ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಕಾ0ಗ್ರೆಸ್ ವಲಯದಲ್ಲಿ ತಲ್ಲಣ, ಇನ್ನಷ್ಟು ಸದಸ್ಯರು ಹೋಗುವ ಆತಂಕ

1 min read

ರಾತ್ರಿ 10.30ರ ವಿಮಾನಕ್ಕೆ ನಗರಸಭಾ ಸದಸ್ಯರು ಜಂಪ್
ಈಶಾನ್ಯ ರಾಜ್ಯ ಸೇರಿದ 18 ಬಿಜೆಪಿ ಬೆಂಬಲಿತ ಸದಸ್ಯರು
ಕೆಂಪೇಗೌಡ ಏರ್ ಪ್ರೋಟ್‌ನಲ್ಲಿ ಕಾಂಗ್ರೆಸ್ ನಯಾಕರ ಹೈಡ್ರಾಮಾ
ಪಟ್ಟಿಯಲ್ಲಿ ಇಳ್ಲದ ಕಾಂಗ್ರೆಸ್ ಸದಸ್ಯೆ ಪ್ರವಾಸಕ್ಕೆ ಜಂಪ್
ಕಾ0ಗ್ರೆಸ್ ವಲಯದಲ್ಲಿ ತಲ್ಲಣ, ಇನ್ನಷ್ಟು ಸದಸ್ಯರು ಹೋಗುವ ಆತಂಕ

ನಿರೀಕ್ಷೆಯ0ತೆ ನಗರಸಭೆಯ 18 ಮಂದಿ ಸದಸ್ಯರು ಪ್ರವಾಸಕ್ಕೆ ತೆರಳಿದ್ದಾರೆ. ಈಶಾನ್ಯ ಭಾರತದ ಸಣ್ಣ ರಾಜ್ಯವೊಂದಕ್ಕೆ ತೆರಳಿರುವ ನಗರಸಭಾ ಸದಸ್ಯರು, ರಾತ್ರಿ 10.30ರ ಇಂಡಿಗೋ 2335 ವಿಮಾನ ಸೇರಿ ಎರಡು ವಿಮಾನಗಳಲ್ಲಿ ದೆಹಲಿಗೆ ಹಾರಿದ್ದಾರೆ. ನಗರಸಭಾ ಸದಸ್ಯರು ದೆಹಲಿಗೆ ಹಾರುವುದಕ್ಕೂ ಮುನ್ನ ದೇವನಹಳ್ಳಿಯ ಕೆಂಪೇಗೌಡ ಏರ್‌ಪೋರ್ಟ್ನಲ್ಲಿ ದೊಡ್ಡ ಹೈಡ್ರಾಮವೇ ನಡೆದಿದ್ದು, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಕಾಂಗ್ರೆಸ್ ನಾಯಕರು ವಾಪಸ್ ಆಗಿದ್ದಾರೆ. ಹಾಗಾದರೆ ಏನಾಯ್ತು ಅಂತೀರಾ, ಕೆಂಪೇಗೌಡ ಏರ್‌ಪೋರ್ಟ್ನಲ್ಲಿ ನಡೆದ ಕಂಪ್ಲೀಟ್ ಡೀಟೈಲ್ಸ್ ಸಿಟಿವಿ ನ್ಯೂಸ್ ಬಳಿ ಇದೆ, ನೀವೇ ನೋಡಿ.

ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರ ಹಿಡಿಯಲು ಪ್ರತಿಷ್ಠೆಯಾಗಿ ಪರಿಗಣಿಸಿರುವ ಸಂಸದ ಡಾ.ಕೆ. ಸುಧಾಕರ್, ಶತಾಯ ಗತಾಯ ನಗರಸಭೆಯಲ್ಲಿ ಕಮಲ ಅರಳಿಸಲೇಬೇಕು ಎಂಬ ಹಠದೊಂದಿಗೆ ಪ್ರತಿತಂತ್ರಗಳನ್ನು ರೂಪಿಸಿದ್ದು, ಅವು ಭಲಿಸುವ ಎಲ್ಲ ಸೂಚನೆಗಳಿವೆ. ಯಾಕೆಂದರೆ ಪ್ರಸ್ತುತ ನಗರಸಭೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖಅಯೆ ೧೯ ಆಗಿದ್ದು, ಮತ್ತಷ್ಟು ಸದಸ್ಯರು ಬೆಂಬಲ ಘೋಷಿಸುವ ಎಲ್ಲ ಸೂಚನೆಗಳೂ ಇವೆ. ಹಾಗಾಗಿ 12ರಂದು ನಗರಸಭೆಯಲ್ಲಿ ಕೇಸರಿ ಭಾವುಟ ಹಾರುವುದು ಬಹುತೇಕ ಖಚಿತ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಆರಂಭದಲ್ಲಿ ಸದಸ್ಯರನ್ನು ಅವಾಚ್ಯ ರೀತಿಯಲ್ಲಿ ನಿಂದಿಸಿದ ಕಾಂಗ್ರೆಸ್ ನಾಯಕರು ನಂತರ ಸದಸ್ಯರ ಮನೆ ಬಾಗಿಲಿಗೆ ಎಢೆತಾಕಿ ಅವರ ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದರು. ಆದರೆ, ತೀವ್ರ ಅಸಮಾಧಾನದಲ್ಲಿದ್ದ ಹಲವು ಸದಸ್ಯರು ವರಿಷ್ಠರ ಮನವೊಲಿಕೆಗೆ ವಿಮುಖರಾದರೆ, ಮತ್ತೆ ಹಲವು ಸದಸ್ಯರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. ಇದರ ಭಾಗವಾಗಿಯೇ ನಗರಸಬೆ ಹಾಲಿ ಉಪಾಧ್ಯಕ್ಷರೂ ಪ್ರವಾಸಕ್ಕೆ ತೆರಳದೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಆದರೆ ಕಾಂಗ್ರೆಸ್ ಒತ್ತಡಕ್ಕೆ ಸದಸ್ಯರು ಮಣಿಯುವ ಆತಂಕದಲ್ಲಿ ಸೋಮವಾರವೇ ಬಿಜೆಪಿ ಬೆಂಬಲಿತ ೧೮ ಮಂದಿ ನಗರಸಭಾ ಸದಸ್ಯರು ಹೊರ ರಾಜ್ಯಕ್ಕೆ ಹಾರಿದ್ದಾರೆ. ಸೋಮವಾರ ರಾತ್ರಿ 9.30 ಮತ್ತು 10.30ರ ಎರಡು ಇಂಡಿಗೋ ವಿಮಾನಗಳಲ್ಲಿ 18 ಮಂದಿ ಸದಸ್ಯರು ದೆಹಲಿಗೆ ಹಾರಿದ್ದಾರೆ. ಅಲ್ಲಿಂದ ಡಾರ್ಜಲಿಂಗ್ ತಲುಪಿರುವ ಸದಸ್ಯರು, ಅಲ್ಲಿನ ಪ್ರತಿಷ್ಟಿತ ಹೊಟೇಲ್‌ವೊಂದರಲ್ಲಿ ತಂಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ಸದಸ್ಯರು ದೆಹಲಿಗೆ ಹಾರುವುದಕ್ಕೂ ಮೊದಲು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನ ನಿಲ್ದಾಣದಲ್ಲಿ ನಡೆದಿರುವ ಹೈ ಡ್ರಾಮ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸೋಮವಾರ ಸಂಜೆ ನಗರಸಭಾ ಸದಸ್ಯರು ವಿಮಾನದ ಮೂಲಕ ಹಾರಲಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ ವರಿಷ್ಠರು ಅಲರ್ಟ್ ಆಗಿದ್ದಾರೆ. ಕಾಂಗ್ರೆಸ್ ಸದಸ್ಯರನ್ನು ತಡೆಯಲು ವಿಮಾನ ನಿಲ್ದಾಣಕ್ಕೆ ಲಗ್ಗೆ ಹಾಕಿದ್ದಾರೆ. ಆದರೆ ವರಿಷ್ಠರು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರೆ ಬಿಜೆಪಿ ವರಿಷ್ಠರು 24ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಅಂಬಿಕಾ ಅವರನ್ನು ಆಪರೇಷನ್ ಕಮಲದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ 19 ಇದ್ದ ಬಿಜೆಪಿ ಬಲ 20ಕ್ಕೆ ಏರಿಕೆಯಾಗಿದೆ. ಮೊದಲಿಂದಲೂ ಬಿಜೆಪಿ ಸಂಪರ್ಕದಲ್ಲಿರುವ ಐದು ಮಂದಿ ಸದಸ್ಯರನ್ನು ತಡೆಯಲು ಬಂದ ಕಾಂಗ್ರೆಸ್ ವರಿಷ್ಠರಿಗೆ 6ನೇ ಸದಸ್ಯರಾಗಿ ಅಂಬಿಕಾ ಅವರು ಕಾಣಿಸುತ್ತಿದ್ದಂತೆ ಅವರ ಕೋಪ ನೆತ್ತಿಗೇರಿದೆ.

