ದೊಡ್ಡಬೆಲೆ ಗ್ರಾಪಂಗೆ ಅವಿರೋಧ ಆಯ್ಕೆ
1 min readದೊಡ್ಡಬೆಲೆ ಗ್ರಾಪಂಗೆ ಅವಿರೋಧ ಆಯ್ಕೆ
ಅಧ್ಯಕ್ಷರಾಗಿ ಮಾಲತಿ, ಉಪಾಧ್ಯಕ್ಷರಾಗಿ ಮಂಗಳ ಆಯ್ಕೆ
ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ದೊಡ್ಡಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾರೇಹಳ್ಳಿ ಮಾಲತಿ ಲಿಂಗರಾಜು, ಉಪಾಧ್ಯಕ್ಷರಾಗಿ ಮಂಗಳ ನಟರಾಜು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಜಿಪಂ ಎಇಇ ಅರುಣಾಚಲಂ ಘೋಷಿಸಿದರು.
ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ದೊಡ್ಡಬೆಲೆ ಗ್ರಾಪಂ ಅಧ್ಯಕ್ಷರಾಗಿದ್ದ ದೇವರಾಜು ಹಾಗೂ ಉಪಾಧ್ಯಕ್ಷರಾಗಿದ್ದ ಸೌಭಾಗ್ಯ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾಲತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಎಲ್ಲಾ 14 ಸದಸ್ಯರ ಬೆಂಬಲದಿ0ದ ಅವಿರೋಧವಾಗಿ ಆಯ್ಕೆಯಾದರು. ಮುಖಂಡ ಕಾರೇಹಳ್ಳಿ ಗುರುಪ್ರಕಾಶ್ ಮಾತ ನಾಡಿ, ದೊಡ್ಡಬೆಲೆ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಚುನಾವಣೆಗಳಿಗೆ ಆಸ್ಪದಕೊಡದೇ 14 ಸದಸ್ಯರ ಸಹಕಾರದಿಂದ ಮೂರು ಬಾರಿ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಜೆಡಿಎಸ್ ಬೆಂಬಲಿತ ಸದಸ್ಯರೇ ಹೆಚ್ಚಾಗಿದ್ದರೂ ಯಾವುದೇ ಪಕ್ಷಕ್ಕೆ ಮನ್ನಣೆ ನೀಡದೆ ಪಕ್ಷಾತೀತಾವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿಯ ದೃಷ್ಟಿಯಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ತ್ಯಾಮಗೊಂಡ್ಲು ಹೋಬಳಿಯ ದೊಡ್ಡಬೆಲೆ ಗ್ರಾಪಂ ನೂತನ ಅಧ್ಯಕ್ಷೆ ಮಾಲತಿ ಲಿಂಗರಾಜು, ಉಪಾಧ್ಯಕ್ಷೆ ಮಂಗಳ ನಟರಾಜು ಅವರನ್ನು ಅಭಿನಂದಿಸಲಾಯಿತು. ನೂತನ ಅಧ್ಯಕ್ಷೆ ಮಾಲತಿ ಹಾಗೂ ಉಪಾಧ್ಯಕ್ಷೆ ಮಂಗಳ ಅವರನ್ನು ಗ್ರಾಪಂ ಸದಸ್ಯರಾದ ದೇವರಾಜು, ಸೌಭಾಗ್ಯ, ಪದ್ಮ, ಅಪ್ಪಾಜಿ, ರಾಮಕೃ ಷ್ಣಯ್ಯ, ಮಂಜುನಾಥ್, ಹರಿಣಿ, ಮಂಜುನಾಥ್, ನಾಗೇಶ್, ಶೈಲಾ ಇದ್ದರು.