ಸರ್ಕಾರಿ ಸೌಲಭ್ಯಗಳು ಸಿಗದೇ ಪರದಾಡುತ್ತಿರುವ ವೃದ್ಧೆ
1 min readಸರ್ಕಾರಿ ಸೌಲಭ್ಯಗಳು ಸಿಗದೇ ಪರದಾಡುತ್ತಿರುವ ವೃದ್ಧೆ
ಪಿಂಚಣಿ ಹಣಬಾರದೇ ತುತ್ತಿಗೂ ಅಂಗಲಾಚುವ ದುಃಸ್ಥಿತಿ
ಮುರುಗಮಲ್ಲ ಗ್ರಾಮದ ಜೈಬುನ್ನೀಸಾಗೆ ಮೋಸ ಮಾಡಿದ ಡಿಪೋ ಮಾಲೀಕರು
ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ನಿವಾಸಿ ಜೈಬುನ್ನೀಸಾ ಎಂಬ 75 ವರ್ಷದ ವೃದ್ಧಗೆ ಓಡಾಡಲು ಆಗುತ್ತಿಲ್ಲ. ಊರುಗೋಲಿನ ಸಹಾಯದಲ್ಲಿ ನಿಂತರೂ ಮತ್ತೇ ಕೂರಕ್ಕಾಗಲ್ಲ. ಇಂತಹ ಸ್ಥಿತಿಯಲ್ಲಿ ನೊಂದು ಬೆಂದ ವೃದ್ಧೆ ಜೀವದ ಜೊತೆ ಪಡಿತರ ವಿತರಿಸುವ ಡಿಪೋ ಮಾಲೀಕರು ಹಾಗೂ ಇದಕ್ಕೆ ಸಂಬpಧಪಟ್ಟ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ.
ಅಧಿಕಾರಿಗಳ ಅಸಡ್ಡೆ ಮತ್ತು ಬೇಜವಬ್ದಾರಿತನದಿಂದ ಮಾಡಿರುವ ಪಿಂಚಣಿ ಹಣಬಾರದೇ ತುತ್ತಿನ ಊಟಕ್ಕೂ ಅಂಗಲಾಚುವ ದುಃಸ್ಥಿತಿ ಒಂದಡೆಯಾದರೇ, ಮತ್ತೊಂದಡೆ ಅನಾರೋಗ್ಯದ ಹಿನ್ನಲೆ ಔಷಧಿ ರೀಧಿಸಲು ಒಂದೊoದು ರೂಪಾಯಿಗೂ ಕಷ್ಟ ಬಂದಿರುವುದು ನಿಜಕ್ಕೂ ವಿಷಾಧನೀಯ ಸಂಗತಿ. ಬಡ ಕುಟುಂಬದ ಆಕೆಗೆ ಜಮೀನಿಲ್ಲ, ಇದ್ದ ಒಬ್ಬ ಮಗ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದು, ಬದುಕು ಸಾಗಿಸಲು ಹಲವು ವರ್ಷಗಳಿಂದ ಸರ್ಕಾರ ನೀಡುತ್ತಿದ್ದ ಪಿಂಚಣಿ ಹಣ ನಂಬಿಕೊoಡಿದ್ದ ಜೈಬುನ್ನೀಸಾ ಅವರಿಗೆ ಇತ್ತೀಚೆಗೆ ಅಧಿಕಾರಿಗಳು ಮಾಡಿರುವ ಯಡವಟ್ಟಿನಿಂದ ಅವರ ಜೀವನ ಪರದಾಡುವಂತಾಗಿದೆ.
ಸುಮಾರು ವರ್ಷಗಳಿಂದ ಬರುತ್ತಿದ್ದ 1,200 ರೂಪಾಯಿ ಪಿಂಚಣಿ ಹಣ ಕಳೆದ ಒಂಬತ್ತು ತಿಂಗಳಿoದ ಬರುತ್ತಿಲ್ಲ, ಸರ್ಕಾರದ ಗ್ಯಾರೆಂಟಿಗಳಲ್ಲೊoದಾದ ಅಕ್ಕಿಯೂ ಸಿಗಲಿಲ್ಲ, ಅರ್ಧದಷ್ಟು ನೀಡುವ ಸಹಾಯಧನವೂ ಬಂದಿಲ್ಲ ಎಂಬ ನೋವಿನ ಹುಣ್ಣಿಗೆ ಮುಲಾಮು ಹಚ್ಚುವ ಕೆಲಸ ಮಾಡದ ಹಿನ್ನೆಲೆಯಲ್ಲಿ ಅವರ ಬದುಕು ಆಕ್ರಂದನದಿoದ ಕೂಡಿದೆ. ಅವರಿಗೆ ಇದ್ದ ಪಡಿತರ ಕಾರ್ಡ್ ನಲ್ಲಿ ತಿಂಗಳಿಗೊಮ್ಮೆ ಪಡಿತರ ಬರುತ್ತಿದ್ದು. ಕಳೆದ ಎರಡು- ಮೂರು ವರ್ಷಗಳಿಂದ ಅದೂ ಬಾರದಂತಾಗಿದೆ. ಪಡಿತರ ಮಾಲೀಕರು ಅವರ ಬೆರಳಚ್ಚು ಬರುತ್ತಿಲ್ಲ ಎಂದು ಪ್ರತಿ ಬಾರಿಯೂ ವಾಪಸ್ ಕಳಿಸಿದ್ದಾರೆ ಎಂದು ಆಕೆ ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾಳೆ.