ಕೂಡಲೇ ವಿಮಾನ ಹತ್ತಲು ಎಮಿಗ್ರೇಷನ್ ತಲುಪುತ್ತಿದ್ದ ನಗರಸಭಾ ಸದಸ್ಯರನ್ನು ತಡೆಯಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಅಲ್ಲದೆ, ಕಾಂಗ್ರೆಸ್ ತೊರೆದು ಹೋಗುತ್ತಿರುವ ಸದಸ್ಯರನ್ನು ಅವಾಚ್ಯ ಶಬ್ದಗಳು ಬಳಸಿ ನಿಂದಿಸಿದರು ಎಂದು ಹೇಳಲಾಗಿದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಕೆಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ವಿಮಾನ ನಿಲ್ದಾಣದ ಭದ್ರತೆಯಲ್ಲಿದ್ದ ಸಿಆರ್‌ಪಿಎಫ್ ಸಿಬ್ಬಂದಿ ಮಧ್ಯಪ್ರವೇಶ ಮಾಡಿ, ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

ನ0ತರ ಕಾಂಗ್ರೆಸ್ ವರಿಷ್ಠರನ್ನು ಹೊರಗೆ ಕೂರಿಸಿ, ಬಿಜೆಪಿ ಬೆಂಬಲಿತ ಸದಸ್ಯರನ್ನು ಎಮಿಗ್ರೇಷನ್ ಒಳಗೆ ಪ್ರವೇಶಕ್ಕೆ ಅನುಮತಿ ನೀಡಿದ್ದು, ಇದರಿಂದ ಕಾಂಗ್ರೆಸ್ ಸದಸ್ಯರನ್ನು ವಾಪಸ್ ಕರೆತರುವ ಕಾತುರದಲ್ಲಿ ಹೋಗಿದ್ದ ಕಾಂಗ್ರೆಸ್ ವರಿಷ್ಠರಿಗೆ ತೀವ್ರ ನಿರಾಸೆ ಎದುರಾಗಿದೆ. ನಂತರ ಹಲವು ಸದಸ್ಯರು ತಮ್ಮ ಲಗ್ಗೇಜ್ ಹೊರಗೆ ಬಿಟ್ಟಿದ್ದ ಕಾರಣ ಅಲ್ಲಿ ಸದಸ್ಯರು ಚದುರಿದ್ದು, 9.30ರ ಮೊದಲ ಇಂಡಿಗೋ ವಿಮಾನದಲ್ಲಿ 10 ಮಂದಿ ಮತ್ತು ನಂತರದ ಇಂಡಿಗೋ 2335 ವಿಮಾನ ದಲ್ಲಿ 8 ಮಂದಿ ಸದಸ್ಯರು ವಿಮಾನ ಹತ್ತಿ ದೆಹಲಿಗೆ ತೆರಳಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದರೂ ಕಾಂಗ್ರೆಸ್ ಸದಸ್ಯರನ್ನು ತಡೆಯಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ವರಿಷ್ಠರು ಬಂದ ದಾರಿಗೆ ಸುಂಕವಿಲ್ಲ ಎಂಬ0ತೆ ವಾಪಸ್ ಆಗಿದ್ದಾರೆ.

