್ಟು ವಯಸ್ಸಾಗಿದ್ದರು ರಾಯಚೂರಿನಿಂದ ಬಂದು ಕಣ್ಣಾರೆ ಕೃತಕ ಕಾಲು ಜೋಡಣೆ ಮಾಡಿ ಹೋಗುತ್ತಿರುವ ಜನರನ್ನು ನೋಡಿ ನನಗೆ ಸಂತೋಷ ವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಮಿನರಲ್ ಲಿಮಿಟೆಡ್ ವ್ಯವಸ್ಥಾಪಕ ನಿರ್ಮಲ್ ಕುಮಾರ್, ಶೋಭಾರಾಜ್ ಭಂಡಾರಿ, ರವಿ, ರಂಗಸ್ವಾಮಿ ಶಿವಾಲಿ ಇದ್ದರು.

 

About The Author

Leave a Reply

Your email address will not be published. Required fields are marked *