ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್

ಬಾಗೇಪಲ್ಲಿಯಲ್ಲಿ ಹೋಬಳಿ ಮಟ್ಟದ ಪ್ರೇರಣಾ ಕಾರ್ಯಕ್ರಮ

ಸಿದ್ದರಾಮೇಶ್ವರ ೮೫೩ನೇ ಜಯಂತಿ, ಭೋವಿ ಭವನ ಲೋಕಾರ್ಪಣೆ

ಅಂಧಕಾಸುರ ಸಂಹಾರ ಆಚರಣೆ

January 13, 2025

Ctv News Kannada

Chikkaballapura

ಚಿಕ್ಕಬಳ್ಳಾಪುರದಲ್ಲಿ ಹೆದ್ದಾರಿ ಸಿಬ್ಬಂದಿ ಮೇಲೆ ಹಲ್ಲೆ ಆರೋಪ

1 min read

ಚಿಕ್ಕಬಳ್ಳಾಪುರದಲ್ಲಿ ಹೆದ್ದಾರಿ ಸಿಬ್ಬಂದಿ ಮೇಲೆ ಹಲ್ಲೆ ಆರೋಪ

ಕಾರಿನಲ್ಲಿ ಬಂದು ಹಲ್ಲೆ ಮಾಡಿ ಪರಾರಿಯಾದ ಬಗ್ಗೆ ದೂರು

ಪೊಲೀಸ್ ವೃತ್ತ ನಿರೀಕ್ಷಕರ ವಿರುದ್ಧವೂ ಲಂಚದ ಆರೋಪ

ಮನೆ ನಿರ್ಮಿಸಲು ಸಿಮೆಂಟ್ ಲಂಚವಾಗಿ ಪಡೆದರೇ ಸಿಐ?

ಸಮರ್ಪಕವಾಗಿ ರಾಷ್ಟಿಯ ಹೆದ್ದಾರಿ ಕಾಮಗಾರಿ ಮುಗಿಸುವಲ್ಲಿ ವಿಫಲವಾಗಿರುವ ರಾಷಟ್‌ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರ ನಗರದ ಎಂಜಿ ರಸ್ತೆ ಕಿತ್ತು ನಾಗರಿಕರಿಗೆ ತೊಂದರೆ ನೀಡಿದ ಬೆನ್ನಲ್ಲಿಯೇ ಇದೀಗ ಹೆದ್ದಾರಿ ಕಾಮಗಾರಿಯಲ್ಲಿ ಕರ್ತವ್ಯ ನರ್ವಹಿಸುತ್ತಿರುವ ಸಿಬ್ಬಂದಿಯ ಮೇಲೆಯೂ ಹಲ್ಲೆ ಮಾಡಿದ ಆರೋಪವನ್ನು ಎದುರಿಸುವಂತಾಗಿದೆ.

ರಾಷ್ಟಿಯ ಹೆದ್ದಾರಿ 234ರ ಕಾಮಗಾರಿ ನಡೆಯುತ್ತಿದ್ದು, ಇದು ಆಮೆಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪಗಳಿವೆ. ನಗರದ ಎಂಜಿ ರಸ್ತೆಯಲ್ಲಿ ಕಟ್ಟಡಗಳನ್ನು ತೆರುವು ಮಾಡಿ ತಿಂಗಳುಗಳೇ ಕಳೆದರೂ ಹೆದ್ದಾರಿ ಪ್ರಾಧಿಕಾರದವರು ಈವರೆಗೂ ಚರಂಡಿ ನಿರ್ಮಿಸಲೂ ಮುಂದಾಗಿಲ್ಲ. ಇನ್ನು ಜಕ್ಕಲಮಡಗು ಪೈಪ್‌ಲೈನ್ ಬದಲಾವಣೆ, ಯುಜಿಡಿ ಬದಲಾವಣೆ ಬಗ್ಗೆ ಪಾಪ ಹೆದ್ದಾರಿ ಪ್ರಾಧಿಕಾರದವರು ಇನ್ನೂ ಯೋಚನೆಯೇ ಮಾಡಿಲ್ಲ. ಈ ನಡುವೆ ಕಾಮಗಾರಿ ಮಾಡಿಸುತ್ತಿರುವ ಗುತ್ತಿಗೆದಾರನ ಮೇಲೆ ಹಲ್ಲೆ ಮಾಡಿದ ಬಗ್ಗೆ ದೂರು ಬಂದಿದ್ದು, ಯಾರು ಹಲ್ಲೆ ಮಾಡಿದರು, ಯಾಕೆ ಮಾಡಿದರು ಎಂಬ ವಿಚಾರ ನೀವೇ ನೋಡಿ.

