ಅಂಧಕಾಸುರ ಸಂಹಾರ ಆಚರಣೆ
1 min readಅಂಧಕಾಸುರ ಸಂಹಾರ ಆಚರಣೆ
ಹೊಸ ಚಿತ್ರ ಬಿಡುಗಡೆ, ಅಪಸ್ವರ
ಆಚರಣೆಯಲ್ಲಿ ಮಾರ್ಪಾಡು ತರಲು ಆಗ್ರಹ
ಒಪ್ಪದ ಯುವ ಬ್ರಿಗೇಡ್ ಮತ್ತೆ ಗೊಂದಲ
ದಕ್ಷಿಣಕಾಶಿ ನಂಜನಗೂಡಿನಲ್ಲಿ ಪ್ರತಿ ವರ್ಷ ಆಚರಿಸುವ ಅಂಧಕಾಸುರ ಸಂಹಾರ ಆಚರಣೆಗೆ ಮತ್ತೆ ಅಪಸ್ವರ ಬಂದಿದೆ. ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಡಿವೈಎಸ್‌ಪಿ ರಘು ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಆಚರಣೆಯಲ್ಲಿ ಮಾರ್ಪಾಡು ತರುವಂತೆ ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ದಕ್ಷಿಣಕಾಶಿ ನಂಜನಗೂಡಿನಲ್ಲಿ ಪ್ರತಿ ವರ್ಷ ಆಚರಿಸುವ ಅಂಧಕಾಸುರ ಸಂಹಾರ ಆಚರಣೆಗೆ ಮತ್ತೆ ಅಪಸ್ವರ ಬಂದಿದೆ.ಯುವ ಬ್ರಿಗೇಡ್ ದಲಿತ ಸಂಘಟನೆಗಳ ಆಗ್ರಹವನ್ನು ತಿರಸ್ಕರಿಸಿದೆ. ಈ ಮಧ್ಯೆ ಆಕ್ಷೇಪಕ್ಕೆ ಕಾರಣವಾದ ಅಂಧಕಾಸುರನ ಚಿತ್ರಪಟವನ್ನ ಬದಲಾಯಿಸಿ, ತಾಲ್ಲೂಕು ಆಡಳಿತ ಬಿಡುಗಡೆ ಮಾಡಿದೆ. ಇದರಲ್ಲೂ ದಲಿತ ಸಂಘಟನೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೆನ್ನೆ ಸಂಜೆ ನಡೆದ ಶಾಂತಿ ಸಭೆ ಗೊಂದಲದಲ್ಲೆ ಮುಗಿದಿದೆ.
ಜ.೧೨ ರಂದು ನಾಳೆ ನಡೆಯಲಿರುವ ಅಂಧಕಾಸುರ ಸಂಹಾರದ ಧಾರ್ಮಿಕ ಕಾರ್ಯಕ್ರಮ ನಂಜನಗೂಡಿನಲ್ಲಿ ನಡೆಯಲಿದೆ. ಕಳೆದ ವರ್ಷ ನಂಜನಗೂಡಿನಲ್ಲಿ ಅಂಧಕಾಸುರ ಸಂಹಾರದ ವೇಳೆ ಮಹಿಷಾಸುರನ ಭಾವಚಿತ್ರ ಹೋಲುವಂತೆ ಅಂಧಕಾಸುರನ ಚಿತ್ರ ಬಿಡಿಸಿದ ಹಿನ್ನಲೆ ಭಾರಿ ವಿರೋಧ ವ್ಯಕ್ತವಾಗಿತ್ತು. ಕಳೆದ ವರ್ಷ ಅಂಧಕಾಸುರ ಸಂಹಾರದ ವೇಳೆ ಮಹಿಷಾಸುರನ ಚಿತ್ರ ಹೋಲುವ ಪಟ ಹಾಕಿದ್ದರೆಂದು ಆರೋಪಿಸಿ ಈ ವೇಳೆ ನಂಜು0ಡೇಶ್ವರನ ವಿಗ್ರಹದ ಮೇಲೆ ನೀರು ಎರಚಿ ಅಪಮಾನಿಸಿದ ಘಟನೆ ನಡೆದಿತ್ತು. ನಂಜನಗೂಡು ಉದ್ವಿಘ್ನವಾಗಿ ಬಂದ್ ಆಚರಿಸಲಾಗಿತ್ತು.
