ಶಾಸಕ ಮುನಿರತ್ನ ಮೇಲಿನ ಆರೋಪಗಳು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ
1 min readಶಾಸಕ ಮುನಿರತ್ನ ಮೇಲಿನ ಆರೋಪಗಳು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ
ನಾನು ವರದಿ ಬರುವವರೆಗೂ ಯಾವುದೇ ಪರ ವಿರೋಧ ಹೇಳಿಕೆ ಕೊಡಲ್ಲ
ಸಂಸದ ಡಾ. ಕೆ ಸುಧಾಕರ್
ಶಾಸಕ ಮುನಿರತ್ನ ನನ್ನ ಸಹಪಾಠಿ, ಸಚಿವರಾಗಿ ಕೆಲಸ ಮಾಡಿದವರು. ಅವರ ಮೇಲಿನ ಆರೋಪಗಳನ್ನ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ ತಪ್ಪು ಆಗಿದಿಯೋ ಇಲ್ಲವೋ ಅನ್ನೋದು ತನಿಖೆಯಾಗಲಿ. ನಾನು ವರದಿ ಬರುವವರೆಗೂ ಯಾವುದೇ ಪರ ವಿರೋಧ ಹೇಳಿಕೆ ಕೊಡಲ್ಲ ಎಂದು ಸಂಸದ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆ ಅಗಲೀಕರಣ ಕಾರ್ಯಚರಣೆ ಭರದಿಂದ ಸಾಗಿದ್ದು ಈ ಸ್ಥಳಕ್ಕೆ ಸಂಸದ ಡಾ. ಕೆ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಸಕ ಮುನಿರತ್ನ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕ ಮುನಿರತ್ನ ನನ್ನ ಸಹಪಾಠಿ, ಸಚಿವರಾಗಿ ಕೆಲಸ ಮಾಡಿದವರು. ಅವರ ಮೇಲಿನ ಆರೋಪಗಳನ್ನ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಂಬಲಾಗುತ್ತಿಲ್ಲ. 10 ವರ್ಷಗಳಿಂದ ಸ್ನೇಹಿತನಾಗಿ ನಾನು ಜೊತೆಯಲ್ಲಿದ್ದೆ ನಂಬಲು ಕಷ್ಟವಾಗಿದೆ. ಇದು ಸತ್ಯ ಇದೆ ಸತ್ಯ ಇಲ್ಲ ಅಂತ ಹೇಳೋ ಸ್ಥಿತಿಯಲ್ಲಿ ಇಲ್ಲ. ಈ ಬಗ್ಗೆ ವರದಿ ಬಂದ ನಂತರ ವ್ಯಾಖ್ಯಾನ ಮಾಡುತ್ತೇನೆ. ವರದಿ ಬಂದ ನಂತರ ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ ತಪ್ಪಾಗಿದೆಯಾ ಇಲ್ಲವಾ ತನಿಖೆಯಾಗಲಿ…ಇವಾಗ ಆರ್ಟಿಪಿಷಿಯಲ್ ಇಂಟೆಲಿಜೆನ್ಸ್ ಮೂಲಕ ಏನೂ ಬೇಕಾದರೂ ಮಾಡಬಹುದು. ಹಾಗಾಗಿ ನಾನು ವರದಿ ಬರುವವರೆಗೂ ಯಾವುದೇ ಪರ ವಿರೋಧ ಹೇಳಿಕೆ ಕೊಡಲ್ಲ ಎಂದರು.
ಇನ್ನು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಮೇಲಿನ ಡಿನೋಟಿಫಿಕೇಷನ್ ಪ್ರಕರಣದ ವಿಚಾರಕ್ಕೆ ಚಿಕ್ಕಬಳ್ಳಾಪುರದಲ್ಲಿ ಸಂಸದ ಸುಧಾಕರ್ ರಾಜ್ಯ ಸರ್ಕಾರದ ನಡೆ ಖಂಡಿಸಿದ್ದಾರೆ. 15 ವರ್ಷದ ಹಳೆಯ ಪ್ರಕರಣ ಈಗ ತೆಗೆತಿರೋದು ದ್ವೇಷದ ರಾಜಕಾರಣ ಅಲ್ಲವಾ..? ಕೃಷ್ಣಬೈರೇಗೌಡರು ಮಹಾತ್ಮಗಾಂಧಿ ಆದ ಮೇಲೆ ಇವರೇ ಅಂತ ತಿಳಿದುಕೊಂಡವರೇ..ಕಾAಗ್ರೆಸ್ ಸರ್ಕಾರ ಹೊಸ ಸಂಪ್ರದಾಯವನ್ನ ಹೇಳಿಕೊಡುತ್ತಿದೆ. ಈ ಸರ್ಕಾರ ಶಾಶ್ವತವಾಗಿ ಯಾವಾಗಲೂ ಇರಲ್ಲ ಮತ್ತೆ ನಾವೇ ಅಧಿಕಾರಕ್ಕೆ ಬರ್ತೆವೆ. ರಾಜ್ಯದಲ್ಲಿ ನಾಳೆ ಚುನಾವಣೆ ನಡೆದರೂ ಬಿಜೆಪಿ ಜೆಡಿಎಸ್ ಮೈತ್ರಿ 150 ಸ್ಥಾನ ಗಳಿಸಲಿದೆ ಎಂದು ಭವಿಷ್ಯ ನುಡಿದರು.
