ಮಕ್ಕಳನ್ನು ವಿವಿಧ ಕೆಲಸಗಳಿಗೆ ಬಳಸುತ್ತಿರುವ ಆರೋಪ
1 min readಮಕ್ಕಳನ್ನು ವಿವಿಧ ಕೆಲಸಗಳಿಗೆ ಬಳಸುತ್ತಿರುವ ಆರೋಪ
ನೀರು ತರಿಸುವುದು, ಸ್ವಚ್ಛತೆ ಮಾಡುವುದಕ್ಕೆ ಬಳಕೆ ಆರೋಪ
ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡಿ ಮುಂದಿನ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಅಂತಾ ತಂದೆ ತಾಯಿ ಶಾಲೆಗೆ ಕಳಿಸಿದರೆ, ಶಾಲೆ ಸಮಯದಲ್ಲಿ ಮಕ್ಕಳ ಕೈಯಲ್ಲಿ ನೀರು ತರಿಸುವುದು, ಸ್ವಚ್ಛತೆ ಮಾಡುಸುವುದು ಹೀಗೆ ಹಲವು ಕೆಲಸಗಳಿಗೆ ಶಿಕ್ಷಕರು ಬಳಕೆ ಮಾಡಿಕೊಳ್ಳುತ್ತಿರುವ ಘಟನೆ ಗುಡಿಬಂಡೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಗುಡಿಬಂಡೆ ತಾಲೂಕಿನ ಮಿಂಚಾನಹಳ್ಳಿಯಲ್ಲಿ ಶಾಲಾ ಮಕ್ಕಳಿಂದ ನೀರು ತರಿಸುವುದೂ ಸೇರಿದಂತೆ ಹಲವು ಕೆಲಸಗಳಿಗೆ ಬಳಕೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ತಂದೆ ತಾಯಿ ಕಷ್ಟ ಪಟ್ಟು ಮಕ್ಕಳನ್ನ ಶಾಲೆಗೆ ಕಳಿಸಿದರೆ, ಆ ಶಾಲೆಯಿಂದ ಒಂದು ಕಿಲೋ ಮೀಟರ್ ದೂರ ಹೋಗಿ ನೀರು ತರುವ ಸ್ಥಿತಿ ಮಾಡುತ್ತಿದ್ದಾರೆ. ಸಿದ್ಧ ಕುಡಿಯುವ ನೀರಿನ ಘಟಕ ಇದ್ದರೂ ಯಾವುದೇ ಉಪಯೋಗಕ್ಕೆ ಬಾರದಂತಾಗಿದೆ.
ಶಾಲೆಯ ಸಮಿತಿ ಸದಸ್ಯರ ಖಾತೆಯಲ್ಲಿ ಹಣ ಇದೆಯೋ ಇಲ್ಲವೋ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅವರ ಖಾತೆಯಲ್ಲಿ ಹಣವಿದ್ದಲ್ಲಿ ಶಾಲೆಗೆ ಬೇಕಾಗಿರುವ ಎಲ್ಲಾ ಸೌಲಭ್ಯ ಮಾಡಬಹುದಾಗಿತ್ತು, ಮಕ್ಕಳು ನೀರು ತಂದು ಕುಡಿಯಬೇಕು, ಸ್ವಚ್ಛತೆ ನೋಡಿದರೆ ಮಕ್ಕಳು ಶಾಲೆಗೆ ಬಂದು ಸ್ವಚ್ಛತೆ ಮಾಡಬೇಕು ಎಂದು ರಾಜ್ಯ ಮಾಹಿತಿ ಹಕ್ಕುಗಳ ರಾಜ್ಯ ಉಪಾಧ್ಯಕ್ಷ ನರಸಿಂಹಗೌಡ ಆರೋಪ ಮಾಡಿದ್ದಾರೆ.