ಮನೆ, ಬೈಕ್ ಕಳವು ಮಾಡುತ್ತಿದ್ದ ಖದೀಮರ ಬಂಧನ
1 min read
ಮನೆ, ಬೈಕ್ ಕಳವು ಮಾಡುತ್ತಿದ್ದ ಖದೀಮರ ಬಂಧನ
ಬಾಗೇಪಲ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ
ಅಂತಾರಾಜ್ಯ ಕಳ್ಳರ ಬಂಧನ, ನಗ, ನಾಣ್ಯ ವಶ
ಬಾಗೇಪಲ್ಲಿ ಪೊಲೀಸರು ಭರ್ಜರಿ ಭೇಟೆಯಾಡಿದ್ದು, ಮನೆಗಳವು ಮತ್ತು ಬೈಕ್ ಕಳವು ಮಾಡುತ್ತಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ, ಕೈ ಚಳಕ ತೋರುತ್ತಿದ್ದ ಖದೀಮರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.
ಬಾಗೇಪಲ್ಲಿ ಪೊಲೀಸರು ಖದೀಮರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಫೆ.5 ರಂದು ಬೈರೆಡ್ಡಿ ಎಂಬುವರ ಮನೆಯಲ್ಲಿ 8 ಸಾವಿರ ನಗದು, ಚಿನ್ನಾಭರಣ ಕಳು ಪ್ರಕರಣ, ಫೆ.6 ರಂದು ಶಿವಕುಮಾರ್ ಎಂಬುವರ ಮನೆಯಲ್ಲಿ ಚಿನ್ನದ ಒಡವೆ ಮತ್ತು ನಗದು ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರ ನೀಡಿದ್ದರು. ಈ ಪ್ರಕರಣಗಳನ್ನು ಪ್ರತ್ಯೇಕ ತಂಡ ರಚಿಸಿ, ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡು ವೆಂಕಟೇಶ್ ಬಾಬು ಮತ್ತು ಸುರೇಶ್ ಎಂಬ ಆಂಧ್ರಪ್ರದೇಶದ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಅತಾಂರಾಜ್ಯ ಕಳನ್ನರನ್ನು ಬಂಧಿಸಿ, ಆರೋಪಿಗಳಿಂದ ೫೮ ಗ್ರಾಂ ತೂಕದ 4 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜಾ ಇಮಾಮ್ ಖಾಸೀಂ ಮತ್ತು ಡಿವೈಎಸ್ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪ್ರಶಾಂತ್ ಆರ್ ವರ್ಣಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.
ಅಪರಾಧ ವಿಭಾಗದ ಎಸ್ಐ ಮುನಿರತ್ನಂ ಪಿ ಹಾಗೂ ಸಿಬ್ಬಂದಿಯಾದ ವೆಂಕಟರವಣ, ಸುರೇಶ, ಮೋಹನ್ ಕುಮಾರ್, ಧನಂಜಯ ಕುಮಾರ್, ಸಾಗರ್, ಅನಿಲ್ ಕುಮಾರ್, ಕೃಷ್ಣಪ್ಪ, ಶಂಕರಪ್ಪ, ರಾಜಪ್ಪ, ಚಾಲಕ ನೂರ್ ಬಾಷಾ ಹಾಗೂ ತಾಂತ್ರಿಕ ಸಿಬ್ಬಂದಿ ರವಿಕುಮಾರ್, ಮುರಳಿಕೃಷ್ಣಪ್ಪ ಕಾರ್ಯಾಚರಣೆ ನಡೆಸಿ, ಆರೋಪಿಗಳು ಮತ್ತು ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಚರಣೆಯಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.