ಇನ್ನು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದ ಡಾ ಕೆ ಸುಧಾಕರ್ ಇಬ್ಬರು ನಡುವೆ ಹೂ ಮಾರುಕಟ್ಟೆ ಜಾಗ ಹಾಗೂ ಮೆಡಿಕಲ್ ಕಾಲೇಜು ವಿಚಾರದಲ್ಲಿ ವಾಗ್ದಾಳಿ ಮುಂದುವರೆದಿದೆ. ಹೂ ಮಾರುಕಟ್ಟೆಗೆ ಹಿಂದೆ ಗುರ್ತಿಸಿದ್ದ ಜಾಗ ಸರಿ ಇಲ್ಲ ಅಂದಿದ್ದ ಸಚಿವ ಸುಧಾಕರ್ ಹೇಳಿದ್ದಾರೆ.. ಆದರೆ ಅದು ನಾನು ಗುರ್ತಿಸಿದ ಜಾಗ ಇಲ್ಲ..ರೈತರೇ ಒಪ್ಪಿದ್ದ ಜಾಗ…ಆದ್ರೆ ಈಗ ಹೂ ಮಾರುಕಟ್ಟೆಗೆ ಹೊಸದಾಗಿ ಬೇರೆ 20 ಎಕೆರೆ ತೋಟಗಾರಿಕಾ ಇಲಾಖಾ ಜಾಗ ಗುರ್ತಿಸಿದ್ದಾರೆ..ಆದ್ರೆ ಅದು ಮುಂದೆ ಡೈರಿ ವಿಸ್ತರಣಗೆ ಜಾಗ ಬೇಕಾಗುತ್ತದೆ…ನಾನು ಏನೇ ಮಾಡಿದ್ರೂ ಸಚಿವ ಸುಧಾಕರ್ ಗೆ ನಾನು ಗುರುತು ಮಾಡಿದ್ದ ಜಾಗ ಬೇಡ ಅನ್ನೋದು ಅವರ ರಾಜಕೀಯ ಎಂದರು.
ಇನ್ನು ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು. ಯಾರದೇ ಭಾವನೆಗಳಿಗೆ ಧಕ್ಕೆ ತಂದ್ರೂ ಯಾರಿಗೂ ಶೋಭೆ ತರುವುದಿಲ್ಲ. ಕೊಬ್ಬಿನಾಂಶ ಮಿಶ್ರಣ ಆಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆಗಿದ್ರೆ ಅವರ ಮೇಲೆ ಕಾನೂನು ಕ್ರಮ ಆಗಬೇಕು. ಮೊಟ್ಟೆಯೂ ಸೇವಿಸದ ಅನೇಕರು ಹಿಂದೂ ಧರ್ಮದಲ್ಲಿದ್ದಾರೆ, ಅವರ ಭಾವನೆಗಳಿಗೆ ಧಕ್ಕೆ ತರುವುದು ಸರಿ ಅಲ್ಲ, ಅವರ ಇಡೀ ಜೀವನ ಪಾವಿತ್ರತ್ಯತೆ ಇಟ್ಟುಕೊಂಡಿರುತ್ತಾರೆ. ಈ ರೀತಿ ಮಾಡಿದ್ರೆ ಅವರ ಪಾವಿತ್ರತೆಗೆ ಧಕ್ಕೆ ಆಗಲ್ವಾ..? ಮಾಡಿರೋವರ ಮೇಲೆ ಕಠಿಣ ಕ್ರಮ ಆಗಬೇಕು ಎಂದರು.