ಆಶ್ರಯ ಸಮಿತಿ ರಚನೆ ನಂತರ ಉಚಿತ ನಿವೇಶನ ಹಂಚಿಕೆ
1 min readಆಶ್ರಯ ಸಮಿತಿ ರಚನೆ ನಂತರ ಉಚಿತ ನಿವೇಶನ ಹಂಚಿಕೆ
ಗೌರಿಬಿದನೂರು ತಹಸೀಲ್ದಾರ್ ಮಹೇಶ್ ಪತ್ರಿ ಭರವಸೆ
ಪಿನಾಕಿನಿ ನದಿ ಪಾತ್ರದ ಗುಡಿಸಲು ಪ್ರದೇಶಕ್ಕೆ ಭೇಟಿ
ಆಶ್ರಯ ಸಮಿತಿ ರಚನೆ ನಂತರ ಫಲಾನುಭವಿಗಳನ್ನು ಗುರ್ತಿಸಿ ಮನೆ ನಿರ್ಮಾಣಕ್ಕೆ ಜಾಗ ನೀಡಲಾಗುವುದು ಎಂದು ತಹಸೀಲ್ದಾರ್ ಮಹೇಶ್ ಪತ್ರಿ ಹೇಳಿದರು. ಕಂದಾಯ ಇಲಾಖೆ ಹಾಗೂ ನಗರಸಭೆಯಿಂದ ಪಿನಾಕಿನಿ ನದಿ ಪಾತ್ರದಲ್ಲಿ ಸುಮಂಗಳಿ ಕಲ್ಯಾಣ ಮಂಟಪದ ಸಮೀಪ ಗುಡಿಸಲುಗಳನ್ನು ಪರಿಶಿಲನೆ ಮಾಡಿ ಮಾತನಾಡಿದರು.
ಗೌರಿಬಿದನೂರು ತಾಲೂಕಿನಲ್ಲಿ ಆಶ್ರಯ ಸಮಿತಿ ರಚನೆ ಮಾಡಿದ ನಂತರ ನಿರ್ವಸತಿಗರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಮಹೇಶ್ ಪತ್ರಿ ಹೇಳಿದರು. ಮನೆ ಜಾಗಕ್ಕಾಗಿ ಈಗಾಗಲೇ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಸರ್ಕಾರ ಅಲ್ಲಿ ಮೂಲ ಸೌಲಭ್ಯ ಒದಗಿಸಿ ಮನೆ ಕಟ್ಟುಕೊಳ್ಳಲು ಜಾಗ ನೀಡುತ್ತದೆ. ಸುಮಾರು 28 ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ಇದು ನಗರಸಭೆಯ 7 ನೇವಾರ್ಡ ವ್ಯಾಪ್ತಿಗೆ ಬರುತ್ತದೆ ಎಂದರು.
ಇಲ್ಲಿ ವಾಸಿಸುತ್ತಿರುವವರಲ್ಲಿ ಕೆಲವರಿಗೆ ಮನೆ ಇದೆ ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಈ ಗಾಗಲೇ ಕಾದಲವೇಣಿ ಸಮೀಪ 23 ಎಕರೆ ಜಮೀನು ಆಶ್ರಯ ಪಲಾನುಭವಿಗಳಿಗೆ ನೀಡಲು ಸಿದ್ದವಾಗಿದೆ. ಬರ್ಜಾನುಕುಂಟೆ ಸಮೀಪ 351 ನಿವೇಶನಗಳನ್ನು ನೀಡಲಾಗುತ್ತೆ. ಅಲ್ಲದೇ ಸಾಗಾನಹಳ್ಳಿ ಸಮೀಪ ಸರ್ಕಾರ ಆಶ್ರಯ ಪಲಾನುಭವಿಗಳಿಗಾಗಿ ಜಮೀನು ತೆಗದಿದೆ. ಇಲ್ಲಿರುವರೆಲ್ಲರೂ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಸುಮಾರು 30 ವರ್ಷಗಳಿಂದ ವಾಸವಿರುವ ಇವರನ್ನು ಖಾಲಿ ಮಾಡಿಸಲು ಮಾನವತಾದೃಷ್ಟಿಯಿಂದ ಸಾಧ್ಯವಾಗದು ಎಂದರು.