ಕಳೆದ ಬಾರಿಯಂತೆ ಸಮಸ್ಯೆ ಆಗ ಬಾರದೆಂದು ಆಕ್ಷೇಪಾರ್ಹವಾದ ಅಂಧಕಾಸುರನ ಚಿತ್ರ ಬದಲಿಸಿ ರಾಜ್ಯ ಆಗಮ ಶಾಸ್ತç ಪಂಡಿತರ ಜೊತೆ ಚರ್ಚಿಸಿ ಶಿವ ಪುರಾಣದಲ್ಲಿ ಬರುವ ಅಂಧಕಾಸುರನ ವರ್ಣನೆಗೆ ತಕ್ಕಹಾಗೆ ನೂತನ ಚಿತ್ರ ಪಟವನ್ನು ತಹಶೀಲ್ದಾರ್ ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಿಡುಗಡೆ ಮಾಡಿದರು. ನೂತನ ಚಿತ್ರಕ್ಕೆ ಉಭಯ ತಂಡದ ಮುಖಂಡರು ಒಪ್ಪಿಗೆ ಸೂಚಿಸಿದರಾದರೂ ದಲಿತ ಸಂಘರ್ಷ ಸಮಿತಿಯ ಮಲ್ಲಹಳ್ಳಿ ನಾರಾಯಣ್ ಮಾನವೀಯತೆ ಇಲ್ಲದ ಆಚರಣೆ ಇದು ನಿಲ್ಲ ಬೇಕೆಂದು ಆಗ್ರಹಿಸಿದರು.
ಈ ಆಚರಣೆ ನಿಲ್ಲಿಸ ಬೇಕೆಂದು ಸರ್ಕಾರಕ್ಕೆ ಪತ್ರ ಬರೆದ್ದಿದ್ದೇವೆ. ಈ ಆಚರಣೆ ನಿಲ್ಲಿಸುವ ಕುರಿತು ಕಾನೂನು ಹೋರಾಟ ಮಾಡುತ್ತಿದ್ದೇವೆ. ಅಂಧಕಾಸುರನ ಚಿತ್ರವನ್ನು ಯಾರು ತುಳಿಯ ಬಾರದು ಹಾಗೂ ಅಂಧಕಾಸುರನ ಚಿತ್ರವನ್ನು ಚಿಕ್ಕದಾಗಿ ಬರೆದು ಆಚರಣೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಒಪ್ಪದ ನಂಜು0ಡೇಶ್ವರನ ಭಕ್ತರು ಮಹಿಷಾಸುರನ ಹೋಲುವ ಚಿತ್ರ ತೆಗೆಯುವುದು ಅವರ ಬೇಡಿಕೆ. ದೇವಾಲಯದ ಆಡಳಿತ ಮಂಡಳಿ ಬದಲಿಸಿ ಸಮಸ್ಯೆಗೆ ಪರಿಹಾರ ತಂದಿದೆ. ಆದರೆ ಈಗ ಅಂಧಕಾಸುರನ ಚಿತ್ರವನ್ನು ತುಳಿಯ ಬಾರದು ಚಿಕ್ಕದಾಗೆ ಚಿತ್ರ ಬರೆಯಬೇಕು, ಇಷ್ಟೇ ಇರಬೇಕು ಎಂಬ ಷರತ್ತು ಹಾಕುತ್ತಾ ಬೇರೆ ವರಸೇ ತೆಗೆಯುತ್ತಿರುವುದು ಸರಿಯಲ್ಲ. ಇದು ನಂಜನಗೂಡಿನ ಶಾಂತಿ ಕದಡುವ ಹುನ್ನಾರ.
ಇವರ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರದ ಕೈಪಿಡಿಯಲ್ಲಿ ಇರುವಂತೆ ಪರಂಪರಾಗತವಾಗಿ ಏನು ನಡೆದುಕೊಂಡು ಬಂದಿದೇಯೋ ಅದೇ ನಡೆಯಬೇಕು. ಇವರು ಹೇಳಿದಂತೆ ಬದಲಾವಣೆ ಒಪ್ಪಲು ಸಾಧ್ಯವಿಲ್ಲ.ಇದು ನಮ್ಮ ಧಾರ್ಮಿಕ ಆಚರಣೆ ಅದನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಈ ಕುರಿತು ನಂಜು0ಡೇಶ್ವರನ ಭಕ್ತರೆಲ್ಲರು ಸೇರೆ ಮುಂದೇ ಏನು ಮಾಡಬೇಕೆಂದು ತೀರ್ಮಾನ ತೆಗೆದುಕೊಳ್ಳಲ್ಲಿದ್ದೇವೆ ಎಂದು ಯುವ ಬ್ರಿಗೇಡ್ ಸಂಘಟಕ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ಅಂಧಕಾಸುರನ ಸಂಹಾರ ಕಾರ್ಯಕ್ರಮಕ್ಕೆ ಕೇವಲ ಒಂದು ದಿನ ಇದೆ. ಉಭಯ ತಂಡಗಳ ನಿರ್ಧಾರ ತಾಲ್ಲೂಕು ಆಡಳಿತಕ್ಕೆ ತಲೆನೋವು ತಂದಿದೆ. ಒಟ್ಟಾರೆ ಅಂಭಕಾಸುರನ ಸಂಹಾರ ವಿವಾದ ಮತ್ತೆ ಮುನ್ನಲೆಗೆ ಬಂದಿದೆ.