ಇಲ್ಲಿ ಮಂಚದ ಮೇಲೆ ಮಲಗಿ ಮಾತನಾಡುತ್ತಿದ್ದಾನಲ್ಲ, ಈತನ ಹೆಸರು ಶ್ರೀನಿವಾಸ್. ಇವರು ರಾಷ್ಟಿಯ ಹೆದ್ದಾರಿ 234ರ ಅಭಿವೃದ್ಧಿಗೆ ಗುತ್ತಿಗೆ ಪಡೆದಿದೆಯಲ್ಲ ಕೊಲ್ಲೂರು ಗುರುನಾಥ್ ಮಾಲೀಕತ್ವದ ಜಿಕೆ ಕನ್‌ಸ್ಟನ್ಸ್ ಎಂಬ ಕಂಪನಿ, ಆ ಕಂಪನಿಯ ಸಿಬ್ಬಿಂದಿಯ0ತೆ. ಇವರಿಗೆ ಇದೇ ಕಂಪನಿಯಲ್ಲಿ ಪ್ರಾಜೆಕ್ಟ್ ಎಂಜನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರೋ ವೆಂಕಟಗೋವಿ0ದರಾಜು ಎಂಬುವರು ಸಿಮೆಂಟ್ ಕೊಡಿಸುವಂತೆ ಹೇಳಿದ್ದರಂತೆ. ಅದು ಚಿಕ್ಕಬಳ್ಳಾಪುರದ ಪೊಲೀಸ್ ಅಧಿಕಾರಿಯೊಬ್ಬರು ಮನೆ ನಿರ್ಮಿಸುತ್ತಿದ್ದು, ಅವರಿಗೆ 1 ಲಕ್ಷ ರುಪಾಯಿ ಮೌಲ್ಯದ ಸಿಮೆಂಟ್ ಕೊಡಿಸುವಂತೆ ಸೂಚಿಸಿದ್ದರಂತೆ.

ಎ0ಜಿನಿಯರ್ ಸೂಚನೆಯಂತೆ ಈ ಶ್ರೀನಿವಾಸ್ ಚಿಕ್ಕಬಳ್ಳಾಪುರದ ಅಂಗಡಿಯೊ0ದರಿ0ದ 1 ಲಕ್ಷ ರುಪಾಯಿ ಮೌಲ್ಯದ ಸಿಮೆಂಟ್ ಕೊಡಿಸಿದ್ದರಂತೆ. ಆದರೆ 45 ಸಾವಿರ ನೀಡಿದ ವೆಂಕಚ ಗೋವಿಂದ ರಾಜು ಉಳಿದ 55 ಸಾವಿರ ನೀಡದೆ ಸತಾಯಿಸುತ್ತಿದ್ದನಂತೆ. ಇದರಿಂದ ಬೇಸತ್ತ ಶ್ರೀನಿವಾಸ್, ವೆಂಕಟಗೋವಿ0ದರಾಜು ಅವರ ಮನೆಗೆ ತೆರಳಿ ಮನೆಯಲ್ಲಿದ್ದ ಹೆಂಗಸರಿಗೆ ಹಣ ನೀಡುವಂತೆ ಬೆದರಿಕೆ ಹಾಕಿ ಬಂದಿದ್ದನ0ತೆ. ಇದರಿಂದ ಕುಪಿತಗೊಂಡ ವೆಂಕಟ ಗೋವಿಂದರಾಜು, ಶ್ರೀನಿವಾಸ್‌ಗೆ ಕರೆ ಮಾಡಿ, ಯಾಕೆ ಮನೆಗೆ ಹೋದೆ ಎಂದು ಪ್ರಶ್ನಿಸಿದ್ದಾರೆ.

