ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೃಷ್ಣ ಮಾಲೂರು ತಾಲ್ಲೂಕಿನಲ್ಲಿ ಘಟನೆ
1 min readನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೃಷ್ಣ
ಗ್ರಾಮ ಪಂಚಾಯ್ತಿ ಸಹಾಯಕ ನಾಗರಾಜ್ ಮಗ ಆತ್ಮಹತ್ಯೆ
ಮಾಲೂರು ತಾಲ್ಲೂಕಿನ ಮಡಿವಾಳ ಗ್ರಾಮ ಪಂಚಾಯ್ತಿಯಲ್ಲಿ ಘಟನೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಚೊಕ್ಕಡಹಳ್ಳಿ ಗ್ರಾಮದ 24 ವರ್ಷದ ಕೃಷ್ಣ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಈತ ಗ್ರಾಮ ಪಂಚಾಯಿತಿ ಸಹಾಯಕ ನಾಗರಾಜ್ ಅವರ ಮಗ ಎಂದು ಗುರ್ತಿಸಲಾಗಿದೆ.
ಚೊಕ್ಕಡಹಳ್ಳಿ ಗ್ರಾಮದ ನಿವೇಶನವೊಂದರ ವಿಚಾರದಲ್ಲಿ ಗ್ರಾಮದಲ್ಲಿ ಗಲಾಟೆ ನಡೆದಿತ್ತು ಎನ್ನಲಾಗಿದೆ. ಕಂದಾಯ ಇಲಾಖೆ, ಪೋಲಿಸ್, ಗ್ರಾಮ ಪಂಚಾಯ್ತಿಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿ ಬಂದಿದೆ.
ಎರಡು ವರ್ಷಗಳಿಂದ ಗ್ರಾಮ ಪಂಚಾಯ್ತಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮೃತನ ತಂದೆ ನಾಗರಾಜ್ ಅನಾರೋಗ್ಯದ ಕಾರಣ ಅವರ ಪರವಾಗಿ ಪಂಚಾಯಿತಿಯಲ್ಲಿ ಸಹಾಯಕನಾಗಿ ಕೃಷ್ಣ ಕೆಲಸ ಮಾಡುತ್ತಿದ್ದ.
ಸ್ಥಳದಲ್ಲಿ ಸಂಬಂಧಿಕರಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಮೇಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.
ಮಾಲೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.