ಇನ್ನು ಚಿಕ್ಕಬಳ್ಳಾಪುರದ 12ನೇ ವಾರ್ಡಿನ ನಿರ್ಮಲಾಪ್ರಭು, 27ನೇ ವಾರ್ಡಿನ ನೇತ್ರಾವತಿ ಮತ್ತು ಹಾಲಿ ಉಪಾಧ್ಯಕ್ಷ ವೀಣಾ ರಾಮು ಅವರು ಪ್ರವಾಸದಿಂದ ದೂರ ಇದ್ದು, ಇವರು ಪ್ರವಾಸಕ್ಕೆ ತರಳದಿದ್ದರೂ ಬಿಜೆಪಿ ಬೆಂಬಲಿಸುವ ಬಗ್ಗೆ ಈಗಾಗಲೇ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಉಳಿದಂತೆ 22ನೇ ವಾರ್ಡಿನ ಶ್ವೇತಾ ಮಂಜುನಾಥ್, ೨ನೇ ವಾರ್ಡಿನ ರತ್ನಮ್ಮ, 24ನೇ ವಾರ್ಡಿನ ಅಂಬಿಕಾ ಅವರು ಬಿಜೆಪಿ ಬೆಂಬಸಿ ಈಗಾಗಲೇ ವಿಮಾನ ಹತ್ತಿದ್ದಾರೆ. ಅಲ್ಲಿಗೆ ಪ್ರಸ್ತುತ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ 20ಕ್ಕೆ ಮುಟ್ಟಿದ್ದು, ಸಂಸದರ ಮತ ಸೇರಿ 21 ಮತ ಬಿಜೆಪಿ ಪಾಲಿಗಿದೆ.

ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದು, ಇವರೊಂದಿಗೆ ಸಸಂದರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಮತ್ತು ಒಬ್ಬ ಶಾಸಕರು ಸೇರಿ ಒಟ್ಟು 36 ಮತಗಳಾಗಲಿವೆ. ಅಲ್ಲಿಗೆ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಅಧಿಕಾರ ಹಿಡಿಯಲು 19 ಮಂದಿ ಸದಸ್ಯರ ಬೆಂಬಲ ಅಗತ್ಯವಿದ್ದು, ಪ್ರಸ್ತುತ ಬಿಜೆಪಿ ಬಳಿ 21 ಮಂದಿ ಸದಸ್ಯರು ಇರುವ ಕಾರಣ ಅಧಿಕಾರ ಹಿಡಿಯಲು ಹೆಚ್ಚು ಕಷ್ಟಪಡಬೇಕಾದ ಅಗತ್ಯವಿಲ್ಲ. ಆದರೆ ಪ್ರಸ್ತುತ ನಗರಸಭೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ ಎಂಬ ಮರ್ಮ ಅರಿತಿರುವ ಇನ್ನೂ ಹಲವು ಕಾಂಗ್ರೆಸ್ ಸದಸ್ಯರು ಕಮಲ ಹಿಡಿಯಲು ಸಿದ್ಧರಾಗಿದ್ದು, ಒಂದೆರಡು ದಿನಗಳಲ್ಲಿ ಅವರು ಡಾರ್ಜಲಿಂಗ್‌ನತ್ತ ಪ್ರಯಾಣ ಬೆಳಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ನಗರಸಭೆಯ ಹಿರಿಯ ಸದಸ್ಯರಾದವರು ಈಗಾಗಲೇ ಅನಾರೋಗ್ಯದ ನೆಪದಲ್ಲಿ ಮನೆಗೇ ಸೀಮಿತವಾಗಿದ್ದು, ಅವರು ಪ್ರವಾಸಕ್ಕೆ ತೆರಳದಿದ್ದರೂ ಕೊನೆಯ ಕ್ಷಣದಲ್ಲಿ ಬಿಜೆಪಿ ಬೆಂಬಲಿಸಲಿದ್ದಾರಾ ಎಂಬ ಸಂದೇಹ ಬಿಜೆಪಿ ಮತ್ರಾವಲ್ಲ, ಕಾಂಗ್ರೆಸ್ ವರಿಷ್ಠರನ್ನೂ ಕಾಡುತ್ತಿದೆ. ಯಾಕೆಂದರೆ ಈಗಾಗಲೇ ಮೊದಲ ಅವಧಿಯ ವೇಳೆ ಹಿರಿಯ ಸದಸ್ಯರೂ ಬಿಜೆಪಿ ಬೆಂಬಲಿಸಿರುವ ಕಾರಣ ಇತಿಹಾಸ ಪುನರಾವರ್ತನೆಯಾಗಲಿದೆಯೇ ಎಂಬ ಸಂದೇಹ ಕಾಡುತ್ತಿದೆ. ಇವರೊಂದಿಗೆ ಇನ್ನೂ ನಾಲ್ಕೆದು ಮಂದಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಬೆಂಬಲಿಸಲು ತೀರ್ಮಾನಿಸಿದ್ದು, ಈ ಲೆಕ್ಕಾಚಾರಗಳು ನಿಜವಾದರೆ ಕಾಂಗ್ರೆಸ್‌ನಲ್ಲಿ ಕೊನೆಗೆ ಉಳಿಯುವ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಸೀಮಿತವಾಗಲಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಕಾಂಗ್ರೆಸ್ ಸದಸ್ಯರೊಬ್ಬರು ಸಿಟಿವಿ ನ್ಯೂಸ್‌ಗೆ ತಿಳಿಸಿದ್ದಾರೆ.

