ಪ್ರಾಮಾಣಿಕತೆಗೆ ಮೆಚ್ಚಿ ಕರವೇಯಿಂದ ಸನ್ಮಾನ
1 min readಪ್ರಾಮಾಣಿಕತೆಗೆ ಮೆಚ್ಚಿ ಕರವೇಯಿಂದ ಸನ್ಮಾನ
ಬಸ್ಸಿನಲ್ಲಿ ಮರೆತಿದ್ದ ಬಂಗಾರ ವಾಪಸ್ ನೀಡಿ ಮೆಚ್ಚುಗೆ
ಕರವೇ ಸಂಘಟನೆಗಳಿ0ದ ಅದ್ಧೂರಿ ಸನ್ಮಾನ
ಬಾಗೇಪಲ್ಲಿ ಪಟ್ಟಣದ ಪ್ರಯಾಣಿಕರು ಬಿಟ್ಟು ಹೋಗಿದ್ದ ಬಂಗಾರ ಮರಳಿಸಿದ ಪಟ್ಟಣದ ಬಸ್ ಘಟಕದ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ, ಬಸ್ ಚಾಲಕ ಮಂಜುನಾಥ ಮತ್ತು ನಿರ್ವಾಹಕ ರಾಜಪ್ಪ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿ ಬಸ್ ನಿಲ್ದಾಣದಲ್ಲಿ ಕರವೇ ಸಂಘಟನೆಗಳ ಒಕ್ಕೂಟದಿಂದ ಇಂದು ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ಪ್ರಯಾಣಿಕರು ಬಿಟ್ಟುಹೋಗಿದ್ದ ಚಿನ್ನವನ್ನು ಪ್ರಾಮಾಣಿಕತೆಯಿಂದ ಅದರ ಮಾಲೀಕರಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಾಗೇಪಲ್ಲಿ ಬಸ್ ಘಟಕದ ವ್ಯವಸ್ಥಪಾಕ ಶ್ರೀನಿವಾಸಮೂರ್ತಿ, ಬಸ್ ಚಾಲಕ ಮಂಜುನಾಥ್ ಹಾಗೂ ನಿರ್ವಾಹಕ ರಾಜಪ್ಪ ಅವರನ್ನು ಇಂದು ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಈ ವೇಳೆ ಕರವೇ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕನ್ನಡಸೇನೆ ಬಾಬಾಜಾನ್ ಮಾತನಾಡಿ, ಬಾಗೇಪಲ್ಲಿ ೪ನೇ ವಾರ್ಡಿನ ನಿವಾಸಿ ನಾಗಮಣಿ ಎಂಬುವರು ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರಕ್ಕೆ ತನ್ನ ಇಬ್ಬರು ಮಕ್ಕಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಸುಮಾರು ಒಂದೂವರೆ ಲಕ್ಷ ರೂ ಮೌಲ್ಯದ ಚಿನ್ನದ ಒಡವೆ ಇದ್ದ ವ್ಯಾನಿಟಿ ಬ್ಯಾಗನ್ನು ಬಸ್ಸಿನಲ್ಲಿಯೇ ಮರೆತು ಹೋಗಿದ್ದರು.
ಬಸ್ ಚಾಲಕ ವಿ. ಮಂಜುನಾಥ್ ಮತ್ತು ನಿರ್ವಾಹಕ ರಾಜಪ್ಪ ಬಸ್ಸನ್ನು ಬಾಗೇಪಲ್ಲಿ ಬಸ್ ಡಿಪೋದಲ್ಲಿ ಹಿಂದಿರುಗಿಸಲು ಹೋದಾಗ ಬಸ್ಸಿನಲ್ಲಿದ್ದ ವ್ಯಾನಿಟಿ ಬ್ಯಾಗನ್ನು ಗಮನಿಸಿ ಘಟಕದ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ ಅವರ ಗಮನಕ್ಕೆ ತಂದಿದ್ದಾರೆ. ಶ್ರೀನಿವಾಸಮೂರ್ತಿ ವ್ಯಾನಿಟಿ ಬ್ಯಾಗನ್ನು ಪರಿಶೀಲಿಸಿ ಬ್ಯಾಗಿನಲ್ಲಿ ಆಧಾರ್ ಕಾರ್ಡ್ ಮೂಲಕ ವಿಳಾಸ ಪತ್ತೆಮಾಡಿ ಕೆಎಸ್‌ಆರ್‌ಟಿಸಿ ಬಸ್ ಘಟಕಕ್ಕೆ ಮಾಲೀಕರನ್ನು ಕರೆಯಿಸಿ, ಬಂಗಾರದ ಒಡವೆ ಇದ್ದ ಬ್ಯಾಗನ್ನು ಹಿಂದಿರುಗಿಸಿದ್ದಾರೆ. ಇದರಿಂದ ಮಾನವೀಯತೆ ಮೆರೆದ ಬಸ್ ಡಿಪೋ ಮ್ಯಾನೇಜರ್, ಬಸ್ ಚಾಲಕ, ಬಸ್ ನಿರ್ವಾಹಕರಿಗೆ ಕರವೇ ಕುಟುಂಬದಿ0ದ ಸನ್ಮಾನ ಮಾಡುತ್ತಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಟಿಸಿ ಮೂರ್ತಿ, ಬೈರವ್, ಬಸ್ ಚಾಲಕರು, ನಿರ್ವಾಹಕರು, ಗೃಹರಕ್ಷಕ ದಳದ ಕೃಷ್ಣಪ್ಪ, ಕರವೇ ಕಡೇಹಳ್ಳಿ ಶಿವಪ್ಪ, ಷೇಕ್ ಹಿದಾಯಿತ್ತುಲ್ಲಾ, ಮಂಜುನಾಥ,ಯಲ್ಲAಪಲ್ಲಿ ನಾಗೇಶ್, ಸಲೀಂ, ಮಧು, ಇದ್ದರೀಸ್ ವುಲ್ಲಾ, ಆದಿಕೇಶ್ವರೆಡ್ಡಿ ಇದ್ದರು.