ಇತ್ತೀಚಿಗೆ ಜೈಬುನ್ನೀಸಾ ಅವರ ಹೆಸರಿನಲ್ಲಿದ್ದ ಪಡಿತರ ಚೀಟಿಯಲ್ಲಿ ಡಿಪೋ ಮಾಲೀಕರು ಅಥವಾ ಇದಕ್ಕೆ ಸಂಬoಧಪಟ್ಟ ಅಧಿಕಾರಿಗಳು ಬೇರೆ ನಾಲ್ಕು ಜನ ವ್ಯಕ್ತಿಗಳನ್ನು ಸೇರಿಸಿ, ಅದರಿಂದ ಬರುವ ಪಡಿತರ ಹಾಗೂ ಸರ್ಕಾರಿ ಸೌಲಭ್ಯಗಳು ಮೋಸ ಮಾಡಿದವರೇ ಪಡೆದು ಆಕೆಗೆ ಮೋಸ ಮಾಡಿದ್ದಾರೆ ಎಂದು ಆಕೆಯ ಮೊಮ್ಮಗ ತಯೂಬ್ ಪಾಷಾ ಮಾಧ್ಯಮದವರಿಗೆ ಹೇಳಿದರು.
ಜೈಬುನ್ನೀಸಾ ಅವರು ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಮೊಮ್ಮಗ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪಡಿತರ ಕಾರ್ಡ್ ಜೆರಾಕ್ಸ್ ಕೇಳಿದ್ದಾರೆ. ಆಕೆಯ ಪಡಿತರ ಕಾರ್ಡ್ ನಲ್ಲಿ ಹಳೇ ಸಂಖ್ಯೆ ಇದ್ದ ಕಾರಣ ಆಸ್ಪತ್ರೆಯ ಸಿಬ್ಬಂದಿ ಹೊಸ ಪಡಿತರ ಕಾರ್ಡ್ ನಂಬರ್ ಹಾಕಿಸಿಕೊಂಡು ಬರಲು ಹೇಳಿದ್ದಾರೆ. ಆ ವೇಳೆ ಅವರ ಮೊಮ್ಮಗ ಹೊಸ ಪಡಿತರ ಕಾರ್ಡ್ ನಂಬರ್ ಹಾಕಿಸಿಕೊಂಡು ಬರಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಗೆ ಹೋದಾಗ ಆಕೆಯ ಕಾರ್ಡ್ ರದ್ದಾಗಿದ್ದು ಬಹಿರಂಗವಾಗ್ಲಿದೆ,
ಅಲ್ಲದೆ ಅನಧಿಕೃತವಾಗಿ ಆಕೆಯ ಹೊಸ ಪಡಿತರ ಕಾರ್ಡ್ ನಂಬರ್‌ನಲ್ಲಿ ಬೇರೆ ನಾಲ್ಕು ಜನ ವ್ಯಕ್ತಿಗಳನ್ನು ಸೇರಿಸಿ ಅವರೇ ಪಡಿತರ ಹಾಗೂ ಸರ್ಕಾರಿ ಸೌಲಭ್ಯ ಪಡೆಯುತ್ತಿರುವದು ಸ್ಪಷ್ಟವಾಗಿದೆ. ಹಿರಿ ವಯಸ್ಸಿನ ಜೈಬುನ್ನೀಸಾ ಅವರಿಗೆ ಆದ ಅನ್ಯಾಯಕ್ಕೆ ಈಗಲಾದರೂ ಸಂಬAಧಪಟ್ಟ ಅಧಿಕಾರಿಗಳು ನ್ಯಾಯ ಕೊಡಿಸಬೇಕಿದೆ. ಮೊದಲು ಬರುತ್ತಿದ್ದ ಪಿಂಚಣಿ ಯೋಜನೆ ಹಣ ಮತ್ತು ಪಡಿತರ ಸಿಗುವ ವ್ಯವಸ್ಥೆ ಕಲ್ಪಸಲು ಮುಂದಾಗುತ್ತಾರೋ ಇಲ್ಲವೋ ಕಾದು ನೋಡಬೇಕಿದ್ದು, ಜೈಬುನ್ನೀಸಾ ಅವರ ಮನವಿಗೆ ಅಧಿಕಾರಿಗಳು ಸ್ಪಂದಿಸಬೇಕಾಗಿದೆ.