ಪ್ರಸ್ತುತ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಡಾರ್ಜಲಿಂಗ್‌ನ ಪ್ರತಿಷ್ಠಿತ ಹೊಟೇಲ್‌ವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿರುವ ಬಿಜೆಪಿ ಬೆಂಬಲಿತ ನಗರಸಭಾ ಸದಸ್ಯರು ಸೆಪ್ಟೆಂಬರ್ ೧೨ರವರೆಗೂ ಚಿಕ್ಕಬಳ್ಳಾಪುರ ಸಂಪರ್ಕದಿ0ದ ದೂರ ಉಳಿಯಲಿದ್ದು, 12ರಂದು ಮತದಾನದ ವೇಳೆಗೆ ನೇರವಾಗಿ ಚಿಕ್ಕಬಳ್ಳಾಪುರದ ನಗರಸಭೆಗೆ ಆಗಮಿಸಲಿದ್ದಾರೆ. ಆಗ ಅಲ್ಲಿ ನಡೆಯಲಿರುವ ನಾಟಕೀಯ ಬೆಳವಣಿಗೆಗಳು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಲಿದ್ದು, ಚುನಾವಣೆ ಮತ್ತಷ್ಟು ರಸವತ್ತಾಗಿ ಇರಲಿದೆ ಎಂದು ಕಾಂಗ್ರೆಸ್ ಸದಸ್ಯರೇ ಹೇಳಿದ್ದಾರೆ.

ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇದೀಗ ಉತ್ತಮ ಘಟ್ಟ ತಲುಪಿದ್ದು, 12ರವರೆಗೆ ಮತ್ತಷ್ಟು ಬೆಳವಣಿಗೆಗಳು ನಡೆಯಲಿವೆ ಎಂಬುದರಲ್ಲಿ ಅನುಮಾನವಿಲ್ಲ. ಅಂತಿಮವಾಗಿ ನಗರಸಭೆಯಲ್ಲಿ ಕಮಲ ಅರಳಲಿದೆಯೇ ಇಲ್ಲವೇ ಕೈ ಕವಾಲ್ ಮಾಡಲಿದೆಯೇ ಎಂಬುದನ್ನು ಇನ್ನೂ 9 ದಿನ ಕಾಯದೆ ವಿಧಿಯಿಲ್ಲ.

 

About The Author

Leave a Reply

Your email address will not be published. Required fields are marked *