ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಮರಳಿ ಬಾರದ ಲೋಕಕ್ಕೆ ಹೋದ ನಿರೂಪಕಿ ಅಪರ್ಣಾ

1 min read

ಮರಳಿ ಬಾರದ ಲೋಕಕ್ಕೆ ಹೋದ ನಿರೂಪಕಿ ಅಪರ್ಣಾ
ಸಿನಿಮಾ, ಧಾರಾವಾಹಿ, ನಿರೂಪಣೆಯಲ್ಲಿಯೇ ಖ್ಯಾತಿ
ಮಜಾ ಟಾಕೀಸ್ ಮೂಲಕ ಕನ್ನಡಿಗರ ಮನ ಗೆದ್ದ ನಟಿ

ಅಪರ್ಣ ಕನ್ನಡದ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅಪ್ಪಟ ಕನ್ನಡತಿ. ನಿರೂಪಕಿ, ನಟಿಯಾಗಿ ಗುರುತಿಸಿಕೊಂಡ ಅಪರ್ಣ ಅವರು ಇನ್ನಿಲ್ಲ ಎಂಬ ಸುದ್ದಿ ಇಡೀ ಕರ್ನಾಟಕವನ್ನು ಸೂತಕದಲ್ಲಿ ಮುಳುಗಿಸಿದೆ ಎಂದರೆ ತಪ್ಪಾಗಲಾರದು. ನಿರರ್ಗಳ ಮಾತಿನಿಂದಲೇ ಕನ್ನಡಿಗರ ಮನಗೆದ್ದಿದ್ದ ಅಪರ್ಣ ಇಂದು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ನಾಡಿನ ಗಣ್ಯಾತಿ ಗಣ್ಯರೆಲ್ಲರೂ ಅಪರ್ಣ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ನಟಿಯಾಗಿ, ನಿರೂಪಕಿಯಾಗಿ, ಕಿರುತೆರೆಯಲ್ಲಿ ಗುರುತಿಸಿಕೊಂಡು, ಅಚ್ಚ ಕನ್ನಡದ ನಿರೂಪಣೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ನಿರ್ಗಮಿಸಿದ್ದಾರೆ ಅಪರ್ಣಾ ವಸ್ತಾರೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಕಂಡಿದ್ದಿಲ್ಲ, ಈ ಕಾಯಿಲೆ ಬಗ್ಗೆಯೂ ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ. ಇತ್ತೀಚಿನ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರ್ಣಾ, ಆರೋಗ್ಯ ಸ್ಥಿತಿಯೂ ತೀರಾ ಹದಗೆಟ್ಟಿತ್ತು. ಜುಲೈ ೧೧ರ ರಾತ್ರಿ ೯;೩೦ರ ಸುಮಾರಿಗೆ ಅಪರ್ಣಾ ಇಹಲೋಕ ತ್ಯಜಿಸಿದ್ದಾರೆ.

ನಟಿ, ನಿರೂಪಕಿ ಅಪರ್ಣಾ ಬಣ್ಣದ ಲೋಕದ ಮೇಲಿನ ಸೆಳೆತದಿಂದ ನಟನಾರಂಗಕ್ಕೆ ಆಗಮಿಸಿದವರು. 1985ರಲ್ಲಿ ತೆರೆಗೆ ಬಂದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು ಅಪರ್ಣಾ. ಅದಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಕಿರುತೆರೆಯಲ್ಲಿಯೂ ಗುರುತಿಸಿಕೊಂಡರು. ಆದರೆ, ಸಿನಿಮಾಗಳಿಗಿಂತ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ನಿರೂಪಣೆ. ಸರಿಸುಮಾರು ೭ ಸಾವಿರಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದ ಹೆಗ್ಗಳಿಕೆ ಅಪರ್ಣಾ ಅವರಿಗೆ ಸಲ್ಲುತ್ತದೆ.

ಅಪರ್ಣಾ ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರು. ತಂದೆ ಕೆ. ಎಸ್. ನಾರಾಯಣಸ್ವಾಮಿ ಸಿನಿಮಾ ಪತ್ರಕರ್ತ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಪರ್ಣಾ, ಚಿಕ್ಕಂದಿನಿoದಲೇ ಓದಿನಲ್ಲಿ ಮುಂದು. ಶಾಲಾ ದಿನಗಳಲ್ಲಿಯೇ ವೇದಿಕೆ ಕಾರ್ಯಕ್ರಮಗಳನ್ನು ನಿಧಾಯಿಸುತ್ತಿದ್ದರು. ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಅಂದಿನ ಆ ರೂಢಿಯೇ ಅವರ ಅನ್ನಕ್ಕೆ ದಾರಿ ಮಾಡಿಕೊಟ್ಟಿತ್ತು. ತಂದೆಯ ನಿಧನದ ಬಳಿಕ ಬೆಂಗಳೂರಿನ ಮಲ್ಲೇಶ್ವರಕ್ಕೆ ಬಂದು ನೆಲೆನಿಂತರು. ಅದಾದ ಮೇಲೆ ನಾಗರಾಜ್ ವಸ್ತಾರೆ ಜತೆಗೆ ವಿವಾಹವೂ ಆಯ್ತು. ಆದರೆ, ಈ ಜೋಡಿಗೆ ಮಕ್ಕಳಾಗಿಲ್ಲ. ಆ ಕೊರಗೂ ಅಪರ್ಣಾ ಅವರನ್ನು ಕಾಡಿತ್ತು.