ಇದಾದ ನಂತರ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷ ಮಂಜುನಾಥ್ ಅವರು ಶ್ರೀನಿವಾಸ್‌ಗೆ ಕರೆ ಮಾಡಿ, ಬೆಳಗ್ಗೆ ಠಾಣೆಗೆ ಬರುವಂತೆ ಹೇಳಿದ್ದರಂತೆ. ಇವೆಲ್ಲದರ ನಡುವೆ ಶ್ರೀನಿವಾಸ್ ಇಂದು ಬೆಳಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ, ತನ್ನ ಮೇಲೆ ರೌಡಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಶ್ರೀನಿವಾಸ್, ವೃತ್ತ ನಿರೀಕ್ಷಕ ಮಂಜುನಾಥ್ ಹಲವು ಅಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಈ ವಿಚಾರಗಳು ತಮಗೆ ಗೊತ್ತಿದೆ ಎಂಬ ಕಾರಣಕ್ಕೆ ತನ್ನ ವಿರುದ್ಧ ದ್ವೇಷ ಕಾರುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ಶ್ರೀನಿವಾಸ್ ನೀಡಿರುವ ದೂರಿನಲ್ಲಿ ತಾನು ಡಿವೈನ್ ಸಿಟಿಯ ತಮ್ಮ ಮನೆಯ ಬಳಿ ಇದ್ದಾಗ ಹಸಿರುಬಣ್ಣದ ಕ್ವಾಲಿಸ್ ವಾಹನದಲ್ಲಿ ಬಂದ ಕೆಲವರು ತನ್ನನ್ನು ಕರೆದು, ಯಾವುದೋ ಮಾರಕಾಸ್ತçದಿಂದ ತನಗೆ ಹೊಡೆದರು. ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಆಗ ಪೆಚ್ಚು ನನ್ನ ಭುಜಕ್ಕೆ ತಗುಲಿದೆ ಎಂದು ಹೇಳಿದ್ದಾರೆ. ಬೆಳಗ್ಗೆ ತನ್ನ ಪತ್ನಿ ಆಸ್ಪತ್ರೆಗೆ ಕರೆ ತಂದಿರುವುದಾಗಿ ಹೇಳಿದ್ದಾರೆ. ಆದರೆ ಎಂಜಿನಿಯರ್ ಗೋವಿಂದರಾಜು ಹೇಳುವಂತೆ ಶ್ರೀನಿವಾಸ್ ಅವರು ಅನಾರೋಗ್ಯವಾಗಿದೆ ಎಂದ ಕಾರಣ ತಮ್ಮದೇ ಗುತ್ತಿಗೆದಾರ ಕಂಪನಿಯ ಸಿಬ್ಬಂದಿ ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ತನ್ನ ಮೇಲೆ ಹಲ್ಲೆ ಮಾಡಲು ಕಾರಣ ಎಂಜಿನಯರ್ ವೆಂಕಟಗೋವಿ0ದರಾಜು ಮತ್ತು ಚಿಕ್ಕಬಳ್ಳಾಪುರ ಇನ್ಸ್ಪೆಕ್ಟರ್ ಮಂಜುನಾಥ್ ಅವರೇ ಕಾರಣ. ಇನ್ಸ್ಪೆಕ್ಟರ್ ಮಂಜುನಾಥ್ ಅವರು ತಮ್ಮ ಕಂಪನಿಯಿ0ದ ಲಂಚದ ರೂಪದಲ್ಲಿ ಸಾಮಾಗ್ರಿಗಳನ್ನು ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನೂ ಶ್ರೀನಿವಾಸ್ ಮಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನಾದ್ಯಂತ ಇನ್ಸ್ಪೆಕ್ಟರ್ ಮಂಜುನಾಥ್ ಅವರು ಅಕ್ರಮ, ಅವ್ಯವಹಾರ ನಡೆಸುತ್ತಿದ್ದು, ಇವುಗಳಲ್ಲಿ ಕೆಲ ವಿಷಯಗಳು ತನ್ನ ಗಮನಕ್ಕೆ ಬಂದಿದೆ. ಈ ವಿಚಾರ ನಾನು ಬಹಿರಂಗ ಮಾಡುತ್ತೇನೆ ಎಂಬ ಕಾರಣಕ್ಕೆ ವೆಂಕಟಗೋವಿ0ದರಾಜು ಜೊತೆ ಸೇರಿ ನನ್ನ ಬಾಯಿ ಮುಚ್ಚಿಸಲು ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇಲ್ಲಿ ಮನೆ ಕಟ್ಟಿಸುತ್ತಿರುವ ಪೊಲೀಸ್ ಅಧಿಕಾರಿ ಯಾರು, ಇನ್ಸ್ಪೆಕ್ಟರ್ ಮಂಜುನಾಥ್ ಅವರೇ ಮನೆ ನಿರ್ಮಿಸುತ್ತಿದ್ದಾರಾ, ಹಾಗಾದರೆ ಅವರೇ ಗುತ್ತಿಗೆದಾರ ಕಂಪನಿಯಿ0ದ ಲಂಚವಾಗಿ 1 ಲಕ್ಷ ರುಪಾಯಿ ಮೌಲ್ಯದ ಸಿಮೆಂಟ್ ಪಡೆದರಾ ಎಂಬ ವಿಚಾರಗಳ ಬಗ್ಗೆ ತನಿಖೆಯಾಗಬೇಕಿದೆ. ಒಂದು ವೇಳೆ ಇನ್ಸ್ಪೆಕ್ಟರ್ ಕೇಳಿದ ಕಾರಣಕ್ಕೆ ಗುತ್ತಿಗೆದಾರ ಕಂಪನಿಯವರು ಯಾಕೆ 1 ಲಕ್ಷ ರುಪಾಯಿ ಮೌಲ್ಯದ ಸಿಮೆಂಟ್ ಲಂಚದ ರೂಪದಲ್ಲಿ ನೀಡಿದರು, ಹಾಗೆ ನೀಡಲು ಗುತ್ತಿಗೆದಾರ ಕಂಪನಿಯವರು ಮಡಾಇರುವ ತಪ್ಪೇನು ಎಂಬ ಬಗ್ಗೆಯೂ ತನಿಖೆ ನಡೆಯಬೇಕಿದೆ.

