ರಕ್ಷಣೆ ಮಾಡಬೇಕಾದವರಿಂದಲೇ ಹಲ್ಲೆ ಆರೋಪ
1 min readರಕ್ಷಣೆ ಮಾಡಬೇಕಾದವರಿಂದಲೇ ಹಲ್ಲೆ ಆರೋಪ
ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ವಿರುದ್ಧ ದೂರು
ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿಗಳಿಂದ ವರದಿ ಸಲ್ಲಿಕೆ
ಮಕ್ಕಳ ರಕ್ಷಣೆಗೆ ನಿಲ್ಲಬೇಕಾದವರಿಂದಲೇ ಮಕ್ಕಳ ಮೇಲೆ ಮೃಗೀಯ ವರ್ತನೆ ಮಾಡಿದ ಆಕರೋಪ ಕೇಳಿಬಂದಿದೆ. ಬಾಸುಂಡೆ ಬರುವಂತೆ ಬಾಲಕಿಯರನ್ನು ಥಳಿತದ ಆರೋಪ ಕೇಳಿಬಂದಿದ್ದು, ಸಂತ್ರಸ್ಥ ಬಾಲಕಿಯರಿಂದ ನ್ಯಾಯಮೂರ್ತಿಗಳಿಗೆ ದೂರು ನೀಡಲಾಗಿದೆ.
ಸರ್ಕಾರಿ ಬಾಲಕಿಯರ ರಕ್ಷಣಾ ಮಂದಿರದ ಅಧೀಕ್ಷಕರ ವಿರುದ್ಧ ನ್ಯಾಯಾಧೀಶರಿಗೆ ದೂರು ನೀಡಲಾಗಿದ್ದು, ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಘಟನೆ ನಡೆದಿದೆ. ಬಾಲಕೀಯರ ಬಾಲಮಂದಿರದ ಅಧೀಕ್ಷಕಿ ಮಮತಾ ಎಂಬುವರಿ0ದ ದೈಹಿಕ ದೌರ್ಜನ್ಯ, ಅವ್ಯಾಚ್ಯ ಶಬ್ದಗಳಿಂದ ನಿಂದನೆ ಆರೋಪ ಮಾಡಿ ದೂರು ಸಲ್ಲಿಸಲಾಗಿದೆ.
ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ನ್ಯಾಯಮೂರ್ತಿಗಳು ಭೇಟಿ ನೀಡಿದ ವೇಳೆ ನೊಂದ ಮಕ್ಕಳು ನ್ಯಾಯಾಧೀಶರ ಎದುರಿನಲ್ಲಿಯೇ ಅಳಲು ತೋಡಿಕೊಂಡಿದ್ದಾರೆ. ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ ನೀಡಿದ ದೂರಿನ ಅನ್ವಯ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಕರ್ತವ್ಯ ಲೋಪ ಎಸೆಗಿದ್ದ ಬಾಲಮಂದಿರದ ಅಧೀಕ್ಷಕಿ ಮಮತಾ
ಮಕ್ಕಳ ಹಕ್ಕುಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಅಧೀಕ್ಷಕಿ ಮಮತಾ ಹಾಗೂ ಸಹಾಯಕಿ ಸರಸ್ವತಮ್ಮ ವಿರುದ್ಧ ದೂರು ದಾಖಲಾಗಿತ್ತು.
ಮಹಿಳಾ ಪೊಲೀಸರಿಂದ ಕೃತ್ಯ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಆರೋಪಿಗಳ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ದೂರು ದಾಖಲಾದ ಹಿನ್ನೆಲೆಯಲ್ಲಿ ಅಧೀಕ್ಷಕಿ ಮಮತಾ ಅವರನ್ನು ಬಾಲಮಂದಿರದಿ0ದ ಎತ್ತಂಗಡಿ ಮಾಡಲಾಗಿದೆ. ಶಿಸ್ತುಕ್ರಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರಿಂದ ವರದಿ ಸಲ್ಲಿಕೆಯಾಗಿದ್ದು, ಆರೋಪಿತರ ವಿರುದ್ಧ ವಿಚಾರಣೆ ಚುರುಕುಗೊಂಡಿದೆ.