‘ರಾಹುಲ್ ಗಾಂಧಿ ಅವರನ್ನು ಕಂಡರೆ ನಿಮಗೆ ಭಯವೇ?’
1 min read
ದೇಶದಲ್ಲಿ ಈಗ ರಾಹುಲ್ ಗಾಂಧಿ ರ್‍ಯಾಲಿ ವಿಚಾರ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತಿಕ್ಕಾಟವೂ ಜೋರಾಗಿದೆ. ಇದೇ ಸಮಯಕ್ಕೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಹೀಗೆ ಇದೀಗ ಸಿಎಂ ಸಿದ್ದರಾಮಯ್ಯ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಬಗ್ಗೆ & ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ, ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ.ಅಂದಹಾಗೆ ರಾಹುಲ್ ಗಾಂಧಿ ಹಾಗೂ ಬಿಜೆಪಿ ನಾಯಕರ ನಡುವೆ ದೊಡ್ಡ ಕಿಚ್ಚು ಹೊತ್ತಿ ವಾಗ್ದಾಳಿ ಜೋರಾಗಿದೆ. ಅದ್ರಲ್ಲೂ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮೂಲಕ ಪ್ರಶ್ನೆ ಕೇಳಿದ್ದರು. 50,000 ಜನ ಅಲ್ಲ ರಾಹುಲ್ ಗಾಂಧಿ ಯಾತ್ರೆಗೆ 2,000 ಜನರು ಕೂಡ ಬಂದಿಲ್ಲ ಎಂದು ಅಸ್ಸಾಂನ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು. ಈಗ ಆ ಮಾತಿಗೆ ಸಿಎಂ ಸಿದ್ದರಾಮಯ್ಯ ಇಂಗ್ಲಿಷ್ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಹಾಗಾದರೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ಭ್ರಷ್ಟಾಚಾರದ ಆರೋಪ ನಿಮ್ಮನ್ನು…ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ತಕ್ಕ ತಿರುಗೇಟು ನೀಡಿದ್ದಾರೆ. ‘ಅಂಕಿ ಅಂಶಗಳತ್ತ ಗಮನಹರಿಸಿ ಮುಖ್ಯ ವಿಷಯ ಮರೆಯಬೇಡಿ. ಅಲ್ಲಿ ಕೇವಲ ರಾಹುಲ್ ಗಾಂಧಿ ಅವರೊಬ್ಬರೇ ಇದ್ದರೂ ಸಹಜವಾಗಿ ಈ ಪ್ರಶ್ನೆ ಉದ್ಭವಿಸುತ್ತವೆ. ಸಂವಿಧಾನ ವಿರೋಧಿ ಕ್ರಮಗಳಿಂದ ರಾಹುಲ್ ಗಾಂಧಿ ಅವರನ್ನು ತಡೆದಿದ್ದು ಯಾಕೆ? ಅವರನ್ನು ಕಂಡರೆ ನಿಮಗೆ ಭಯವೇ? ಅಥವಾ ಭ್ರಷ್ಟಾಚಾರದ ಆರೋಪ ನಿಮ್ಮನ್ನು ಇನ್ನು ಕಾಡುತ್ತಿದ್ದು, ಬಿಜೆಪಿಯ ಅಣತಿಯಂತೆ ನಿರ್ಧಾರ ತೆಗೆದುಕೊಂಡಿದ್ದೀರಾ?’ ಎಂದಿದ್ದಾರೆ.ಅಸ್ಸಾಂ ಸಿಎಂ VS ಕರ್ನಾಟಕ ಸಿಎಂ!ಹಾಗೇ ‘ಅಸ್ಸಾಂ ರಾಜ್ಯ ತನ್ನದೇ ಆದ ಭಾಷೆ, ಸಂಸ್ಕೃತಿ ಮತ್ತು ಇತಿಹಾಸ ಶ್ರೀಮಂತಿಕೆ ಹೊಂದಿದ್ದು, ಅದಕ್ಕೆ ತಕ್ಕಂತೆ ಆ ರಾಜ್ಯಕ್ಕೆ ಸಮರ್ಥ ನಾಯಕನ ಅಗತ್ಯವಿದೆ. ಪಕ್ಷದ ಒತ್ತಡಕ್ಕೆ ಮಣಿಯುವ ನಿಮ್ಮಂತಹವರಲ್ಲ. ಪಕ್ಷದ ಸೂಚನೆಗಿಂತ ಅಸ್ಸಾಂ ರಾಜ್ಯದ ಹಕ್ಕು ಹಾಗೂ ಘನತೆಯನ್ನು ಆಯ್ಕೆ ಮಾಡುವ ಸಮಯ ಬಂದಿದೆ.’ ಎಂದು ಅಸ್ಸಾಂ ಮುಖ್ಯಮಂತ್ರಿಗೆ ಈ ಮೂಲಕ ಕರ್ನಾಟಕ ಸಿಎಂ ತಿರುಗೇಟು ನೀಡಿದ್ದಾರೆ. ಇನ್ನು, ‘ಕರ್ನಾಟಕ ಹಾಗೂ ತೆಲಂಗಾಣ ರಾಜ್ಯವನ್ನೇ ನೋಡಿ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಥಳೀಯ ಹಿತಾಸಕ್ತಿಯನ್ನು ಕಾಪಾಡುತ್ತಾ ವಿವಿಧತೆಯಲ್ಲಿ ವೈವಿದ್ಯತೆಯನ್ನು ಎತ್ತಿ ಹಿಡಿದಿದೆ. ಇದು ಅಂಕಿ ಸಂಖ್ಯೆಗಳ ವಿಚಾರವಲ್ಲ. ಇದು ಸರಿಯಾದ ವಿಚಾರದ ಪರವಾಗಿ ನಿಲ್ಲುವ ತತ್ವ ಹಾಗೂ ಧೈರ್ಯದ ವಿಚಾರ. ಕಾಂಗ್ರೆಸ್ ಪಕ್ಷ ನ್ಯಾಯಕ್ಕಾಗಿ ತನ್ನ ಹೋರಾಟವನ್ನು ಮುಂದುವರಿಸಲಿದೆ.’ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.