ಲಂಚದ ರೂಪದಲ್ಲಿ ಸಿಮೆಂಟ್ ಪಡೆದಿರುವ ಪೊಲೀಸ್ ಅಧಿಕಾರಿಯ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕಾಗಿದೆ. ಜೊತೆಗೆ ಶ್ರೀನಿವಾಸ್ ಮೇಲೆ ನಿಜವಾಗಿಯೂ ಹಲ್ಲೆ ನಡೆದಿದೆಯಾ, ಒಂದು ವೇಳೆ ನಡೆದಿದ್ದರೆ ಹಲ್ಲೆ ಮಾಡಿದವರು ಮತ್ತು ಮಾಡಿಸಿದವರು ಯಾರು ಎಂಬ ಬಗ್ಗೆಯೂ ತನಿಖೆಯಾಗಿ, ಹಲ್ಲೆ ಮಾಡಿದವರು ಮತ್ತು ಮಾಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಒಂದು ವೇಳೆ ಹಲ್ಲೆಯೇ ನಡೆಯದೆ ಶ್ರೀನಿವಾಸ್ ಸುಳ್ಳು ಹೇಳಿದ್ದರೆ ಶ್ರೀನಿವಾಸ್ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕಾದ ಅಗತ್ಯವಿದೆ.

ಆದರೆ ಇಲ್ಲಿ ಪೊಲೀಸ್ ಅಧಿಕಾರಿ ವಿರುದ್ಧವೇ ಆರೋಪ ಇರುವುದರಿಂದ ತನಿಖೆ ಸಮರ್ಪಕವಾಗಿ ನಡೆಯಲಿದೆಯಾ ಎಂಬ ಪ್ರಶ್ನೆಯೂ ಎದುರಾಗಿದೆ. ಒಂದು ವೇಳೆ ಶ್ರೀನಿವಾಸ್ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದರೆ ಆತನಿಗೂ ಕಠಿಣ ಕ್ರಮವಾಗಬೇಕಿದೆ. ಯಾಕೆಂದರೆ ಮುಂದೆ ಇಂತಹ ಆರೋಪಗಳು ಮಾಡದಂತೆ ಎಚ್ಚರಿಕೆ ರವಾನಿಸಬೇಕಾದ ಹೊಣೆ ಪೊಲೀಸ್ ಇಲಾಖೆ ಮೇಲಿದೆ. ಹಾಗಾಗಿ ಈ ಪ್ರಕ ಣ ಸಮರ್ಪಕ ತನಿಖೆ ನಡೆದು, ಸತ್ಯ ಹೊರಬರಲಿ ಎಂದು ಆಶಿಸೋಣ.

About The Author

Leave a Reply

Your email address will not be published. Required fields are marked *