ಔರಾದ್ ತಹಸೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ
1 min readಔರಾದ್ ತಹಸೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ
ಕಚೇರಿಗೆ ಭೇಟಿ ನಿಡೀದ ಔರಾದ್ ಶಾಸಕ ಪ್ರಭು ಚವ್ಹಾಣ್
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ
ಬೀದರ್ ಜಿಲ್ಲೆಯ ಔರಾದ್ ತಹಸೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬ ಆರೋಪಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಪ್ರಭು ಚವ್ಹಾಣ್ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು.
ಬೀದರ್ ಜಿಲ್ಲೆಯ ಔರಾದ್ ತಹಸೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬ ಆರೋಪಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಪ್ರಭು ಚವ್ಹಾಣ್ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು.
ಔರಾದ್ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ದಲ್ಲಾಳಿಗಳೆ ಗುಮಾಸ್ತರಾಗಿ ಕಾರ್ಯ ನಿರ್ವಹಿಸುವುದು ಸಾಮಾನ್ಯವಾಗಿದೆ ಎಂದು ಸಾರ್ವಜನಿಕರು ಶಾಸಕರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಹಸೀಲ್ದಾರ್ ಕಚೇರಿಯಲ್ಲಿ ಯಾವುದೇ ಕೆಲಸವಾಗಬೇಕಾದರೆ ಗುಮಾಸ್ತರಿಗೆ ಬದಲಾಗಿ ದಲ್ಲಾಳಿಗಳನ್ನು ಭೇಟಿಯಾಗಬೇಕು. ಅಲ್ಲಿ ಗುಮಾಸ್ತ ಕುರ್ಚಿಯಲ್ಲಿ ಇರುವುದು ದಲ್ಲಾಳಿಗಳೆ ಹೊರತು, ಯಾವ ಗುಮಾಸ್ತ ಕಾಣುವುದಿಲ್ಲ. ಅವರು ಸಂಬಳ ಪಡೆಯುವದಕ್ಕೆ ಮಾತ್ರ ಸಿಮಿತ ಎಂಬAತಾಗಿದೆ. ಇದರಿಂದ ಬೇಸತ್ತ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ದಲ್ಲಾಳಿಗಳು ಹಣ ಪಡೆದು ನೇರವಾಗಿ ಭ್ರಷ್ಟಾಧಿಕಾರಿಗಳಿಂದ ಸಹಿ ಪಡೆದು ವಿವಾಹ ನೊಂದಣಿ ಪ್ರಮಾಣ ಪತ್ರ ನೀಡುತಿರುವುದನ್ನು ಸರೆ ಹಿಡಿದು ಶಾಸಕರ ಗಮನಕ್ಕೆ ತಂದಿದ್ದಾರೆ.
ಈ ವಿಚಾರ ತಿಳಿದ ಶಾಸಕ ಪ್ರಭು ಚವ್ಹಾಣ ಇಂದು ಕಚೇರಿಗೆ ಆಗಮಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡು ದೂರವಾಣಿ ಮೂಲಕ ಮೇಲಾಧಿಕಾರಿಗಳೊಂದಿಗೆ ಮಾತನಾಡಿ, ಕರ್ತವ್ಯಕ್ಕೆ ಗೈರು ಹಾಜರಾಗದ ಅಧಿಕಾರಿಗಳನ್ನು ಕೂಡಲೆ ಅಮಾನತು ಮಾಡುವಂತೆ ಹೇಳಿ, ಕಚೇರಿ ಆವರಣದಲ್ಲಿ ಕಸದ ರಾಶಿನೋಡಿ ತಸಿಲ್ದಾರರ ಮೇಲೆಯೂ ರೇಗಿದ ಶಾಸಕರು, ಕೂಡಲೆ ತೆರವು ಗೊಳಿಸುವಂತೆ ತಿಳಿಸಿದರು.
ಈ ವೇಳೆ ತಹಸೀಲ್ದಾರರು ಹತ್ತು ದಿನಗಳಲ್ಲಿ ಕಚೇರಿಯಲ್ಲಿ ಎಲ್ಲಾ ನ್ಯೂನತೆಗಳನ್ನು ಸರಿಪಡಿಸುವುದಾಗಿ ಕೇಳಿಕೊಂಡರು. ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಮುಂದಿನ ಹತ್ತು ದಿನಗಳಲ್ಲಿ ಕಚೇರಿಯ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಬೇಕು. ೧೧ನೇ ದಿನ ಬಂದು ಪರಿಶೀಲಿಸಲಾಗುವುದು ಎಂದು ಹೇಳುವ ಮೂಲಕ ಅಧಿಕಾರಿಗಳಿಗೆ ಶಾಸಕರು ಖಡಕ್ ಎಚ್ಚರಿಕೆ ನೀಡಿದರು.
ಹತ್ತು ದಿನಗಳಲ್ಲಿ ಅಧಿಕಾರಿಗಳು ತಮ್ಮ ತಪ್ಪುಗಳನ್ನು ಸರಿ ಪಡಿಸಿಕೊಂಡು ಕಚೇರಿ ಆವರಣವನ್ನು ಸ್ವಚ್ಚ ವಾಗಿ ಇಟ್ಟು ಕೊಂಡು ತಾಲೂಕಿನ ಜನತೆಗೆ ನ್ಯಾಯಯುತವಾಗಿ ಯಾವುದೆ ಭ್ರಷ್ಟಾಚಾರ ಇಲ್ಲದೆ ಕಾರ್ಯನಿರವಹಿಸುವಲ್ಲಿ ವಿಫಲವಾದಾಗ ಶಾಸಕರು ಹೇಳಿದಂತೆ ೧೧ನೇ ದಿನ ದಂದು ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಮುಂದಾಗುವರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.