ಕಾಂಗ್ರೆಸ್ ನಾಯಕರ ಸಂಸ್ಕಾರದ ಬಗ್ಗೆ ಕೇಳಿದ ಪ್ರಶ್ನೆಗೆ ನಿರುತ್ತರ
1 min readಚಿಕ್ಕಬಳ್ಳಾಪುರ ಕಾಂಗ್ರೆಸ್‌ನಿ0ದ ಮತ್ತೆ ಸುದ್ದಿಗೋಷ್ಠಿ
ಸಂಸ್ಕಾರದಿ0ದ ಮಾತನಾಡಲು ಸಲಹೆ ನೀಡಿದ ನಾಯಕರು
ಕಾಂಗ್ರೆಸ್ ನಾಯಕರ ಸಂಸ್ಕಾರದ ಬಗ್ಗೆ ಕೇಳಿದ ಪ್ರಶ್ನೆಗೆ ನಿರುತ್ತರ
ಅವಾಚ್ಯ ಪದ ಬಳಸಿದವರ ವಿರುದ್ಧ ಶಿಸ್ತು ಕ್ರಮದ ಭರವಸೆ
ಚಿಕ್ಕಬಳ್ಳಾಪುರದಲ್ಲಿ ಆರೋಪ ಪ್ರತ್ಯಾರೋಪಗಳ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ. ಶಾಸಕ ಮತ್ತು ಸಂಸದರ ನಡುವಿನ ಮಾತಿನ ಸಮರ ಇಂದು ಮುಂದುವರಿದಿದ್ದು, ಇಂದು ಕಾಂಗ್ರೆಸ್ ನಾಯಕರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಯಾವುದೇ ಪ್ರಶ್ನೆಗೂ ಸಮರ್ಪಕ ಉತ್ತರ ನೀಡಲಾಗಿದೆ ಪರದಾಡಿದ ಘಟನೆ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೈರಾಮ್, ಕೋಚಿಮುಲ್ ನಿರ್ದೇಶಕ ಎನ್. ವೆಂಕಟೇಶ್, ಅಡ್ಡಗಲ್ ಶ್ರೀಧರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ಕರೆದಿದ್ದರು. ಸುದ್ದಿಗೋಷ್ಠಿ ಆರಂಭವಾಗುತ್ತಿದ್ದ0ತೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೈರಾಮ್, ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಡುವತಿಯಲ್ಲಿ ನಿರ್ಮಾಣವಾಗಿರುವ ಶಾಲಾ ಕೊಠಡಿಗಳ ಉದ್ಘಾಟನೆ ವಿಚಾರದಲ್ಲಿ ಸಂಸದರು ಬಿಇಒ ಅವರಿಗೆ ಧಮ್ಕಿ ಹಾಕಿ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಕವರನಹಳ್ಳಿಯ ಶ್ರೀನಿವಾಸ್ ಎಂಬುವರ ವಿರುದ್ಧ ವಿನಾಕಾರಣ ಪ್ರಕರಣ ದಾಖಲು ಮಾಡಿಸಿದ್ದಾರೆ. ಇದಕ್ಕೆ ಕಾರಣ ಶ್ರೀನಿವಾಸ್ ಅವರು ಈ ಹಿಂದೆ ಸಂಸದರ ಜೊತೆ ಇದ್ದರು. ಇದೀಗ ಶಾಸಕರ ಬೆಂಬಲಕ್ಕೆ ಇದ್ದಾರೆ ಎಂಬ ಕಾರಣದಿಂದ ಪ್ರಕರಣ ದಾಖಲಿಸಿ, ಹಿಂಸೆ ನಡೀಉವ ಕೆಲಸ ಮಾಡುತ್ತಿದ್ದಾರೆ ಎಂದು ಜೈರಾಮ್ ಆರೋಪಿಸಿದರು. ಅಲ್ಲದೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಂಸದರ ಬೆಂಬಲಿಗರು ಮಾತನಾಡಲಿ, ಅದು ಬಿಟ್ಟು ವೈಯಕ್ತಿಕ ನಿಂದನೆ ಸರಿಯಲ್ಲ ಎಂದರು.
ಕೋಚಿಮುಲ್ ನಿರ್ದೇಶಕ ಎನ್. ವೆಂಕಟೇಶ್ ಮಾತನಾಡಿ, ನೆನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಕೆ.ವಿ. ನವೀನ್ ಕಿರಣ್ ಅವರು ಮಾತನಾಡಿ, ನಗರಸಭಾ ಸದಸ್ಯರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಅವರ ತಾಯಿಯವರೂ ನಗರಸಭಾ ಸದಸ್ಯರಾಗಿದ್ದು, ಮೊದಲು ಅವರಿಂದ ರಾಜಿನಾಮೆ ಕೊಡಿಸಿ ಮಾತನಾಡಿಸಬೇಕಿತ್ತು. ಈ ಹಿಂದೆ ನವೀನ್ ಕಿರಣ್ ಅವರು ಕಾಂಗ್ರೆಸ್ ನಲ್ಲಿದ್ದರು ಅವರಿಗೆ ನೈತಿಕತೆ ಇದ್ದರೆ ರಾಜಿನಾಮೆ ಕೊಡಿಸಿ ಮಾತನಾಡಬೇಕಿತ್ತು ಎಂದರು.
