ರಾಜ್ಯೋತ್ಸವ ಪ್ರಶಸ್ತಿಗೆ ನಕಲಿ ಕಲಾವಿದರ ಆಯ್ಕೆ ಆರೋಪ
1 min readರಾಜ್ಯೋತ್ಸವ ಪ್ರಶಸ್ತಿಗೆ ನಕಲಿ ಕಲಾವಿದರ ಆಯ್ಕೆ ಆರೋಪ
ಕುಪಿತಗೊಂಡ ಜಾನಪದ, ವೀರಗಾಸೆ ಕಲಾವಿದರಿಂದ ಆಕ್ರೋಶ
ಜಿಲ್ಲಾಡಳಿತದ ವಿರುದ್ದ ಹೋರಾಟದ ಎಚ್ಚರಿಕೆ ನೀಡಿದ ಕಲಾವಿದರು
ಶುಕ್ರವಾರ ಚಿಕ್ಕಬಳ್ಳಾಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅರ್ಹ ಕಲಾವಿದರನ್ನು ಕಡೆಗೆಣಿಸಿ, ನಕಲಿ ಕಲಾವಿದರಿಗೆ ಪ್ರಶಸ್ತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಒಂದೇ ಮನೆಯಲ್ಲಿ ತಂದೆ ಮಗ ಇಬ್ಬರಿಗೂ ಪ್ರಶಸ್ತಿ ನೀಡಿದ್ದು, ಇದು ಯಾವ ರೀತಿಯ ಸಮಾನತೆ ಎಂದು ನೈಜ ಕಲಾವಿದರು ಪ್ರಶ್ನೆ ಮಾಡಿದ್ದಾರೆ. ಯಾವುದೇ ಪ್ರದರ್ಶನ ನೀಡದ ವ್ಯಕ್ತಿಗೂ ಸನ್ಮಾನ ಮಾಡಿದ್ದು, ಕೂಡಲೇ ಪ್ರಶಸ್ತಿ ವಾಪಸ್ ಪಡೆಯುವಂತೆ ಆಗ್ರಹಿಸಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ನೆನ್ನೆ ನಡೆದ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ನಡೆಯಿತು. ಆದರೆ ಕಳೆದ ಹಲವು ವರ್ಷಗಳಿಂದ ಇರುವ ಪ್ರಶಸ್ತಿ ಆಯ್ಕೆ ವಿಚಾರ ಇದೀಗ ಬೀದಿಗೆ ಬಂದಿದ್ದು, ಅನರ್ಹರಿಗೆ ಸನ್ಮಾನ ನೀಡಿರೋದಕ್ಕೆ ಅರ್ಹರಿಂದ ತೀವ್ರ ಆಕ್ಷೇಪ ಕೇಳಿಬಂದಿದೆ. ಕಲಾವಿದನಾಗಿ ಪ್ರದರ್ಶನವೇ ನೀಡದ ವ್ಯಕ್ತಿಗೆ ಪ್ರಶಸ್ತಿ ನೀಡಿರುವ ಹಿಂದೆ ರಾಜಕೀಯ ಅಡಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಒಂದೇ ಕುಟುಂಬದ ತಂದೆ ಮತ್ತು ಮಗನಿಗೆ ಪ್ರಶಸ್ತಿ ನೀಡಲಾಗಿದ್ದು, ಇದು ಯಾವ ಸಮಾನತೆ ಎಂದು ಪ್ರಶ್ನಿಸಲಾಗಿದೆ. ಹಾಗಾಗಿ ಅನರ್ಹರಿಂದ ಪ್ರಶಸ್ತಿ ವಾಪಸ್ ಪಡೆದು ಅರ್ಹರಿಗೆ ನೀಡಬೇಕು, ಇಲ್ಲವಾದ್ರೆ ಪ್ರತಿಭಟನೆ ನಡೆಸುವುದಾಗಿ ವೀರಗಸೆ ಮತ್ತು ಜನಪದ ಕಲಾವಿದರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ದಂತಹ ನಾಡಹಬ್ಬ ಹಾಗು ರಾಷ್ಟಿಯ ಹಬ್ಬಗಳ ವೇಳೆ ಆಯಾ ಜಿ¯್ಲೆ, ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸುವುದು ಸ್ವಾತಂತ್ರ ಪೂರ್ವದಿಂದಲೂ ರೂಡಿಯಲ್ಲಿದೆ. ಈ ಬಾರಿಯೂ ಕೆಲವರನ್ನ ಗುರ್ತಿಸಿ ಸನ್ಮಾನಿಸಲಾಗಿದೆ. ಆದ್ರೆ ಸನ್ಮಾನಿತರಲ್ಲಿ ಯಾರಿಗೆ ಪ್ರಶಸ್ತಿ ಸಲ್ಲಬೇಕಿತ್ತೂ ಅವರನ್ನ ಗುರ್ತಿಸದೆ ನಕಲಿ ಕಲಾವಿದರಿಗೆ ಪ್ರಶಸ್ತಿ ನೀಡಲಾಗಿದೆ. ಒಂದೇ ಮನೆಯಲ್ಲಿ ತಂದೆ ಮಗನಿಗೆ ಪ್ರಶಸ್ತಿ ನೀಡಿರುವುದು ಎಷ್ಟು ಸರಿ, ಇದು ಜಿಲ್ಲೆಯ ಅಸಲೀ ಕಲಾದವಿದರಿಗೆ ಮಾಡಿದ ಅವಮಾನ ಎಂಬ ಆರೋಪ ಕೇಳಿಬಂದಿದೆ.
ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸಾಕಷ್ಟು ರಾಜಕೀಯ ನಡೆಯುತ್ತಿದೆ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಆಯ್ಕೆ ಸಮಿತಿ ವಿರುದ್ದ ಪ್ರತಿಭಟನೆ ನಡೆಸುವುದಾಗಿ ನೈಜ ಕಲಾವಿದರು ಜಿಲ್ಲಾಡಳಿತಕ್ಕೆ ಎಚ್ವರಿಕೆ ನೀಡಿದ್ದಾರೆ. ವೇದಿಕೆಯಲ್ಲಿ ಸನ್ಮಾನಿಸಿದ ಕಲಾವಿದರಲ್ಲಿ ಶಿಡ್ಲಘಟ್ಟ ತಾಲ್ಲೂಕು ಕೊತ್ತನೂರು ಗ್ರಾಮದ ವೀರಬದ್ರಯ್ಯ ಮತ್ತು ಅವರ ಮಗ ಗಂಗಾದರಯ್ಯ ಎಂಬ ತಂದೆ ಮಕ್ಕಳಿಬ್ಬರಿಗೂ ಪ್ರಶಸ್ತಿ ನೀಡಲಾಗಿದೆ. ವೀರಬದ್ರಯ್ಯ ಎಂಬುವರು ಈವರೆಗೂ ಎಲ್ಲಿಯೂ ವೀರಗಾಸೆ ಕುಣಿತ ಮಾಡಿರುವುದು ನೋಡೇ ಇಲ್ಲ. ಇದಕ್ಕೆ ಮುನ್ನ ಅವರಿಗೆ ಯಾವುದೇ ಪ್ರಶ್ತಿಗಳು ಸಿಕ್ಕಿಲ್ಲ. ಅರ್ಹರಲ್ಲದ ವ್ಯಕ್ತಿಗಳನ್ನ ಆಯ್ಕೆ ಮಾಡುವುದರಲ್ಲಿ ಮೋಸ ನಡೆದಿದೆ ಎಂದು ಕಲಾವಿದರು ಕಿಡಿ ಕಾರಿದ್ದಾರೆ.
ಹಾಗಾಗಿ ಪ್ರಸ್ತುತ ಅನರ್ಹರಿಗೆ ನೀಡಿರುವ ಪ್ರಶಸ್ತಿಗಳನ್ನು ಕೂಡಲೇ ವಾಪಸ್ ಪಡೆಯಬೇಕು, ಇಲ್ಲಾವಾದ್ರೆ ಜಿಲ್ಲೆಯ ಕಲಾವಿದರ ಸಂಘದಿ0ದ ಪ್ರತಿಭಟನೆ ನಡೆಸುವುದಾಗಿ ಕಲಾವಿದ ಗಣೇಶ್ ಎಚ್ಚರಿಕೆ ನೀಡಿದ್ದಾರೆ. ಈ ಪ್ರಶಸ್ತಿ ಸಂಬ0ಧ ಜಿಲ್ಲಾ ಉಸ್ತುವಾರಿ ಸಚಿವರೂ ಅಸಮಾಧನ ಹೊರಹಾಕಿದ್ದು, ಜಿಲ್ಲಾಡಳಿತ ಯಾವ ರೀತಿಯ ಕ್ರಮ ವಹಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.