ಆಕಾಶವಾಣಿಯಲ್ಲಿ ನಿರೂಪಣೆ ಮಾಡಿ ಎಲ್ಲರ ಗಮನ ಸೆಳೆದವರು ಅಪರ್ಣ. 1993 ರಿಂದ 2010 ರ ವರೆಗೂ ಆಕಾಶವಾಣಿಯಲ್ಲಿ ಕೆಲಸ ಮಾಡಿದ ಅಪರ್ಣಾ, ಟಿ.ಎನ್ ಸೀತಾರಾಮ್ ಅವರ ಮಾಯಾಮೃಗ, ಮುಕ್ತ ದಾರಾವಾಹಿಗಳಲ್ಲಿಯೂ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ನಟನೆಯ ಜತೆಗೆ ನಿರೂಪಣೆ, ಆರೋಗ್ಯ ಕಾರ್ಯಕ್ರಮಗಳು, ನೇರಪ್ರಸಾರದ ಕಾರ್ಯಕ್ರಮಗಳು, ಸಂದರ್ಶನಗಳನ್ನೂ ನಡೆಸಿಕೊಟ್ಟರು. ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರು. ಮಜಾಟಾಕೀಸ್ ಮೂಲಕ ಬೇರೆಯ ಎತ್ತರಕ್ಕೆ ಜಿಗಿದ ಅಪರ್ಣಾ, ನಾನು ನಗಿಸುವುದಕ್ಕೂ ಸೈ ಎಂದು ಒನ್ ಅಂಡ್ ಓನ್ಲಿ ವರಲಕ್ಷಿಯಾಗಿ ಗಮನ ಸೆಳೆದರು.

ಈ ಅಕ್ಟೋಬರ್‌ಗೆ 58 ವರ್ಷ ಪೂರೈಸುತ್ತಿದ್ದ ಅಪರ್ಣಾ, ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. ನಿರೂಪಣೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಅಪರ್ಣಾ, ಅದೇ ನಿರೂಪಣೆ ಕಲೆಯನ್ನು ಇತರರಿಗೂ ಹಂಚಲು ಪ್ಲಾನ್ ಮಾಡಿದ್ದರು. ನಿರೂಪಣೆ ಕುರಿತು ಶಾಲೆ ಆರಂಭಿಸುವ ಯೋಜನೆ ಹಾಕಿದ್ದರು. ಆದರೆ, ಆ ಕನಸು ಕೊನೆಗೂ ಈಡೇರಲಿಲ್ಲ. ಈ ವಿಚಾರವನ್ನು ಅವರ ಪತಿ ನಾಗರಾಜ್ ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಮಾತನಿಲ್ಲಿಯೇ ಮರಳು ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಅಪರ್ಣಾ ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಧ್ವನಿಯನ್ನು ಅಜರಾಮರ ಮಾಡುವುದಾಗಿ ಬೆಂಗಳೂರು ಮೆಟ್ರೋ ಈಗಾಗಲೇ ಘೋಷಿಸಿದೆ. ಕನ್ನಡಿಗರ ಮನದಲ್ಲಿ ಶಾಶ್ವತವಾದ ಸ್ಥಾನ ಸಂಪಾದಿಸಿದ ಅಪರ್ಣಾ ಕರ್ನಾಟಕದ ಜನರ ಹೃದಯದಲ್ಲಿ ಎಂದೆoದಿಗೂ ಅಜರಾಮರ. ಅವರ ಅಗಲಿಕೆಯ ನೋವು ಅವರ ಕುಟುಂಬಕ್ಕೆ ಮಾತ್ರವಲ್ಲ, ಇಡೀ ನಾಡಿಗೆ ಕಾಡುತ್ತಿದೆ. ಆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಮತ್ತು ಅಪರ್ಣಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಥಿಸೋಣ ಅಲ್ಲವೇ.

#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday

About The Author

Leave a Reply

Your email address will not be published. Required fields are marked *