ಅಲ್ಲದೆ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಆಗಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರದೀಪ್ ಈಶ್ವರ್ ವಿರುದ್ಧ ಅವರ ತಂದೆ ತಾಯಿ ಯಾಕೆ ಸಾವಿನ ಬಗ್ಗೆ ಪ್ರಶ್ನಿಸಿದರು. ಹಾಗಾಗಿ ಅವರೇ ಮೊದಲು ವೌಯಕ್ತಿಕ ನಿಂದನೆ ಆರಂಭಿಸಿದರು ಇನ್ನು ಮೊನ್ನೆ ಕಾಂಗ್ರೆಸ್ ನವರು ಮಾತನಾಡಿರುವುದೂ ತಪ್ಪು, ವೈಯಕ್ತಿಕ ನಿಂದನೆಗಳಿAದ ಯಾವುದೇ ಉಪಯೋಗವಿಲ್ಲ, ಪ್ರಸ್ತುತ ರಾಜಕಾರಣ ನೈತಿಕತೆ ಕಳೆದುಕೊಳ್ಳುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ಅಲ್ಲದೆ ನೆನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಕೆ.ವಿ. ನಾಗರಾಜ್ ಅವರ ಸ್ವಗ್ರಾಮ ಕಣಜೇನಹಳ್ಳಿ ರಸ್ತೆ ಮಳೆ ಬಂದರೆ ಈಜುಕೊಳದಂತಾಗುತ್ತದೆ. ಅಂತಹ ರಸ್ತೆ ಕಾಮಗಾರಿ ಅಭಿವೃದ್ಧಿ ಪಡಿಸಲು ಶಸಾಕರು ಅನುದಾನ ತಂದಿದ್ದಾರೆ. ಶೀಘ್ರದಲ್ಲಿಯೇ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು. ಅಲ್ಲದೆ ಶಾಸಕರ ವಿಶೇಷ ಅನುದಾನ 25ಕೋಟಿ ರಸ್ತೆ ಕಾಮಗಾರಿಗೆ, ಎತ್ತಿನಹೊಳೆ ಕೋಟಾದಡಿ 6 ಕೋಟಿ ಸಿಸಿ ರಸ್ತೆ ಕಾಮಗಾರಿಗಳಿಗೆ ಕ್ರಿಯಾಯೋಜನೆ ಆಗುತ್ತಿದೆ ಎಂದರು. ಅಲ್ಲದೆ ಕ್ಷೇತ್ರದ ಇತರೆ ರಸ್ತೆಗಳ ಅಭಿವೃದ್ಧಿಗಾಗಿ ಅನುದಾನ ತಂದಿದ್ದಾರೆ. ಇನ್ನು ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾನಿಂಗ್ ಮಾಡಬೇಕು ಎಂಬ ಯೋಚನೆಯೇ ಬಂದಿರಲಿಲ್ಲ. ಆದರೆ ಈಗ ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿ 8 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಎಂಆರ್ ಐ ಸ್ಕಾನಿಂಗ್ ಅಳವಡಿಸುತ್ತಿದ್ದು, ಒಂದು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.
ಇಲ್ಲಿಯವರೆಗೂ ಸುದ್ದಿಗೋಷ್ಠಿ ಸುಗಮವಾಗಿಯೇ ಇತ್ತು. ಆದರೆ ಬಿಜೆಪಿ ಶಾಸಕ ಮುನಿರತ್ನ ಅವರು ಒಕ್ಕಲಿಗ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಂತಹ ವ್ಯಕ್ತಿ ಶಾಸಕನಾಗಿ ಮುಂದುವರಿಯಲು ಯೋಗ್ಯನಲ್ಲ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುನಿರತ್ನ ಅವರಿಗೆ ಬಿಜೆಪಿಯವರು ಟಿಕೆಟ್ ನೀಡಿದರೆ ದಲಿತರು ಮತ್ತು ಒಕ್ಕಲಿಗರು ಬುದ್ಧಿ ಕಲಿಸಲಿದ್ದಾರೆ ಎಂದರು. ಅಲ್ಲದೆ ಕೂಡಲೇ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಆಗ ಅವಾಚ್ಯ ಶಬ್ದ ಬಳಕೆ ಮಾಡಿದ ಮುನಿರ್ತನ ಅವರನ್ನು ವಜಾ ಮಾಡಬೇಕು ಎಂದು ಕೇಳಲು ನಿಮ್ಮದೇ ಪಕ್ಷದ ನಾಯಕರು ಅದೇ ಒಕ್ಕಲಿಗ ಸಂಸದರನ್ನು ಅದೇ ರೀತಿಯ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಲ್ಲ, ಅವರಲ್ಲ ವಿರುದ್ಧ ಯಾವ ರೀತಿಯ ಕ್ರಮ ವಹಿಸಿದ್ದೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾಯಕರು ನಿರುತ್ತರರಾದರು. ಅಲ್ಲದೆ ಮೊದಲು ಸಂಸದರ ತಂದೆಯ ಬಗ್ಗೆ ಪ್ರಸ್ತಾಪ ಮಾಡಿದವರೇ ಶಾಸಕರಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೂ ನಾಯಕರಿಂದ ಉತ್ತರ ಇಲ್ಲವಾಯಿತು. ಏಕ ವಚನ, ಅವಾಚ್ಯ ಶಬ್ದಗಳ ಬಳಕೆ ಆರಂಭವಾಗಿರುವುದು ಕಾಂಗ್ರೆಸ್ ಕಡೆಯಿಂದಲೇ ಅಲ್ಲವೇ ಎಂಬ ಪತ್ರಕರ್ತರ ಸರಣಿ ಪ್ರಶ್ನೆಗಳಿಗೆ ಕಾಂಗ್ರೆಸ್ ನಾಯಕರು ನಿರುತ್ತರರಾದರು.