ಜೈನ್ ಮಿಷನ್ ಆಸ್ಪತ್ರೆಯಿಂದ ಮತ್ತೊಂದು ಮೈಲಿಗಲ್ಲು 8,140 ಮಂದಿಗೆ ಉಚಿತ ನೇತ್ರ ತಪಾಸಣೆ
1 min readಜೈನ್ ಮಿಷನ್ ಆಸ್ಪತ್ರೆಯಿಂದ ಮತ್ತೊಂದು ಮೈಲಿಗಲ್ಲು ರಾಜಸ್ಥಾನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
ಪ್ರಾಜೆಕ್ಟ್ ದೃಷ್ಟಿ ಬೆಂಗಳೂರು ಮತ್ತು ಜೈನ್ ಮಿಷನ್ ಆಸ್ಪತ್ರೆ ಚಿಕ್ಕಬಳ್ಳಾಪುರ ತಂಡದಿಂದ ರಾಜಸ್ಥಾನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಲಾಗಿದೆ.
2023ರಲ್ಲಿ ಇದು 25ನೇ ಉಚಿತ ನೇತ್ರ ಶಿಬಿರವಾಗಿದ್ದು, ರಾಹಸ್ಥಾನದ ಜೋಧ್ಪುರ, ಜಲೋರ್ ಮತ್ತು ಪಾಲಿ ಜಿಲ್ಲೆಗಳಲ್ಲಿ ಶಿಬಿರ ಆಯೋಜಿಸಲಾಗಿತ್ತು. ಡಿಸೆಂಬರ್ 18ರಿಂದ 27ರ ವರೆಗೆ ನಡೆದ ಶಿಬಿರದಲ್ಲಿ ಒಟ್ಟು 8,140 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ.
ಇವರಲ್ಲಿ 2,075 ಮಂದಿಗೆ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದ್ದು, 4,250 ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ. ಜೈನ್ ಮಿಷನ್ ಆಸ್ಪತ್ರೆಯ ಅಧ್ಯಕ್ಷ ಡಾ.ನರ್ಪತ್ ಸೋಲಂಕಿ, ರಾಕೇಶ್ ಉತ್ತಮಚಂದ್ ಜೈನ್ ಟ್ರಸ್ಟಿ, ರಮೇಶ್ ಜೈನ್ ಖಜಾಂಚಿ, ಡಾ.ಎಂ.ಸುಂದರಂ, ಡಾ.ಪ್ರಮೋದ್, ಡಾ.ವಿಜಯ್ ಕುಮಾರ್ ಮುಂತಾದವರು ಈ ಶಿಬಿರದಲ್ಲಿ ಭಾಗವಹಿಸಿದ್ದರು.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura